ವಿದ್ಯಾರ್ಥಿನಿಯರಿಗೆ ಶಿಕ್ಷಣದ ಹಿತದೃಷ್ಠಿಯಿಂದ ಪಿಯು ಕಾಲೇಜು ತರುವ ಭರವಸೆ ನೀಡಿದ ಶಾಸಕ ಜೆ.ಎನ್ ಗಣೇಶ

ವಿದ್ಯಾರ್ಥಿನಿಯರಿಗೆ ಶಿಕ್ಷಣದ ಹಿತದೃಷ್ಠಿಯಿಂದ ಪಿಯು ಕಾಲೇಜು ತರುವ ಭರವಸೆ ನೀಡಿದ ಶಾಸಕ ಜೆ.ಎನ್ ಗಣೇಶ MLA J.N. Ganesh promised to bring PU college in the interest of education for girl students

ಲೋಕದರ್ಶನ ವರದಿ 

ಕಂಪ್ಲಿ  07: ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗೆ ಉನ್ನತ ಮಟ್ಟದ ಶಿಕ್ಷಣದ ಹಿತದೃಷ್ಠಿಯಿಂದ ಮುಂದಿನ ದಿನದಲ್ಲಿ  ಶಕ್ತಿ ಮೀರಿ ದೇವಲಾಪುರಕ್ಕೆ ಪಿಯು ಕಾಲೇಜು ತರಲಾಗುವುದು ಎಂದು ಶಾಸಕ ಜೆ.ಎನ್‌.ಗಣೇಶ ಭರವಸೆ ನೀಡಿದರು. ತಾಲೂಕಿನ ದೇವಲಾಪುರ ಗ್ರಾಮದ ಕಣವಿಮಾರೆಮ್ಮ ದೇವಸ್ಥಾನಕ್ಕೆ ತೆರಳುವ ರಸ್ತೆ ಬದಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಮಂಗಳವಾರ ಉದ್ಘಾಟಿಸಿದ ನಂತರ ಸಮಾರಂಭದಲ್ಲಿ ಮಾತನಾಡಿ, ಪರಿಸರ, ಆರೋಗ್ಯದ ನಿಟ್ಟಿನಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ. ದೇವಲಾಪುರ ಅಭಿವೃದ್ಧಿಗೆ ಪ್ರತಿ ಹಂತದಲ್ಲಿ ಮೊದಲ ಆಧ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಕ್ಕಳು ಬಡತನದಲ್ಲೇ ಬಂದಿದ್ದಾರೆ. ಪೋಷಕರ ಕಷ್ಟಗಳನ್ನು ಅರಿತಿ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಹುದ್ದೆಗಳನ್ನು ಪಡೆಯಬೇಕು.

ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಳ್ಮೆ, ಸಹನೆಯಿಂದ ಮಕ್ಕಳು ಶಿಕ್ಷಣ ಪಡೆದುಕೊಳ್ಳಬೇಕು ಎಂದರು. ಸರ್ಕಾರಿ ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ದೇವರಮನೆ ಪಂಪಾಪತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು ಮುಖ್ಯಗುರು ಎಚ್‌.ಪಿ.ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ, ಇಲ್ಲಿ ಸುಸಜ್ಜಿತ ಪ್ರೌಢಶಾಲಾ ಕಟ್ಟಡ ನಿರ್ಮಾಣದಿಂದಾಗಿ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ. ಹತ್ತನೇ ತರಗತಿ ಮುಗಿಸಿದ ನಂತರ ವಿದ್ಯಾರ್ಥಿನಿಯರು ದೂರದ ಕಾಲೇಜುಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಶಾಸಕರು ಮುಂದಿನ ಅಧಿವೇಶನದಲ್ಲಿ ದೇವಲಾಪುರ ಪ್ರೌಢಶಾಲೆಯನ್ನು ಪಿಯು ಕಾಲೇಜ್ ಆಗಿ ಮೇಲ್ದರ್ಜೆಗೆ ಏರಿಸಬೇಕು. ಕಾಂಪೌಂಡ್ ಗೋಡೆ, ಹೈಮಾಸ್ ಲೈಟ್ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಆರ್‌ಸಿ ಮನೋಹರ, ಬಿಸಿ ಊಟ ಸಹಾಯಕ ನಿರ್ದೇಶಕ ಶಿವನಾಯ್ಕ, ಪ್ರೌಢಶಾಲಾ ನಂದ ಕಿಶೋರ, ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಿವರಾಜಕುಮಾರ, ಸೊಸೈಟಿ ಅಧ್ಯಕ್ಷ ಹನುಮಂತ, ಮುಖಂಡರಾದ ಈರಮ್ಮ, ನಾಗರಾಜ, ಜಿ.ಮರೇಗೌಡ, ಕೆ.ಶಿವಕುಮಾರ ಸುರೇಶಗೌಡ, ಉಮೇಶಗೌಡ, ಗೌಡ್ರು ಸಿದ್ದಯ್ಯ, ಭಾವಿಕಟ್ಟೆ ಉಮೇಶ, ಗಂಗಾಧರ, ದೇವರಮನೆ ಮಲ್ಲಿಕಾರ್ಜುನ, ಕೆ.ಬಸಪ್ಪ, ಉಪ್ಪಾರಹಳ್ಳಿ ಸತ್ಯಣ್ಣ, ಕುರಿ ಕರಿಬಸಪ್ಪ, ವಡ್ರು ಜಡೆಪ್ಪ, ಒಡೆಯರಸ್ವಾಮಿ, ಕುಂಬಾರ ವಿರುಪಾಕ್ಷಪ್ಪ, ಟಿ.ಎ.ರಮೇಶ, ಮಾರೇಶ, ಕಾಮಾಕ್ಷಿ, ಕುರಿ ಹನುಮಂತಮ್ಮ, ಗೊಲ್ಲರ ವೆಂಕಟೇಶ, ಎಸ್‌.ಅಂಜಿನಪ್ಪ, ಒಡೆಯರ್ ಕಲಾವತಿ, ನಾಗೇಶ್ವರಿ, ಪೂಜಪ್ಪ, ಚಂದ್ರ​‍್ಪ, ಕೆ.ಮಂಜುನಾಥ, ಪೋಷಕರು, ಶಾಲೆಯ ಸಿಬ್ಬಂದಿಗಳು, ಮಕ್ಕಳು ಪಾಲ್ಗೊಂಡಿದ್ದರು.