ಮಾದರಿ ಸಭಾಭವನ ನಿರ್ಮಾಣಕ್ಕೆ ಶಾಸಕ ಬಸವರಾಜ ಶಿವಣ್ಣನವರ ಅಡಿಗಲ್ಲು
MLA Basavaraja Shivanna laid the foundation stone for the construction of a model assembly hall
ಬ್ಯಾಡಗಿ 02 : ತಾಲೂಕಾ ಪಂಚಾಯತ್ ಕಾರ್ಯಾಲಯದಲ್ಲಿ ನೌಕರರಿಗೆ ಹಾಗೂ ಕೆಡಿಪಿ ಸದಸ್ಯರಿಗೆ ಸಭೆ ನಡೆಸಲು ಕಟ್ಟಡದ ಕೊರೆತೆ ಇರುವ ವಿವಿಧ ಕಟ್ಟಡಗಳನ್ನು ಒದಗಿಸಲು ಶಾಸಕ ಬಸವರಾಜ ಶಿವಣ್ಣನವರ ಇಂದು ಅಡಿಗಲ್ಲು ಸಮಾರಂಭ ನೆರವೇರಿಸಿದರು.
ಮಂಗಳವಾರ ಅವರು ನಿರ್ಮಿತಿ ಕೇಂದ್ರದ ವತಿಯಿಂದ ತಾ.ಪಂ.ಕಾರ್ಯಾಲಯದ ಒಂದನೇ ಮಹಡಿ ಕಟ್ಟಡದ ಅಂದಾಜು 1.25 ಕೋಟಿ ರೂ.ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಈ ಕಟ್ಟಡದಲ್ಲಿ ತಾ.ಪಂ.ಸಭೆ ಹಾಗೂ ತ್ರೈಮಾಸಿಕ ಸಭೆಗಳು ಸೇರಿದಂತೆ ಇತರೇ ಸಭೆಗಳು ನಡೆಯಲು ಉತ್ತಮ ಕಟ್ಟಡಗಳ ಅವಶ್ಯಕತೆ ಇದ್ದುದನ್ನು ಮನಗಂಡು ಈ ಕಟ್ಟಡ ಕಟ್ಟಲು ಹಣ ಮಂಜೂರಿ ಮಾಡಿ ಕೊಂಡು ಬಂದಿರುವುದಾಗಿ ಹೇಳಿದ ಅವರು ಈಗ ಕಾರ್ಯನಿರ್ವಹಿಸುತ್ತಿರುವ ತಾ.ಪಂ.ಕಾರ್ಯಾಲಯದ ಕಟ್ಟಡಕ್ಕೂ ನಾನು ಈ ಹಿಂದೆ 2013.ರಿಂದ18 ರಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ ಹಣ ಮಂಜೂರು ಮಾಡಿಸಿ ತಂದಿರುವ ವಿಷಯವನ್ನು ಸ್ಮರಿಸಿದರಲ್ಲದೇಜಿಲ್ಲೆಯಲ್ಲಿಯೇ ಮಾದರಿ ಸಭಾಭವನ ನಿರ್ಮಿಸುವಂತೆ ಗುಣಮಟ್ಟದ ಕಟ್ಟಡ ಕಾಮಗಾರಿ ಮಾಡಲು ಜಿಲ್ಲೆಯಲ್ಲೆ ಮಾದರಿ ಆಗುವ ರೀತಿ ನಿರ್ಮಿಸಲು ಇಲಾಖೆಗೆ ಸೂಚಿಸಿದರು. ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಮಲ್ಲಿಕಾರ್ಜುನ ಮಾತನಾಡಿ ಈ ಭಾಗದ ಜನ ಮೆಚ್ಚಿನ ಶಾಸಕರಾಗಿರುವ ಬಸವರಾಜ ಶಿವಣ್ಣನವರ ಅವರ ಪ್ರಯತ್ನದಿಂದ ಈ ಭವ್ಯ ಕಟ್ಟಡ ಕಾಮಗಾರಿಗಳಿಗೆ 1.25 ಕೋಟಿ ಅನುದಾನಲ್ಲಿ 50, ಲಕ್ಷ ಬಿಡುಗಡೆಗೊಂಡಿದ್ದು ಸಂತಸ ತಂದಿದೆ.
ಉತ್ತಮ ಕಟ್ಟಡ ನಿರ್ಮಿಸಲಾಗುವುದೆಂದರು.ಕಾರ್ಯಕ್ರಮದಲ್ಲಿ ಬಿರ್ಪ ಬಣಕಾರ, ರುದ್ರಣ್ಣ ಕೊಂಕಣ, ಸುರೇಶ ಹುಳುಬುತ್ತಿ, ರಮೇಶ ಸುತ್ತಕೋಟಿ, ಅಬ್ದುಲ್ ಮುನಾಫ್ ಎರೇಸಿಮಿ.ವೀರನಗೌಡ ಮಲ್ಲಾಡದ, ಪ್ರಮೀಳಾ ಜೋಗುಳ, ನೀಲಗಿರಿಯಪ್ಪ ಕಾಕೋಳ, ,ಖಾದರಸಾಬ ದೊಡ್ಮನಿ,ಡಿ ಎಚ್ ಬುಡ್ಡನಗೌಡ, ದುರ್ಗೇಶ ಗೋಣೆಮ್ಮನವರ, ನ್ಯಾಯವಾದಿಗಳಾದ ಬಸವರಾಜ ಬನ್ನಿಹಟ್ಟಿ, ಬಸವರಾಜ್ ಬಳ್ಳಾರಿ, ಮಾಲತೇಶ ಶಿಡ್ಲಣ್ಣನವರ, ಶ್ರೀನಿವಾಸ ಕುರಕುಂದಿ,ಮಾರುತಿ ಅಚ್ಚಿಗೇರಿ,ಗುಡ್ಡಪ್ಪ ಬನ್ನಿಹಳ್ಳಿ, ಜಿಲ್ಲಾ ನಿರ್ಮಿತಿ ಕೇಂದ್ರ ಯೋಜನಾಧಿಕಾರಿ ತಿಮ್ಮೆಶ್ ಕುಮಾರ್, ನಿರ್ಮಿತಿ ಕೇಂದ್ರದ ಅಧಿಕಾರಿ ಶಾಂತಕುಮಾರ, ಸೇರಿದಂತೆ ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 