ಬಳ್ಳಾರಿ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಜೋಳ ಖರೀದಿಸಲು ಶಾಸಕ ಜೆ.ಎನ್‌.ಗಣೇಶ್ ಆಗ್ರಹ

ಬಳ್ಳಾರಿ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಜೋಳ ಖರೀದಿಸಲು ಶಾಸಕ ಜೆ.ಎನ್‌.ಗಣೇಶ್ ಆಗ್ರಹ MLA J.N. Ganesh demands full procurement of jowar in Ballari district

ಕಂಪ್ಲಿ 14 : ಬಳ್ಳಾರಿ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಎಲ್ಲಾ ಜೋಳವನ್ನು ಖರೀದಿಸಬೇಕೆಂದು ವಿಧಾನ ಮಂಡಲದ ಅಧಿವೇಶನದಲ್ಲಿ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್ ಆಗ್ರಹಿಸಿದರು. 

ಈ ಸದನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯನ್ನು ಸಂಬಂಧಿಸಿದ ಸಚಿವರಾದ ಶಿವಾನಂದ ಪಾಟೀಲರಿಗೆ ಕೇಳಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜೋಳವನ್ನು ಬೆಳಿದಿದ್ದಾರೆ, ಆದರೆ ಸರ್ಕಾರ ಜೋಳ ಖರೀದಿಗೆ ಕೆಲವು ನಿಯಮಗಳನ್ನು ರೂಪಿಸಿದ್ದು, ಇದರಿಂದ ರೈತರು ತಾವು ಬೆಳೆದ ಪೂರ್ಣ ಪ್ರಮಾಣದ ಜೋಳವನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದಾರೆಂದು ವಿವರಿಸಿದರು. 

ಈ ಬಗ್ಗೆ ಸಚಿವರಾದ ಶಿವಾನಂದ ಪಾಟೀಲರ ಪರವಾಗಿ ಪ್ರತಿಕ್ರಿಯಿಸಿದ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ  ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಜೋಳ ಖರೀದಿ ಕೇಂದ್ರಗಳಿಗೆ ತೆಲಂಗಾಣದಿಂದ ಜೋಳ ತಂದು ಮಾರಾಟ ಮಾಡುವುದು ಗಮನಕ್ಕೆ ಬಂದಿದೆ. ಇನ್ನು ಮೇಲೆ ಇದಕ್ಕೆ ಅವಕಾಶ ಕೊಡುವುದಿಲ್ಲ.ಇದಕ್ಕಾಗಿ ಕೃಷಿ, ಕಂದಾಯ ಇಲಾಖೆ ಜಂಟಿಯಾಗಿ ಭೌತಿಕವಾಗಿ ಪರೀಶೀಲಿಸಿ ಎಷ್ಟು ಎಕರೆಯಲ್ಲಿ ಜೋಳ ಬೆಳೆದಿದೆ. ವಾಸ್ತವದಲ್ಲಿ ಎಷ್ಟು ಇಳುವರಿ ಬರಲಿದೆ ಎನ್ನುವುದನ್ನು ಲೆಕ್ಕಹಾಕಿ ಹಳೆಯ ಜೋಳವನ್ನು ಕೇಂದ್ರಕ್ಕೆ ತರದಂತೆ ಯಾವಾಗ ಖರೀದಿ ನೋಂದಣಿ ಮಾಡಿಕೊಳ್ಳಬೇಕು ಎಂದು ನಿರ್ಧರಿಸುತ್ತೇವೆ.ರಾಜ್ಯದ ರೈತರಿಗೆ ಅನ್ಯಾಯವಾಗದಂತೆ ಬೇರೆ ಜೋಳ ಕೇಂದ್ರಕ್ಕೆ ಬಾರದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ. ಹಾಗೂ ಆಯಾ ಜಿಲ್ಲೆಗಳಲ್ಲಿ ರೈತರು ಬೆಳದಿರುವ ಎಲ್ಲಾ ಜೋಳವನ್ನು ಖರೀದಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ಅ.001ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಜೆ.ಎನ್‌.ಗಣೇಶ್ ಮಾತನಾಡಿದರು.