ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್ ಅಲಂಕಾರಿಕ ಬೀದಿ ದೀಪಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ
MLA Basavaraja Shivanna launches electric decorative street lights installed on roads
ಬ್ಯಾಡಗಿ 02 : ಪಟ್ಟಣದಿಂದ ಕಾಕೋಳಕ್ಕೆ ತೆರಳಲಿರುವ ರಸ್ತೆಯಲ್ಲಿ ಅಳವಡಿಸಿರುವ ವಿದ್ಯುತ್ ಅಲಂಕಾರಿಕ ಬೀದಿ ದೀಪಗಳಿಗೆ ಶಾಸಕ ಬಸವರಾಜ ಶಿವಣ್ಣನವರ ಚಾಲನೆ ನೀಡಿದರು.ಸ್ಥಳೀಯ ಲೋಕೋಪಯೋಗಿ ಇಲಾಖೆಯ ವತಿಯಿಂದ ಜಿಲ್ಲಾ ಮುಖ್ಯ ರಸ್ತೆ ನಿರ್ವಹಣೆ ಯೋಜನೆಯ ಲೆಕ್ಕ ಶಿರ್ಷಿಕೆ ಯೋಜನೆಯಡಿಯಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ಹಾವೇರಿಯಗಣೇಶ ಎಲೆಕ್ಟ್ರಿಕ್ ವಿದ್ಯುತ ಗುತ್ತಿಗೆದಾರ ಗಂಗಾಧರ ಅವರು ಕೈಕೊಂಡಿರುವ ಕಾಮಗಾರಿಗೆ ಚಾಲನೆ ನೀಡಿ ಶಾಸಕರು ಮಾತನಾಡಿದರು.ಪಟ್ಟಣದಲ್ಲಿ ಅಳವಡಿಸಲಾಗಿರುವ ಅಲಂಕಾರಿಕ ವಿದ್ಯುತ್ ದೀಪಗಳು ಪಟ್ಟಣದ ಜನರನ್ನು ಆಕರ್ಷಿಸುತ್ತವೆ. ನಮ್ಮ ನೆರೆಹೊರೆಯ ಗ್ರಾಮದವರನ್ನು ಕೂಡಾ ಆಕರ್ಷಿಸಿ ಸಂತುಷ್ಟಗೊಳಿಸುತ್ತಲಿವೆ. ಈ ಬೀದಿ ದೀಪಗಳು ಜನರನ್ನು ಸುರಕ್ಷಿತವಾಗಿಡಲು ಸಹಕಾರ ನೀಡಲಿವೆ. ಸಣ್ಣ ಪುಟ್ಟ ಅಂಗಡಿ ವ್ಯಾಪಾರಸ್ಥರಿಗೂ ಮತ್ತು ಸಂಚರಿಸುವ ಸವಾರರಿಗೂ ಸಹಕಾರ ದೊರೆಯಲಿವೆ.ದೊಡ್ಡ ದೊಡ್ಡ ನಗರಗಳಲ್ಲಿ ಸಂಚರಿಸುವ ಅನುಭವ ಉಂಟಾಗುತ್ತಿದೆ. ಕಳ್ಳತನಗಳಂತ ದಂಧೆಗಳು ಹಾಗೂ ಇತರೇ ವ್ಯವಹಾರಗಳನ್ನು ಕೂಡಾ ಬೀದಿ ದೀಪಗಳ ಬೆಳಕಿನಿಂದ ಕಡಿಮೆ ಮಾಡಲಿವೆ ಎಂದರಲ್ಲದೇ ಈ ಬೀದಿ ದೀಪಗಳ ಪ್ರಯೋಜನವನ್ನು ಪಟ್ಟಣದ ಜನತೆ ಸದುಪಯೋಗ ಮಾಡಿಕೊಳ್ಳಬೇಕೆಂದರು.ಇಂತಹ ಅಲಂಕಾರಿಕ ಬೀದಿ ದೀಪಗಳನ್ನು ಪಟ್ಟಣದ ಇತರೇ ರಸ್ತೆಗಳಿಗೂ ಅಳವಡಿಸುವ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದೆಂದು ಭರವಸೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಇಂಜೀನೀಯರ್ ಆಂಜನೇಯ, ಕಾಂಗ್ರೇಸ್ ಪಕ್ಷದ ಅಧ್ಯಕ್ಷ ದಾನಪ್ಪ ಚೂರಿ, ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಸಿಮಿ,ಧುರೀಣರಾದ ಬೀರಣ್ಣ ಬಣಕಾರ, ಡಿ.ಎಚ್.ಬುಡ್ಡನಗೌಡ್ರ,ರಾಮಣ್ಣ ಕೋಡಿಹಳ್ಳಿ, ಬಸಣ್ಣ ಚತ್ರದ, ದುರ್ಗೇಶ ಗೋಣೆಮ್ಮನವರ, ಮಜೀದ್ ಮುಲ್ಲಾ, ಹನುಮಂತಪ್ಪ ಬಂಬಲಾಪುರ, ಗೀತಾ ರಾಯ್ಕರ, ಸಿ.ಎಚ್.ಮೋಹನಕುಮಾರ ಗುತ್ತಿಗೆದಾರ ಗಂಗಾಧರ ಸೇರಿದಂತೆ ಇತರರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 