ಪಟ್ಟಣದ ಅಭಿವೃದ್ಧಿಗಾಗಿ ಸದಾ ಸಿದ್ದ ಶಾಸಕ ಬಸವರಾಜ್ ಶಿವಣ್ಣನವರ್ ಭರವಸೆ

ಪಟ್ಟಣದ ಅಭಿವೃದ್ಧಿಗಾಗಿ ಸದಾ ಸಿದ್ದ ಶಾಸಕ ಬಸವರಾಜ್ ಶಿವಣ್ಣನವರ್ ಭರವಸೆ         MLA Basavaraj Shivannanavar is always ready for the development of the town.

ಬ್ಯಾಡಗಿ 22: ಪಟ್ಟಣಕ್ಕೆ ಬೇಕಾಗಿರುವ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡುವುದಾಗಿ ಶಾಸಕ ಬಸವರಾಜ್ ಶಿವಣ್ಣನವರು ಭರವಸೆ ನೀಡಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದವರು ಈಗಾಗಲೇ ಮುಖ್ಯಮಂತ್ರಿ ಅವರ ಬಳಿ ಅನುದಾನದ ಬಗ್ಗೆ ಚರ್ಚಿಸಿದ್ದು ಅನುದಾನ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ ಅನುದಾನ ಬಿಡುಗಡೆಯಾದ ಬಳಿಕ ಪಟ್ಟಣದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು. ಕಳೆದ ಎರಡು ವರ್ಷದಿಂದ ಶಿವಪುರ ಬಡಾವಣೆಯ ಡೀಪೂ ರಸ್ತೆಯಲ್ಲಿ ಇರುವ ಮನೆಯಲ್ಲಿ ಕುಡಿಯುವ  ನೀರಿನ ಕಲೆಕ್ಷನ್ ಇದ್ದು ಕಳೆದ ಎರಡು ವರ್ಷಗಳಿಂದ ನೀರು ಪೂರೈಕೆ  ಇಲ್ಲ  ಆದರೂ ಅವರು ನೀರಿನ ಕರ ತುಂಬುತ್ತಾರೆ.  

ಈಗಾಗಲೇ ಹಲವುಬಾರಿ ಇದನ್ನು ಅಧಿಕಾರಿಗಳಿಗೆ ಗಮನಕ್ಕೆ ತಂದಿರುತ್ತೇನೆ ಆದರೂ ಪ್ರಯೋಜನವಾಗಿಲ್ಲ ಕೂಡಲೇ ಸರಿಪಡಿಸಿ. ಶಂಕರ್ ಕುಸ್ಗೂರ ಪುರಸಭೆ ಸದಸ್ಯ.ಉದ್ಯಾನವನಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ. ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಇರುವ ಉದ್ಯಾನವನಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದು ವಾಯು ಸಾರ್ವಜನಿಕರಿಗೆ ವಾಯುವಿಹಾರಕ್ಕೆ ತೊಂದರೆಯಾಗುತ್ತಿದೆ ಅಂತಹ ಉದ್ಯಾನವನಗಳನ್ನು ಸ್ವಚ್ಛಗೊಳಿಸಿ ಅವುಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ ಎಂದು ಪುರಸಭೆ ಸದಸ್ಯ ಬಸವರಾಜ್ ಚತ್ರದ ಹೇಳಿದರು. ಮಾನ್ಯ ಪೋಲಿಸ್ ವೃತ್ತ  ನೀರೀಕ್ಷಕರು ಪತ್ರವನ್ನು ನೀಡಿದ್ದೂ  ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಾಣಗೊಳ್ಳುವ ಕಟ್ಟಡಗಳಿಗೆ ಕಡ್ಡಾಯವಾಗಿ ಸಿ ಸಿ ಕ್ಯಾಮೆರಾ ಗಳನ್ನು ಅಳವಡಿಸಲು ಕಡ್ಡಾಯ ಇದರ ಬಗ್ಗೆ ಪಟ್ಟಣದಲ್ಲಿ ಇತ್ತೀಚೆಗೆ ಹಲವಾರು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು  ಹೊಸದಾಗಿ ಮನೆ ನಿರ್ಮಿಸಿಕೊಳ್ಳವ ಮಾಲೀಕರು ತಮ್ಮ ಸ್ವಂತ ಹಢದಲ್ಲಿ ಕ್ಯಾಮೆರಾ ಅಳವಡಿಕೆ ಕಡ್ಡಾಯಗೊಳಿಸಬೇಕು ಎಂದು ಪುರಸಭೆ ವತಿಯಿಂದ ಅನುಮತಿ ಕೊಡುವ ಸಮಯದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ 30 ಲಕ್ಷಕ್ಕೂ ಹೆಚ್ಚಿನ ಮೊತ್ತದ ಮನೆಗಳಿಗೆ ಕಡ್ಡಾಯಗೊಳಿಸುವಂತೆ ಪುರಸಭೆ ಉಪಾಧ್ಯಕ್ಷ ಸುಭಾಷ್ ಮಾಳಗಿಯವರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರೀಯಿಸಿದ ಶಾಸಕರು ಇದೊಂದು ಉತ್ತಮ ಸಲಹೆ ಆದರೆ ಕಡ್ಡಾಯವಲ್ಲ.  

