ಶಾಸಕ ಜಗದೀಶ ಗುಡಗುಂಟಿಗೆ ವಾಲ್ಮೀಕಿ ಸಮಾಜದಿಂದ ಘೇರಾವ್
MLA Jagadish Gudagunti gets ostracized by Valmiki Samaj
ಲೋಕದರ್ಶನ ವರದಿ
ಶಾಸಕ ಜಗದೀಶ ಗುಡಗುಂಟಿಗೆ ವಾಲ್ಮೀಕಿ ಸಮಾಜದಿಂದ ಘೇರಾವ್
ಲೋಕದರ್ಶನ ವರದಿ,
ಜಮಖಂಡಿ 08: ನಗರದ ತಾಲೂಕಾಡಳಿತ ಸಭಾ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯೋತ್ಸವ ಆಚರಣೆ ಸಮಯದಲ್ಲಿ ಶಾಸಕ ಜಗದೀಶ ಗುಡಗುಂಟಿ ಅವರಿಗೆ ವಾಲ್ಮೀಕಿ ಸಮಾಜದವರಿಂದ ಘೇರಾವ ಹಾಕಿದ ಪ್ರಸಂಗ ನಡೆಯಿತು.
ನಗರದ ತಾಲೂಕಾಡಳಿತ ಸಭಾ ಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯೋತ್ಸವ ಆಚರಣೆ ಸಮಯದಲ್ಲಿ ಮಹಾ ಕಾವ್ಯ ರಾಮಾಯಣ ಗ್ರಂಥವನ್ನು ರಚನೆ ಮಾಡಿದ ಮಹರ್ಷಿ ವಾಲ್ಮೀಕಿ ಅವರಿಗೆ ಶಾಸಕ ಜಗದೀಶ ಗುಡಗುಂಟಿ ಅವರು ಮಾಡಬಾರದ ಕೆಲಸ ಮಾಡುತ್ತಿದ್ದರು ಎಂದು ವಿವಾದಾತ್ಮಕ ಹೇಳಿಕೆಯನ್ನು ತಮ್ಮ ಭಾಷಣದಲ್ಲಿ ಹೇಳಿದ್ದಾರೆ ಎಂದು ವಾಲ್ಮೀಕಿ ಸಮಾಜದ ಮುಖಂಡರು ಶಾಸಕ ಜಗದೀಶ ಗುಡಗುಂಟಿ ಅವರಿಗೆ ಘೇರಾವ ಹಾಕಿದ್ದಾರೆ.
ವಾಲ್ಮೀಕಿ ಸಮಾಜದ ಮುಖಂಡ ಅಂಬರೀಶ ಗುಡದಾರ ಹಾಗೂ ಶಾಸಕ ಜಗದೀಶ ಗುಡಗುಂಟಿ ಅವರ ಮಧ್ಯ ಕೆಲಕಾಲ ಮಾತಿನ ಚಕುಮಕಿ ನಡೆಯಿತು. ಅದನ್ನು ತಡೆಯಲು ತಹಶೀಲ್ದಾರ ಅನೀಲ ಬಡಿಗೇರ ಹರಸಾಹಸ ಪಟ್ಟಿರುವ ಘಟನೆಯು ಜರುಗಿದೆ.
ಶಾಸಕ ಜಗದೀಶ ಗುಡಗುಂಟಿ ಮಹರ್ಷಿ ವಾಲ್ಮೀಕಿ ಅವರು ಮಾಡಬಾರದು ಕೆಲಸ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿ ಅವರಿಗೆ ಅವಮಾನ, ಅಪಮಾನ ಮಾಡಿದ್ದು ಅಲ್ಲದೇ ವಾಲ್ಮೀಕಿ ಸಮಾಜಕ್ಕೆ ನಿಂದನೆ ಮಾಡುತ್ತಿದ್ದಾರೆ. ಮಹಾ ಕಾವ್ಯ ರಾಮಾಯಣ ಗ್ರಂಥಕ್ಕೆ ಹಾಗೂ ಸಮಾಜಕ್ಕೆ ಅಪಮಾನ ಆಗುವ ಹಾಗೆ ಮಾತನಾಡಿದ್ದಾರೆ. ಇವರೊಬ್ಬರು ಜನಪ್ರತಿನಿಧಿಯಾಗಿ ಹೇಳಿಕೆಯನ್ನು ನೀಡುವ ಮೂಲಕ ಮುಂದಿನ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಮಹರ್ಷಿ ವಾಲ್ಮೀಕಿ ಅವರು ಬರೆದ ಗ್ರಂಥಕ್ಕೆ ಅಪಮಾನ ಹಾಗೂ ಅವಮಾನ ಮಾಡುವ ಹೇಳಿಕೆಯನ್ನು ನೀಡಿದ್ದಾರೆ. ಕೂಡಲೇ ನಮ್ಮ ಸಮಾಜಕ್ಕೆ ಕ್ಷಮೆಯಾಚಿಸಬೇಕು. ಇಲ್ಲದೆ ಹೋದರೆ ಶಾಸಕ ಜಗದೀಶ ಗುಡಗುಂಟಿ ಅವರ ವಿರುದ್ಧ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ವಾಲ್ಮೀಕಿ ಸಮಾಜದ ಮುಖಂಡರು, ಯುವಕರು, ಶಾಲಾ ಮಕ್ಕಳು ತಾಲೂಕಾಡಳಿತ ಮಟ್ಟದ ಅಧಿಕಾರಿಗಳು ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 