ರಾಯಬಾಗದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಿ.ಎಂ. ಐಹೊಳೆ ಚಾಲನೆ
MLA DM Aihole launches development works in Raybagh
ರಾಯಬಾಗ 25: ಮತಕ್ಷೇತ್ರದ ವ್ಯಾಪ್ತಿಯ ಎಲ್ಲ ಪಟ್ಟಣ ಮತ್ತು ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು ರಸ್ತೆ, ಚರಂಡಿ, ಆಸ್ಪತ್ರೆ, ವಿದ್ಯುತ ದೀಪ ವ್ಯವಸ್ಥೆ ಮಾಡಿವುದರ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಗುರುವಾರ ಪಟ್ಟಣದ ಸಾಯಿನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಹತ್ತಿರ ನಗರೋತ್ಥಾನ ಯೋಜನೆಯಡಿ ಮಂಜೂರಾದ 60 ಲಕ್ಷ ರೂ. ಅನುದಾನದಲ್ಲಿ 2.5 ಲಕ್ಷ ಲೀಟರ ಸಾಮರ್ಥ್ಯದ ಮೇಲ್ಮಟ್ಟ ಜಲಸಂಗ್ರಹ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ತಾಲೂಕಿನ ಮೇಖಳಿ ಗ್ರಾಮದಲ್ಲಿ ಜಿ.ಪಂ.ಇಲಾಖೆಯಡಿ ಮಂಜೂರಾದ 20 ಲಕ್ಷ ರೂ. ಅನುದಾನದಲ್ಲಿ ಮೇಖಳಿ-ನಾಗರಮುನ್ನೋಳ್ಳಿ ರಸ್ತೆಯಿಂದ ಕುದುರೆ ತೋಟದ ಜನವಸತಿ ಪ್ರದೇಶ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು,
ನೀರಿನ ಸಮಸ್ಯೆಯಿಂದ ಬಳಲುತ್ತಿದ್ದ ರಾಯಬಾಗ ಪಟ್ಟಣದ ಸಾಯಿನಗರ ಜನರ ಬಹುದಿನಗಳ ಬೇಡಿಕೆಯಾಗಿದ್ದ 24ಸ7 ಕುಡಿಯುವ ನೀರಿನ ಯೋಜನೆ ಕನಸು ಶೀಘ್ರವೇ ನನಸು ಆಗಲಿದೆ. ಮುಂದಿನ ವರ್ಷ ಅಂತ್ಯದಲ್ಲಿ ಪ್ರತಿ ಮನೆಗಳಿಗೆ ನೀರು ದೊರಕಲಿದೆ ಎಂದು ಹೇಳಿದರು.ಜಿ.ಪಂ.ಎಇಇ ವಿ.ಆರ್.ಭಜಂತ್ರಿ, ಎಇ ಎಸ್.ಎಸ್.ಹೊಸಮನಿ, ಮುಖಂಡರಾದ ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೇಮಲಾಪೂರೆ, ಸದಾನಂದ ಹಳಿಂಗಳಿ, ಸಂಗಣ್ಣ ದತ್ತವಾಡೆ, ಮಜ್ಪಿದ ಡಾಂಗೆ. ಎ.ನಾಯಿಕ, ಬಸು ನಾಯಿಕ, ಸದಾಶಿವ ದಳವಾಯಿ, ಮಹೇಶ ಕರಮಡಿ, ಸುರೇಶ ಮಾಳಿ, ಜಿಯಾವುಲ್ಲ ಮುಲ್ಲಾ, ಪರಶುರಾಮ ಪೂಜೇರಿ, ಅನೀಲ ಕೊರವಿ, ಸಂಜು ಒಡೆಯರ, ರವಿ ನಾಯಿಕ ಶಿವು ನಾಯಿಕ, ಅನಿಲ ಕಾಂಬಳೆ, ಸತ್ಯಪ್ಪ ಕುದುರೆ, ಪುಂಡಲೀಕ ಮುತಾರೆ, ಸಂಜು ನಾಯಿಕ, ಸುನಿಲ ಭಂಡಾರೆ, ಮಹಾಂತೇಶ್ ಜಾನವೆಕರ, ಶಂಕ್ರಯ್ಯಾ ಹಿರೇಮಠ ಗ್ರಾಮಸ್ಥರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 