ಆಯಾ ಮನೆಯವರ ಮಾಲೀಕರ ಸಂಬಂಧಪಟ್ಟ ವಿಚಾರವಾಗಿದೆ ಇದನ್ನು ನಿಮ್ಮ ಪುರಸಭೆಯ ಸದಸ್ಯರೇ ತೀರ್ಮಾನ ತೆಗೆದುಕೊಳ್ಳಬೇಕೆಂದರು.ಆಕ್ಷೇಪ.ಹೊಸ ದಾಗಿ ನಿರ್ಮಿಸಿ ಕೊಳ್ಳುವ ಮಾಲೀಕರು ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯ ಎನ್ನುವ ಪುರಸಭೆಯ ಒತ್ತಾಯ ಸರಿಯಲ್ಲ ಇದು ಆ ಮನೆಯ ಮಾಲೀಕರಿಗೆ ಸಂಬಂಧಪಟ್ಟ ವಿಚಾರ ಇದಕ್ಕೆ ಒತ್ತಾಯ ಮಾಡಬಾರದೆಂದು ಪುರಸಭೆ ಸದಸ್ಯ ಹನುಮಂತಪ್ಪ ಮ್ಯಾಗೇರಿ ಸೂಚಿಸಿದರು ಇದಕ್ಕೆ ನಮ್ಮದು ಸಹಮತವಿಲ್ಲ ಎಂದು ಹೇಳಿದರು. 

ಪುರಸಭೆಯ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಪ್ಪ ಗೋಳ ಸಭೆಯ  ಮಂಡಿಸುವ ವಿಷಯಗಳ ಬಗ್ಗೆ ಸೂಚಿಸಿದರು ಕಳೆದ ಸಾಮಾನ್ಯ ಸಭೆಯ ಠವರಾವುಗಳನ್ನು ಓದಿ ದೃಢೀಕರಿಸಲಾಯಿತು ಮತ್ತು ಜುಲೈ ಆಗಸ್ಟ್‌ ತಿಂಗಳಿನ ಜಮಾ ಕರ್ಚಿನ ಮಂಜೂರಾತಿಯನ್ನು ಪಡೆದುಕೊಂಡರು. 2025 26ನೇ ಸಾಲಿನ ಜಿಛಿ ಮುಕ್ತ ನಿಧಿ ಮತ್ತು ಪುರಸಭೆ ನಿಧಿ ಅಡಿ ಶೇಕಡಾ 24..10 ಶೇಕಡ 5.25 ಶೇಕಡ ಸೌಲಭ್ಯಗಳಿಗೆ ಬಂದ ಅರ್ಜಿಗಳನ್ನು ಅರ್ಹ ಫಲಾನುಭವಿಗಳನ್ನು ಸರ್ವ ಸದಸ್ಯರ ಸಮ್ಮತಿಯ ಮೇರೆಗೆ ಆಯ್ಕೆ ಮಾಡಲಾಯಿತು. ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ರಸ್ತೆಗಳ ನಾಮಕರಣ ಬಡಾವಣೆ ನಾಮಕರಣ ಮಾಡುವ ಬಗ್ಗೆ ಸರ್ವಾನುಮತದಿಂದ ಸೂಚಿಸಿದರು. 1 

