ಜಾನಪದ ನೃತ್ಯದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಎಮ್.ಡಿ.ಆರ್.ಎಸ್ ವಿದ್ಯಾರ್ಥಿಗಳು
MDRS students selected for state level in folk dance
ಬೆಳಗಲಿ 13: ,ಮುಧೋಳ ನಗರದ ಕೆ ಆರ್ ಲಕ್ಕಂ ವಿದ್ಯಾ ಸಂಸ್ಥೆಯ ಅಂಗಳದಲ್ಲಿ ಸೋಮವಾರ ದಂದು ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ರನ್ನ ಬೆಳಗಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು. ಜಾನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.ಈ ನೃತ್ಯದಲ್ಲಿ ನೀಲಮ್ಮ ರಾಮದುರ್ಗ,ಸೃಷ್ಟಿ ಬಿಸನಾಳ, ಪ್ರಿಯಾಂಕಾ ಕಾಳವ್ವಗೋಳ,ಚೈತ್ರಾ ಮೆಳ್ಳಿಗೇರಿ,ಪೂರ್ವಿ ಬಡಿಗೇರ,ಸುಕನ್ಯಾ ಹುಲಗೇರಿ ನೃತ್ಯಕ್ಕೆ ಹೆಜ್ಜೆ ಹಾಕಿದರು ಇವರಿಗೆ ಗಾಯನದಲ್ಲಿ ರಂಜಿತಾ ಗೋನ್ಯಾಗೋಳ,ಕಾವೇರಿ ಸರವಿ,ಪೂರ್ವಿ ಶಿರೋಳ,ಚೆತನ್ಯ ಭಜಂತ್ರಿ ಹಾಗೂ ಅಕ್ಷತಾ ರಾಮದುರ್ಗ ಸಾತ್ ನೀಡಿದ್ದು, ಮಲ್ಲಿಕಾರ್ಜುನ ಗಾಜಾರ ತಭಲಾ ವಾದನ ಮಾಡಿದನು.
ಈ ತಂಡಕ್ಕೆ ಮಾರ್ಗದರ್ಶನ ನೀಡಿದ ಶಿಕ್ಷಕರಾದ ಜಿ. ಹೆಚ್. ಗಾಜಾರ,ವಿಲಾಸ ಎಣ್ಣಿ ಅವರಿಗೆ ವಿಜೇತಗೊಂಡ ವಿದ್ಯಾರ್ಥಿಗಳಿಗೆ. ಬಾಗಲಕೋಟೆ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ ಸಿ ಮನ್ನಿಕೇರಿ,ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಮ್ ಮುಲ್ಲಾ,ಪ್ರಾಚಾರ್ಯ ಎಮ್. ವಿ.ಸೊಪ್ಪಿಮಠ,ಸಿ.ಆರಿ್ಪ ಬಸವರಾಜ ಬಳ್ಳಾರಿ,ಬಿ.ಆರಿ್ಪ ಸಂಗಮೇಶ ನಿಲಗುಂದ, ನಿಲಯಪಾಲಕ ಕೆ ಎಸ್ ಉಳ್ಳಾಗಡ್ಡಿ,ರಾಹುಲ ಸಾಗರ,ಎಮ್ ಬಿ ತೇರದಾಳ,ಎನ್ ಆಯ್ ಜಂಗಾಲಿ,ಶೃತಿ ಪೊಲೀಸನವರ,ಶಿಲ್ಪಾ ಹಾರೂಗೇರಿ,ಸುರೇಶ ಮುದಕನ್ನವರ,ಕಾಂತು ಕಲಶೆಟ್ಟಿ,ಜಿ ಎಂ ಮಠಪತಿ, ಶಿವಶಂಕರಯ್ಯ ವೀರಕ್ತಮಠ, ಯಲ್ಲಪ್ಪ ಶಿರಗಾಂವಿ, ನಾರಾಯಣ ಒಂಟಗೋಡಿ, ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಿಬ್ಬಂದಿಗಳು, ಊರಿನ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 