ರಸ್ತೆ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ
MLA Ganesh Hukkeri drive for road works
ಲೋಕದರ್ಶನ ವರದಿ
ಮಾಂಜರಿ 25: ಚಿಕ್ಕೋಡಿ ಸದಲಗ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಡಗೋಲ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1.30 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
ಅವರು ಬುಧವಾರ ರಂದು ಸಮೀಪದ ವಡಗೋಲ ಗ್ರಾಮದ ಬೀರಸಿದ್ದೇಶ್ವರ ದೇವಸ್ಥಾನದ ಹತ್ತಿರ ಸೋಮವಾರ ಸಮುದಾಯ ಭವನ ನಿರ್ಮಾಣ ಮತ್ತು ಮಲಿಕವಾಡ-ಮುತ್ತಲಕೋಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಬೀರಸಿದ್ದೇಶ್ವರ ಜಾಗೃತ ದೇವಸ್ಥಾನವಾಗಿದ್ದು ಸುತ್ತ ಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಆಗಮಿಸುತ್ತಾರೆ. ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಲು ಕಮೀಟಿಯವರು ವಿನಂತಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ 1 ಕೋಟಿ ರೂ. ಅಂದಾಜು ಮೊತ್ತದ ಕಾಮಗಾರಿಗೆ 1ನೇ ಕಂತಾಗಿ 50 ಲಕ್ಷರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು. ಮಲಿಕವಾಡದಿಂದ ಮುತ್ತಲಕೋಡಿವರೆಗೆ ರಸ್ತೆ ಹಾಳಾಗಿದ್ದು ಭಕ್ತರಿಗೆ ದೇವಸ್ಥಾನಕ್ಕೆ ಹೋಗಿ ಬರಲು ಹಾಗೂ ಸಾರ್ವಜನಿಕರಿಗೆ ಇತರೆ ಕೆಲಸ ಕಾರ್ಯಗಳಿಗೆ ಸಂಚರಿಸಲು ಅನುಕೂಲವಾಗುವ ದೃಷ್ಟಿಯಿಂದ ಮಲಿಕವಾಡ ಶರ್ಯತ್ತು ರಸ್ತೆಯಿಂದ ವಡಗೋಲ ರಾಯಣ್ಣ ಸರ್ಕಲ್ ಮುಖಾಂತರ ನಣದಿ-ನೇಜ ರಸ್ತೆಗೆ ಕೂಡುವ 2.6 ಕಿಮೀ ಉದ್ದದ ರಸ್ತೆ ಸುಧಾರಣೆಗೆ 80 ಲಕ್ಷ ರೂ. ಮಂಜೂರು ಮಾಡಲಾಗಿದೆ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ದೇವಸ್ಥಾನ ಕಮೀಟಿ ಅಧ್ಯಕ್ಷ ಮಲ್ಲಪ್ಪ ವಾಳಕೆ, ರಾಜು ಗುಂಡಕಲ್ಲೆ, ಅರುಣ ದೇಸಾಯಿ, ಸಂತೋಷ ನವಲೆ, ಸತೀಶ ಪಾಟೀಲ, ಪೀರಗೌಡ ಪಾಟೀಲ, ರವಿ ಗೋಸಾವಿ, ರಾಮಾ ಮಾರಾಪುರೆ, ಅಶೋಕ ಭಿವಷೆ, ರವಿ ಭತ್ತೆ, ಮಲಿಕವಾಡ ಗ್ರಾಮದ ಬಾಳು ಪಾಟೀಲ, ಸಂಬಾಜಿ ಪಾಟೀಲ, ಅಣ್ಣಾಸಾಹೇಬ ಇಂಗಳೆ, ಉಮೇಶ ಪಾಟೀಲ, ಅಪ್ಪು ಸುಟ್ಟಟ್ಟಿ, ಶಜಾಹಾನ ಜಮಾದಾರ, ಶಂಕರ ಭಾಗಾಯಿ, ಸುಭಾಷ ಕುರಬೆಟ್ಟೆ, ಮಹಾದೇವ ಖೋತ, ಚಂದು ಭತ್ತೆ ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 