ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ
MLA Aihole launches road asphalting work
ರಾಯಬಾಗ, 25 : ಮತಕ್ಷೇತ್ರದಲ್ಲಿ ಬಾಕಿ ಇರುವ ಏತ ನೀರಾವರಿ ಯೋಜನೆಗಳನ್ನು ನನ್ನ ಅಧಿಕಾರವಾಧಿಯಲ್ಲಿ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಡಿ.ಎಮ್ ಐಹೊಳೆ ಹೇಳಿದರು. ಬುಧವಾರ ತಾಲೂಕಿನ ನಾಗರಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ಅನುದಾನದಲ್ಲಿ ನಾಗರಾಳ-ಬಿರನಾಳ ರಸ್ತೆ ಡಾಂಬರೀಕರಣ ಹಾಗೂ ನಂದಿಕುರಳಿ ಗ್ರಾಮದಲ್ಲಿ 1 ಕೋಟಿ 25 ಲಕ್ಷ ರೂ. ಅನುದಾನದಲ್ಲಿ ನಂದಿಕುರಳಿ-ನಸಲಾಪೂರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಯಬಾಗ ಮತಕ್ಷೇತ್ರದಲ್ಲಿ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜೊತೆಗೆ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಿ, ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಲೋಕೋಪಯೋಗಿ ಇಲಾಖೆ ಎಇಇ ಆರಿ್ಬ.ಮನುವಡ್ಡರ, ಎಇ ರಾಜೇಶ ಡಂಗ, ಆರಿ್ಬ.ಶಹಾರೆ, ಭೀಮು ಮುಧೋಳೆ, ಅಪ್ಪಾಸಾಹೇಬ ಕೆಂಗನ್ನವರ, ಬಸಪ್ಪ ಮುಧೋಳೆ, ಸತ್ಯಪ್ಪಾ ದಾವನೆ, ಈರಗೌಡ ಪಾಟೀಲ, ರಾಜು ಚೌಗುಲಾ, ಬಸಲಿಂಗ ಮಗದುಮ್ಮ, ಕುತುಬುದ್ದಿನ ಮುಲ್ಲಾ, ಅಪ್ಪಾಸಾಹೇಬ ಮಾಂಗುರೆ, ಬಾಬು ವಂಜೀರೆ, ಪ್ರಧಾನಿ ಉಪ್ಪಾರ, ದಸ್ತಗಿರ ಮುಲ್ತಾನಿ, ನಾರಾಯಣ ಸಾವಂತ, ಕೃಷ್ಣಾ ದತ್ತವಾಡೆ, ರಾಜು ಸಾವಂತ, ಕೃಷ್ಣಾ ಮೋರೆ, ಅಶೊಕ ದತ್ತವಾಡೆ, ಮಂಜು ಸಂಗೋಟೆ, ನಾರಾಯಣ ಬಿರ್ಜೆ ಸೇರಿ ಅನೇಕರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 