ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಐಹೊಳೆ

ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕ ಐಹೊಳೆ MLA Aihole for various development works

ರಾಯಬಾಗ, 31 : ಮತಕ್ಷೇತ್ರದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿ, ದೇವಸ್ಥಾನ ಸಮುದಾಯ ಭವನಗಳ ನಿರ್ಮಾಣ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಡಿ.ಎಮ್‌.ಐಹೊಳೆ ಹೇಳಿದರು. ಶನಿವಾರ ಪಟ್ಟಣದ ಕೇಂದ್ರ ಸರ್ಕಾರಿ ಶಾಲೆ ಆವರಣದಲ್ಲಿ ನಿರ್ಮಿಸಿರುವ ಬಯಲು ರಂಗಮಂದಿರ ಉದ್ಘಾಟನೆ, ಅಂಬೇಡ್ಕರ ವೃತ್ತದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕೊಳಚೆ ಸುಧಾರಣೆ ಯೋಜನೆಯಡಿ ಮಂಜೂರಾದ 20 ಲಕ್ಷ ರೂ.ಅನುದಾನದಲ್ಲಿ ಹರಿಜನಕೇರಿ ಕೊಳಚೆ ಪ್ರದೇಶದಲ್ಲಿ ಆರಿ​‍್ಸ.ಸಿ. ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ.ಅನುದಾನದಲ್ಲಿ ಆನೇಬಾಯಿಕೊಡಿಯಲ್ಲಿರುವ ವೀರಭದ್ರೇಶ್ವರ ದೇವಸ್ಥಾನ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿ ಚಾಲನೆ ನೀಡಿ ಮಾತನಾಡಿದ ಅವರು, 

ಶಾಲೆಯಲ್ಲಿ ನಡೆಯುವ ಹಾಗೂ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಯಲು ರಂಗಮಂದಿರವನ್ನು ಸೂಕ್ತವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಈ ಶಾಲೆಗೆ ಬೇಕಾದ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.ಜಿ.ಪಂ.ಎಇಇ ವಿಠ್ಠಲ ಭಜಂತ್ರಿ, ಎಇ ಎಸ್‌.ಎಸ್‌.ಹೊಸಮನಿ, ಸದಾಶಿವ ಘೋರೆ​‍್ಡ, ಅಣ್ಣಾಸಾಹೇಬ ಖೇಮಲಾಪೂರೆ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ಬಿ.ಎಮ್‌.ಮಾಳಿ, ಡಿ.ಎಸ್‌.ಮಾಡಲಗಿ, ಎಮ್‌.ಬಿ.ಹಡಾಡಿ, ಮೋಹನ ರಾಜಮಾನೆ, ರಾಜು ಕುರಾಡೆ, ಗೋಪಾಲ ಕೊಚೇರಿ, ಮಜ್ಜಿದ ಡಾಂಗೆ, ಸಂಭಾಜಿ ಜಾಧವ, ಶಂಕರಿ ಪೂಜಾರಿ, ದತ್ತಾ ಜಾಧವ, ಸುರೇಶ ಮಾಳಿ, ಭಾರತಿ ಲೋಹಾರ, ಜಿಯಾವುಲ್ಲ ಮುಲ್ಲಾ, ಸುರೇಶ ಕೋಕಾಟೆ, ರಾಜು ಮೋಮಿನ ಸೇರಿ ಅನೇಕರು ಇದ್ದರು.