ತಿಕ್ಕಮ್ಮ ವೃಕ್ಷೊದ್ಯಾನಕ್ಕೆ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಭೇಟಿ: ಪರೀಶೀಲನೆ
MLA CS Nadagowda (Appaji) visit to Tikkamma Arboretum: Inspection
ಮುದ್ದೇಬಿಹಾಳ 17: ತಾಲೂಕಿನ ಬಿದರಕುಂದಿ ವ್ಯಾಪ್ತಿಯಲ್ಲಿ ಬರುವ ಸುಮಾರು 35 ಎಕರೆ ಸರಕಾರಿ ಜಮೀನಿನಲ್ಲಿ ಕೆ ಆರ್ ಡಿ ಐ ಎಲ್ ವತಿಯಿಂದ ಸುಮಾರು 2 ಕೋಟಿ ವೆಚ್ಚದಲ್ಲಿ ಸಾಲುಮರದ ತಿಕ್ಕಮ್ಮ ವೃಕ್ಷೊದ್ಯಾನ(ಟ್ರೀ ಪಾರ್ಕ) ಕಾಮಗಾರಿಗೆ ಸ್ಥಳಕ್ಕೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಬೇಟಿ ನೀಡಿ ಪರೀಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾವೇಲ್ಲ ಸದಾ ಆರೋಗ್ಯವಂತರಾಗಿ ಸುಖ ಶಾಂತಿಯಿಂದ ಬದುಕಬೇಕಾದರೇ ನಮ್ಮ ಸುತ್ತಲಿನ ಪರಿಸರ ಸ್ವಚ್ಛಂದವಾಗಿರಿಬೇಕು. ಈ ನಿಟ್ಟಿನಲ್ಲಿ ಗಿಡ ಮರಗಳನ್ನು ಬೆಳೆಸಬೇಕು ಇದರಿಂದ ಹೊರಸೂಸುವ ಉತ್ತಮ ಗಾಳಿಯಿಂದ ಮನುಷ್ಯನ ಆರೋಗ್ಯ ಸರಿಯಾಗಿರುವುತ್ತದೆ. ಇಂದು ವ್ಯಾಪಕ ವಾಹನಗಳ ಓಡಾಟದಿಂದಾಗಿ ಇಂಧನದಿಂದ ಹೊರ ಉಗುಳುವ ಹೊಗೆ ಗಾಳಿಯೊಂದಿಗೆ ಮಿಶ್ರಗೊಂಡು ಮನುಷ್ಯನ ಆರೋಗ್ಯದ ಧುಶ್ಪರಿಣಾಮ ಬೀರುತ್ತಿರುವುದರಿಂದ ಹಲವಾರು ರೋಗಗಳು ಹರಡಿ ಪ್ರಕೃತಿಯ ಹಾಗೂ ಮನುಷ್ಯನ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಪರಂಪರೆ ಉಳಿಸಿ, ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಈ ಯೋಜನೆಯು ನಗರದ ಹಸಿರು ಹೊದಿಕೆಯನ್ನು ಹೆಚ್ಚಿಸುವ ಪ್ರಯತ್ನವಾಗಿದೆ.
ಈ ಹಿನ್ನೆಲೆಯಲ್ಲಿ ನಾವು ನಮ್ಮ ಆರೋಗ್ಯವನ್ನು ಸುಂದವಾಗಿಟ್ಟುಕೊಳ್ಳಲು ಕಾಡು ಬೆಳೆಸುವುದು ಅತ್ಯವಶ್ಯಕವಾಗಿ ಎಂಬುದನ್ನು ಅರಿತು ಸರಕಾರಿ ಜಮೀನಿನಲ್ಲಿಯೇ ಎಲ್ಲ ಸೌಲಭ್ಯಗಳುಳ್ಳ ಮಾದರಿಯ ಹಾಗೂ ಪ್ರವಾಸಿ ತಾಣವಾಗುವಂತೆ ಮಾಡಲು ನಿರ್ಧರಿಸಿ ಸಧ್ಯ ಮುದ್ದೇಬಿಹಾಳ ಹಾಗೂ ಬಿದರಕುಂದಿ ವ್ಯಾಪ್ತಿಯಲ್ಲಿ ಬರುವ ಸುಮಾರು 35 ಎಕರೆ ಜಮೀನಿನಲ್ಲಿ ಟ್ರೀ ಪಾರ್ಕ ಕಾಮಗಾರಿಗೆ ಪ್ರಾರಂಭಿಸಲಾಗಿದೆ ಕಾಮಗಾರಿ ಭರದಿಂದ ಸಾಗಿದೆ ಇದಕ್ಕೆ ಸಾಲುಮರದ ತಿಮ್ಮಕ್ಕ ಎಂದು ಹೆಸರಿಡಲಾಗಿದೆ.
ಇಲ್ಲಿಗೆ ಬರುವ ಜನರಿಗೆ ಶೌಚಾಲಯ, ಸಂಚಾರಕ್ಕೆ ರಸ್ತೆಗಳು, ವಿವಿಧ ಬಗೆ ಬಗೆಯ ಓಷಧಿಯ ಗುಣವುಳ್ಳ ಗಿಡಗಳು, ಅಲಂಕಾರಿಕ ಹೂಗಳ ಗಿಡಗಳು, ಹಾಗೂ ಪರಿಸರಕ್ಕೆ ಉತ್ತಮಗೊಳಿಸುವ ಸುಂದರ ಬಳ್ಳಿಯ ಗಿಡಗಳನ್ನು ಬೆಳೆಸುವಂತೆ ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ಬರುವ ಸಪ್ಟೆಂಬರ 1ರಂದು ಅರಣ್ಯ ಸಚಿವರನ್ನು ಕರೆಯಿಸಿ ಉದ್ಘಾಟನೆಗೊಳಿಸಲಾಗುವುದು ಎಂದರು.
ರಾಯನಗೌಡ ತಾತರಡ್ಡಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಸ್ಥಾಯಿ ಸಮೀತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ವಾಯ್ ಎಚ್ ವಿಜಯಕರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ವಲಯ ಅರಣ್ಯಧಿಕಾರಿ ಬಸನಗೌಡ ಬಿರಾದಾರ, ಗೀರೀಶ ಹಲಕುಡೆ, ಸಂತೋಷ ಭಜಂತ್ರಿ, ಯಲಗೂರ್ಪ ಹಿರೇಕುರಬರ, ವಿನಾಯಕ ಗೊಂಬ್ಳೆಕರ, ಗೋಪಿ ಮಡಿವಾಳರ ಸೇರಿದಂತೆ ಹಲವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 