ರಾಷ್ಟ್ರೀಯ ಏಕತಾ ನಡಿಗೆ ಅಭಿಯಾನಕ್ಕೆ ಶಾಸಕ ಐಹೊಳೆ ಚಾಲನೆ
MLA Aihole launches National Unity Walk campaign
ರಾಯಬಾಗ, 22 : ಕಾಂಗ್ರೆಸ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ, ಯಾರು ಸಿ.ಎಂ. ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಹೊರತು ರಾಜ್ಯ ಅಭಿವೃದ್ಧಿ ಕಡೆ ಸರ್ಕಾರ ಇವರೂ ಗಮನ ಹರಿಸುತ್ತಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಆರೋಪಿಸಿದರು. ಶನಿವಾರ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗಾಗಿ ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡಿ ಕಾಂಗ್ರೆಸ ಪಕ್ಷಕ್ಕೆ ಅಧಿಕಾರ ತಂದರೂ ಕೂಡ, ದಿನಬೆಳಗಾದರೆ ಮುಖ್ಯಮಂತ್ರಿ ಬದಲಾವಣೆಗಾಗಿ ಕಾಂಗ್ರೆಸನವರು ದೆಹಲಿ ಕಡೆಗೆ ಮುಖಮಾಡಿ ಕುಳಿತಿದ್ದಾರೆ.
ಇಡೀ ಆಡಳಿತ ದಿಲ್ಲಿಯಲ್ಲಿ ಕುಳಿತುಗೊಂಡಿದೆ, ಇದರಿಂದ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು. ಆಡಳಿತ ನಡೆಸಲು ಆಗದೇ ಇದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿರಿ ಎಂದು ಒತ್ತಾಯಿಸಿದರು.ಬೆಳ್ಳಿಗ್ಗೆ ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ “ಒಂದೇ ಭಾರತ-ಆತ್ಮನಿರ್ಭರ ಭಾರತ” ಎಂಬ ಘೋಷವಾಕ್ಯದೊಂದಿಗೆ ದೇಶದಾದ್ಯಂತ ನಡೆಯುತ್ತಿರುವ "ರಾಷ್ಟ್ರೀಯ ಏಕತಾ ನಡಿಗೆ ಅಭಿಯಾನಕ್ಕೆ" ಶಾಸಕ ಡಿ.ಎಮ್.ಐಹೊಳೆಯವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದ ಹಲವು ಪ್ರಾಂತ್ಯಗಳನ್ನು ಒಗ್ಗೂಡಿಸಿ ಭಾರತವನ್ನು ಒಂದೇ ಸದೃಢ ದೇಶವನ್ನಾಗಿ ಮಾಡಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬಗ್ಗೆ ಇಂದಿನ ಯುವಕರಿಗೆ ತಿಳಿಸಿ, ದೇಶದ ಏಕತೆಗೆ ಒಗ್ಗಟ್ಟು ಪ್ರದರ್ಶನ ಮಾಡುವುದರ ಮೂಲಕ, ದೇಶ ಮೊದಲು ಎಂಬ ಸಂಕಲ್ಪವನ್ನು ಯುವ ಶಕ್ತಿಯಲ್ಲಿ ಮೂಡಿಸುವುದು ಮತ್ತು ಸ್ವದೇಶಿ ವಸ್ತುಗಳ ಉತ್ಪಾದನೆ ಹಾಗೂ ಮಾರಾಟ ಮಾಡಲು ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ ಎಂದರು.
ನಂತರ ನಡೆದ ಬಿಜೆಪಿ ಪಕ್ಷದ ರಾಯಬಾಗ ಮಂಡಲ ಬಿ.ಎಲ್.ಎ 2 ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಅವರು, ಬಿ.ಎಲ್.ಎ ಅವರು ಮತದಾರರ ಪಟ್ಟಿ ತೆಗೆದುಕೊಂಡು, ಸರಿಯಾಗಿ ಅಧ್ಯಯನ ಮಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕಿದೆ. ಪಕ್ಷದ ಸಂಘಟನೆಗಾಗಿ ಪ್ರತಿಯೊಬ್ಬರು ತಳಮಟ್ಟದಿಂದ ಪ್ರಾಮಾಣಿಕ ಕೆಲಸ ಮಾಡಬೇಕು. ಇದರಿಂದ ಮುಂಬರುವ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ, ತಾ.ಪಂ., ಜಿ.ಪಂ., ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಅನುಕೂಲವಾಗುತ್ತದೆ ಎಂದರು. ರಾಜ್ಯ ಸರ್ಕಾರ ವೈಫಲ್ಯಗಳನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು,
ಜನರಿಗೆ ಧ್ವನಿ ಆಗಬೇಕೆಂದು ಕರೆ ನೀಡಿದರು. ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ಮಹೇಶ ಭಾತೆ,ದುಂಡಪ್ಪಾ ಭೆಂಡವಾಡೆ, ಸದಾಶಿವ ಹಳಿಂಗಳಿ, ರಾಜಶೇಖರ ಖನದಾಳೆ, ರಾಜು ಹರಗಣ್ಣವರ, ಬಸಗೌಡಾ ಪಾಟೀಲ, ಅಮಿತ ಜಾಧವ, ಮಹಾದೇವ ಬೋರಗಾಂವೆ, ಪಿ.ಎ.ನಾಯಿಕ, ಅನೀಲ ಹಂಜೆ, ಬಸು ಅವ್ವನ್ನವರ, ಅರುಣ ಐಹೊಳೆ, ಶಿವಾನಂದ ನವನಾಳೆ, ಮಹಾದೇವ ಬೊರಗಾವೆ, ಮಹೇಶ ಕರಮಡಿ ಹಾಗೂ ಪಕ್ಷದ ಬಿ.ಎಲ್.ಎ.ಗಳು, ಪಕ್ಷದ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು, ಮಹಿಳಾ ಮೋರ್ಚಾ, ಯುವ ಮೋರ್ಚಾ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 