ಕಲಾ ಮಹಾವಿದ್ಯಾಲಯಕ್ಕೆ ಲಂಡನ್ ಪ್ರಾಧ್ಯಾಪಕ ನಿಕೋಲಸ್ ಬಸಣ್ಣವರ ಭೇಟಿ
London Professor Nicholas Basanna visits the College of Arts
ಲೋಕದರ್ಶನ ವರದಿ
ಕಲಾ ಮಹಾವಿದ್ಯಾಲಯಕ್ಕೆ ಲಂಡನ್ ಪ್ರಾಧ್ಯಾಪಕ ನಿಕೋಲಸ್ ಬಸಣ್ಣವರ ಭೇಟಿ
ಬಾಗಲಕೋಟೆ 15: ಬಸವೇಶ್ವರ ಕಲಾ ಮಹಾವಿದ್ಯಾಲಯಕ್ಕೆ ಲಂಡನ್ ಇತಿಹಾಸ ಪ್ರಾಧ್ಯಾಪಕ ಹಾಗೂ ಸಂಶೋಧಕರಾದ ನಿಕೋಲಸ್ ರಂಗಣ್ಣ ಬಸಣ್ಣವರ ಭೇಟಿ ನೀಡಿದರು.
ಕಲಾ ಮಹಾವಿದ್ಯಾಲಯದಲ್ಲಿ ಫಿಲಾಸಫಿ ಪ್ರಾಧ್ಯಾಪಕರಾಗಿ
ಕಾರ್ಯನಿರ್ವಾಹಿಸಿದ್ದ ರಂಗಣ್ಣ ಎಮ್. ಬಸಣ್ಣವರ ಅವರ ಪುತ್ರ ನಿಕೋಲಸ್ ಬಸಣ್ಣವರ ಹಾಗೂ ಅವರ ಧರ್ಮಪತ್ನಿ ಯೋಕಾ ಎಂಡೋ ಬಸಣ್ಣವರ ಕಲಾ ಮಾಹವಿದ್ಯಾಲಯಕ್ಕೆ ಭೇಟಿ ನೀಡಿ ಅವರ ತಂದೆ ಸಲ್ಲಿಸಿದ ಶಿಕ್ಷಣ ಸೇವೆಯ ಕುರಿತು ಮೆಲಕು ಹಾಕಿದರು. ರಂಗಣ್ಣ ಬಸಣ್ಣವರ ಕಲಾ ಮಹಾವಿದ್ಯಾಲಯದಲ್ಲಿಯೇ ವಿದ್ಯಾರ್ಥಿಯಾಗಿ ನಂತರ 1950ರ ಶತಮಾನದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪಿಹೆಚ್.ಡಿ ಅಧ್ಯಯನಕ್ಕೆ ಲಂಡನ್ ಗೆ ತೆರಳಿ ಬಳಿಕ ಕುಟುಂಬ ಸಮೇತ ಇಂಗ್ಲೆಂಡ್ ಅಲ್ಲಿಯೇ ನೆಲೆಸಿದ್ದರು. ಅವರ ಮರಣದ ನಂತರ ಸ್ಮರಣಾರ್ಥವಾಗಿ ಅವರ ಪತ್ನಿ ಜನೀಫರ್ ಬಸಣ್ಣವರ ಕಲಾ ಮಾಹವಿದ್ಯಾಲಯದಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಕ ದೇಣಿಗೆ ಹಣವನ್ನು ನೀಡಿದ್ದಾರೆ. ತಮ್ಮ ತಂದೆ ವಿದ್ಯಾಭ್ಯಾಸ ಮಾಡಿದ ಮತ್ತು ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಬಿವಿವಿ ಸಂಘದ ಕಲಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ನಿಕೋಲಸ್ ಭಾವುಕರಾದರು.
ಪ್ರಾಚಾರ್ಯರಾದ ಎಸ್.ಆರ್ ಮೂಗನೂರಮಠ ಅವರು ಮಹಾವಿದ್ಯಾಲಯದ ಪರಿಚಯ ಮಾಡಿಕೊಡುವುದರ ಜೊತೆಗೆ ಮಹಾವಿದ್ಯಾಲಯದ ಐತಿಹಾಸಿಕ ಘಟನೆಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 