ವಾಹನಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೋಳ್ಳಿ ಶಾಸಕ ಬಸವರಾಜ ಶಿವಣ್ಣನವರ
MLA Basavaraja Shivanna should make proper use of vehicles
ಬ್ಯಾಡಗಿ 17: ಹಾವೇರಿ ಜಿಲ್ಲಾ ಪೋಲಿಸ ಬ್ಯಾಡಗಿ ವೃತ್ತ ಕಾರ್ಯಾಲಯಕ್ಕೆ ಬಸವರಾಜ ಶಿವಣ್ಣನವರ ಇವರ 2024.25 ರ ಶಾಸಕ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಬ್ಯಾಡಗಿ ಹಾಗೂ ಕಾಗಿನೆಲೆ ಪೋಲಿಸ್ ಠಾಣೆಗಳಿಗೆ ನೂತನವಾಗಿ ಪೋಲಿಸ್ ವಾಹನಗಳಿಗ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದವರು.ಸಾವರ್ಜನಿಕ ಕ್ಷೇತ್ರದಲ್ಲಿ ಪೋಲಿಸ್ ಇಲಾಖೆಯ ಅವಶ್ಯಕ. ಶಿಸ್ತಿನ ಕೆಲಸ ಪೋಲಿಸ್ ಇಲಾಖೆ ಸಿಬ್ಬಂದಿಗಳಿಂದಾಗ ಬೇಕು.ಸಾರ್ವಜನಿಕರ ಜೀವ ಮಾನ ಕಾಪಾಡುವ ಕೆಲಸ ಪೋಲಿಸರು ಮಾಡಬೇಕು. ಅಮಾಯಕರಿಗೆ ಅನ್ಯಾಯ ಆಗಬಾರದು ತಪ್ಪಿತಸ್ಥರಿಗೆ ಕಠಿಣ ಕ್ರಮ ಕೈಗೊಳ್ಳಬೇಕು ಅಮಾಯಕರಿಗೆ ನ್ಯಾಯ ಒದಗಿಸುವ ಕೆಲಸ ಪೋಲಿಸರು ಮಾಡಬೇಕು.
ಮುಂದಿನ ದಿನದಲ್ಲಿ ಇನ್ನೂಂದು ವಾಹನ ಕೊಡಿಸುತ್ತೆನೆ ಎಂದು ಭರವಸೆ ನೀಡಿದರು. ಪಟ್ಟಣದಲ್ಲಿ 10 ಲಕ್ಷ ಹಣ ಸಿ ಸಿ ಕ್ಯಾಮೆರಾ ಅಳವಡಿಕೆ ಕೊಡುತ್ತೇನೆ ಎಂದರು ಒಟ್ಟಾಗಿ ಶಾಸಕರ ಅನುದಾನದಲ್ಲಿ ಬಂದ ವಾಹನವನ್ನು ಸದುಪಯೋಗ ಪಡಿಸಿಕೋಳ್ಳಲು ಸೂಚಿಸಿದರು ಮುಂದಿನ ದಿನ ಇಲಾಖೆಗೆ ಇನ್ನೂ ಹೆಚ್ಚಿನ ಅನುದಾನ ನೀಡುತ್ತೆನೆ ಎಂದು ಹೇಳಿದರು.ಜಿಲ್ಲಾ ವರಿಷ್ಠಾಧಿಕಾರಿ ಯಶೋಧಾ ವಂಟಗೊಡೆ ಮಾತನಾಡಿ ನಮ್ಮ ಇಲಾಖೆಗೆ ಎರಡು ವಾಹನಗಳು ಕೊಟ್ಟಿದ್ದು ನಮಗೆ ಖುಷಿ ತಂದಿದೆ. ಬ್ಯಾಡಗಿ ಪಟ್ಟಣ ಕಮರ್ಷಿಯದ ಎರಿಯಾ ಆಗಿದ್ದು ಪಟ್ಟಣದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಲು ಈ ಹಿಂದೆ ನಾನು ತಮಗೆ ಕೇಳಿಧ್ದೆ ನೀವು ಮುಂದಿನ ದಿನಗಳಲ್ಲಿ ಅನುದಾನ ಕೊಟ್ಟು ಬೇರೆ ತಾಲೂಕಿಗೆ ಮಾದರಿಯಾಗುವ ಕೆಲಸ ಮಾಡಿ.
ಕಾಗಿನೆಲೆ ಸರ್ಕಲಗೆ ಇನ್ನೂಂದು ವಾಹನ ಕೊಡುವಂತೆ ಬೇಡಿಕೆ ಇಟ್ಟರು.ಕಾರ್ಯಕ್ರಮದಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಯಶೋಧಾ ವಂಟಗೊಡೆ.ಡಿ ವೈ ಎಸ್ ಪಿ ಗೀರಿಶ ತಲಕಟ್ಟಿ.ಸಿಪಿಐ ಎಂ ಡಿ ಚಿಕ್ಕಣನವರ . ಪಿಎಸ್ಐ ಭಾರತಿ ಕುರಿ.ಕಾಗಿನೆಲೆ ಪಿ ಎಸ್ ಐ ಎಸ್ ಡಿ ಸಾಗರ. ಪಿ ಎಸ್ ಐ ನಿಂಗೇನಹಳ್ಳಿ. ಇಲಾಖೆಯ ಸಿಬ್ಬಂದಿಗಳಾದ ಬಸಣ್ಣ ಪೂಜಾರ.ಬೀರ್ಪ ಹುಲಿಹಳ್ಳಿ .ದಾನಪ್ಪ ಚೂರಿ.ಶಿವನಗೌಡ ಪಾಟೀಲ.ನಾಗರಾಜ ಆನ್ವೇರಿ.ರಮೇಶ ಸುತ್ತ ಕೋಟಿ.ಬೀರ್ಪ ಬಣಕಾರ್.ಡಾ.ಸೌಧಾಗರ.ಮುನ್ನಾ ಎರೇಸಿಮಿ.ಹಾಗೂ ಇಲಾಖೆಯ ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 