5ನೇ ಹಣಕಾಸಿನಲ್ಲಿ ಮೂಲ ಅನುದಾನದ ಕಾಮಗಾರಿದರವನ್ನು ಮಂಜೂರಾತಿ ನೀಡಲಾಯಿತು. 2025. 26ರ ಅವಧಿಗೆ ಕರೆಯಲಾದ ನೀರು ಸರಬರಾಜು ಸಿಬ್ಬಂದಿಗಳ ಟೆಂಡರ್  ಮೊತ್ತವನ್ನು ಮಂಜೂರಾತಿ ನೀಡಲಾಯಿತು ಮತ್ತು 2025- 26ರ ಡಾಟಾ ಎಂಟ್ರಿ ಆಪರೇಟಗಳನ್ನು ತೆಗೆದುಕೊಳ್ಳುವಂತೆ ಮಂಜೂರಾತಿ ನೀಡಲಾಯಿತು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ದುರಸ್ತಿ ಕಾಮಗಾರಿ ಮಾಡಲು ಸಮ್ಮತಿಸಲಾಯಿತು. ಅಮೃತ ಮಿತ್ರ ಯೋಜನೆಯಡಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳ ಗೇಟ್ ಮತ್ತು ಪೆನ್ನಿಂಗ ರಿಪೇರಿಯನ್ನು ಶೀಘ್ರವೇ ಮಾಡಲು ಸೂಚಿಸಲಾಯಿತು.  

ಪುರಸಭೆ ಆವಣದಲ್ಲಿರುವ ಗ್ರಂಥಾಲಯ ಕಟ್ಟಡವು ಬಹಳ ಹಳೆಯದಾಗಿದ್ದು ಕಟ್ಟಡವನ್ನು ತೆರೆವುಗೊಳಿಸಿ ಹೊಸದಾಗಿ ಗ್ರಂಥಾಲಯ ಕಟ್ಟಡ ಮತ್ತು ಆರೋಗ್ಯ ವಿಭಾಗಕ್ಕೆ ಹೊಸ ಕಟ್ಟಡವನ್ನು ನಿರ್ಮಿಸಲು ಸೂಚಿಸಲಾಯಿತು, ವಾಹನಗಳ ಪಾರ್ಕ್‌ ಸಂಬಂಧ ಪುರಸಭೆಯ ಕಂದಾಯ ವಿಭಾಗದ ಮುಂದಿರುವ ಆವರಣಕ್ಕೆ ಫೆವರ್ಸ್‌ ಅಳವಡಿಸಲು ಸೂಚಿಸಲಾಯಿತು. ಪುರಸಭೆಯಲ್ಲಿ ಕೆಟ್ಟು ನಿಂತಿರುವ ಹಳೆಯ ಜೀಪು ಮತ್ತು ಎರಡು ಟ್ರ್ಯಕ್ಟರ್ ಸ್ಕ್ರಾಪ್ ಮಾಡಲು ಸೂಚಿಸಲಾಯಿತು. ಮತ್ತು ವಿವಿಧ ವಾರ್ಡ್ಗಳ ಸದಸ್ಯರು ಕೊಟ್ಟ ಅರ್ಜಿಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ್‌.ಫಕೀರಮ್ಮ ಚಲವಾದಿ. ಸರೋಜಾ ಉಳ್ಳಾಗಡ್ಡಿ ಗಾಯತ್ರಿ ರಾಯ್ಕರ್‌. ಕಲಾವತಿ ಬಡಿಗೇರ್‌. ಶಿವರಾಜ್ ಅಂಗಡಿ. ವಿನಯ್ ಕುಮಾರ್ ಹಿರೇಮಠ್‌. ರಫೀಕ್ ಮುದುಗಲ್‌. ಮೆಹಬೂಬ್ ಸಾಬ ಅಗಸನಹಳ್ಳಿ. ರಾಜಸಾಬ್ ಕಳ್ಯಾಳ.ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು