ನಿಷ್ಠಾವಂತ ಕಾರ್ಯಕರ್ತರು ಕ್ಷೇತ್ರದಲ್ಲಿದ್ದಾರೆ : ಶಾಸಕ ಪಠಾಣ
Loyal workers are in the constituency: MLA Pathana
ಲೋಕದರ್ಶನ ವರದಿ
ಶಿಗ್ಗಾವಿ 17: ಸತತ ಸೋಲಿನಿಂದ ಕಂಗೇಡದೆ 18 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರು ಈ ಕ್ಷೇತ್ರದಲ್ಲಿರುವ ಕಾರಣ ಜಯಶಾಲಿಯಾಗಲು ಸಾಧ್ಯವಾಯಿತು ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಸರ್ಕ್ಯೂಟ್ ಹೌಸದಲ್ಲಿ ಪಶ್ಚಿಮ ಪಧವೀದರ ಕ್ಷೇತ್ರದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು ಭಾಜಪ ಪಕ್ಷದಲ್ಲಿ ಕೋಮುಗಲಭೆ ಸೃಷ್ಟಿಸಿ ಮತದಾನ ಪಡೆಯುತ್ತಾರೆ ಆದರೆ ಕಾಂಗ್ರೆಸನಲ್ಲಿ ನಿಷ್ಠಾವಂತ ಕಾರ್ಯಕರ್ತರು ನಮ್ಮ ಪಕ್ಷದಲ್ಲಿ ಇದ್ದಾರೆ. ಹಾಗೂ ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿ ನಲೆಯಿದೆ ವಿಧಾನ ಪರಿಷತ್ ಬಹುಮತ ಇಲ್ಲ ಕಾರಣ ಮೋಹನ ಲಿಂಬಿಕಾಯಿ ಅವರನ್ನು ಗೆಲ್ಲಿಸುವುದರ ಮೂಲಕ ವಿಧಾನಪರಿಷತ ಸಭಾಧ್ಯಕ್ಷ ಬಸವರಾಜ ಹೊರಟ್ಟಿಯವರನ್ನು ಕೆಳಗಿಳಿಸೋಣ ಅಲ್ಲದೇ ಶಿಗ್ಗಾವಿ ಸವಣೂರ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮತ ಹಾಕಿಸುವ ಜವಾಬ್ದಾರಿ ನನ್ನದು ಎಂದರು.
ಜಿಲ್ಲಾ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ ಪಕ್ಷದ ಸಂಘಟನೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾವಿ ತಾಲೂಕ ಮುಂಚೂಣಿಯಲ್ಲಿದೆ. ಅಲ್ಲದೇ ಮುಂಬರುವ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಧಿಕೃತ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು ವಿಜಯಶಾಲಿ ಮಾಡುವಲ್ಲಿ ಹಾವೇರಿ ಜಿಲ್ಲೆಯಿಂದ ಅತಿ ಹೆಚ್ಚು ಮತಗಳನ್ನು ನೀಡಿ ಅತ್ಯಂತ ಬಹುಮತದಿಂದ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸೋಣ ಎಂದರು. ಪಶ್ಚಿಮ ಪಧವೀದರ ಕ್ಷೇತ್ರದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ ಜ್ಯಾತ್ಯಾತೀತವಾಗಿ ಆಯ್ಕೆ ಮಾಡಿದಂತಹ ಕ್ಷೇತ್ರ ಯಾವುದಾದರೂ ಇದ್ದರೆ ಅದು ಶಿಗ್ಗಾವಿ ಕ್ಷೇತ್ರವಾಗಿದೆ. 88817 ನೋಂದಾಯಿತ ಪಧವೀದರರು ಮಾತ್ರ ಅರ್ಹರು ಅಲ್ಲದೇ 100 ಕ್ಕೆ 50 ರಷ್ಟು ಮತದಾರರು ಬಿಜೆಪಿಗೆ ವಿರುದ್ದವಾಗಿದ್ದಾರೆ. 3900 ಮತದಾರರು ಮಾತ್ರ ಶಿಗ್ಗಾವಿ ಕ್ಷೇತ್ರದಲ್ಲಿದ್ದಾರೆ. ಅದರಲ್ಲಿ ಮುಖ್ಯವಾಗಿ ಯುವನಿಧಿ ಲಾಭ ಪಡೆಯುತ್ತಿರುವಂತಹ ಪದವೀಧರರನ್ನು ವಿಶ್ವಾಸಕ್ಕೆ ಪಡೆಯಬೇಕು ಹಾಗೂ ಪದವೀಧರ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುಂದರ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು.
ಗಡಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿದರು. ಈ ಸಂದರ್ಭದಲ್ಲಿ ಮುನ್ನಾ ಅಹ್ಮದಖಾನ ಪಠಾಣ, ಗುಡ್ಡಪ್ಪ ಜಲದಿ, ಎಸ್.ಎಫ್.ಮಣಕಟ್ಟಿ, ಪ್ರೇಮಾ ಪಾಟೀಲ, ಶಂಕರ ಮೆಹರವಾಡೆ, ಗೌಸಖಾನ ಮುನಸಿ, ಮುನ್ನಾ ಲಕ್ಷ್ಮೇಶ್ವರ, ಅಣ್ಣಪ್ಪ ಲಮಾಣಿ, ಮಲ್ಲಮ್ಮ ಸೋಮನಕಟ್ಟಿ, ವಸಂತಾ ಬಾಗೂರ, ಹನುಮರೆಡ್ಡಿ ನಡುವಿನಮನಿ, ಶಿವಾನಂದ ರಾಮಗೇರಿ, ಶಂಭು ಆಜೂರ, ಬಾಬರ ಬಾವೋಜಿ, ಬಸವರಾಜ ಜೇಕಿನಕಟ್ಟಿ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ನ್ಯಾಯವಾದಿ ಅಬ್ದುಲ್ ಮಜೀದ ಕೊಲ್ಲಾಪುರ ಕಾರ್ಯಕ್ರಮ ನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 