ಲೋಕದರ್ಶನ ವರದಿವೇದಿಕ ಮತ್ತು ಸಂಸ್ಕೃತ ಗಣಿತದ ವಿಶ್ಲೇಷಣೆ ಇಂದಿನ ಅಗತ್ಯ - ಎಂ. ಸಿ. ಕೊಳ್ಳಿ
Lokdarshan, Reported Vedic and Sanskrit Mathematical Analysis is the Need of Today - M. C. Kolli
ಲೋಕದರ್ಶನ ವರದಿವೇದಿಕ ಮತ್ತು ಸಂಸ್ಕೃತ ಗಣಿತದ ವಿಶ್ಲೇಷಣೆ ಇಂದಿನ ಅಗತ್ಯ - ಎಂ. ಸಿ. ಕೊಳ್ಳಿ
ಹಾವೇರಿ 13: ವೇದಿಕ ಮತ್ತು ಸಂಸ್ಕೃತ ಗಣಿತವು ಕೇವಲ ಗಣನೆಗಳಿಗೆ ಸೀಮಿತವಾಗಿಲ್ಲ. ಅದು ವಿಮರ್ಷಾತ್ಮಕ ಚಿಂತನೆ, ತಾರ್ಕಿಕತೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸುತ್ತದೆ. ಇದು ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಅರ್ಥಮಾಡಿಕೊಳ್ಳಲು ಮತ್ತು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಇದು ವಿಜ್ಞಾನ, ತಂತ್ರಜ್ಞಾನ, ಅರ್ಥಶಾಸ್ತ್ರ ಮತ್ತು ದೈನಂದಿನ ಜೀವನದ ಎಲ್ಲಾ ಹಂತಗಳಲ್ಲಿಯೂ ಅವಶ್ಯಕವಾಗಿದೆ. ಗಣಿತವು ವ್ಯಕ್ತಿಗಳಿಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ ಎಂದು ಬೆಳಗಾವಿ ಕೆ.ಎಲ್.ಇ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ. ಸಿ. ಕೊಳ್ಳಿ ಅಭಿಪ್ರಾಯಪಟ್ಟರು.
ಅವರು ನಗರದ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗವು ಆಯೋಜಿಸಿದ್ದ ಭಾರತೀಯ ಜ್ಞಾನ ಪರಂಪರೆ ವೈದಿಕ ಗಣಿತ ಮತ್ತು ಸಂಸ್ಕೃತ ಲೆಕ್ಕಾಚಾರದ ವಿಜ್ಞಾನ ವ್ಯವಸ್ಥೆ ವಿಷಯದ ಕುರಿತಾಗಿ ಜರುಗಿದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೈನಂದಿನ ಜೀವನದ ಮೂಲಭೂತ ಭಾಗವಾಗಿರುವ ಗಣಿತ ವೇದಿಕ ಮತ್ತು ಸಂಸ್ಕೃತದಿಂದ ಸಮಾಜದ ಪ್ರಗತಿಗೆ ಕೊಡುಗೆ ನೀಡುವ ಪರಿಧಿಯ ಅರಿವನ್ನು ಮೂಡಿಸುತ್ತದೆ. ಎಣಿಕೆಯಿಂದ ಹಿಡಿದು ಅಳತೆಯವರೆಗೆ ಮತ್ತು ಹೆಚ್ಚು ಸಂಕೀರ್ಣವಾದ ಲೆಕ್ಕಾಚಾರಗಳವರೆಗೆ ಗಣಿತವನ್ನು ಬಳಸಿಕೊಳ್ಳುವ ಬಗೆಯನ್ನು ವಿವರಿಸುತ್ತದೆ. ಇದರ ಪ್ರಯೋಜನವನ್ನು ಪಡೆದು ಉನ್ನತ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಾಗ ಶ್ರಮ ಸಾರ್ಥಕವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಹೈದರಾಬಾದ್ ಚೈತನ್ಯ ಭಾರತಿ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಸುರೇಶ್ ಬಾಬು ಮಾತನಾಡಿ ಭಾರತೀಯ ಜ್ಞಾನ ವ್ಯವಸ್ಥೆ ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಸಾಂಪ್ರದಾಯಿಕ ಜ್ಞಾನದ ಸಮಗ್ರ ಸಂಗ್ರಹವಾಗಿದ್ದು, ಆಧುನಿಕ ಸಮಸ್ಯೆಗಳಿಗೆ ಪ್ರಾಚೀನ ಜ್ಞಾನವನ್ನು ಅನ್ವಯಿಸುವುದು ಮತ್ತು ಭಾರತೀಯ ಶಿಕ್ಷಣ ಉತ್ತೇಜಿಸುವ ಉದ್ದೇಶವಾಗಿದೆ ಎಂದು ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ರಾಷ್ಟ್ರೀಯ ಇಂಜಿನಿಯರಿಂಗ್ ಸಂಸ್ಥೆಯ ಪ್ರಾಧ್ಯಾಪಕ ಡಾ. ಹರ್ಷಾ ಎ. ಜೆ. ಅವರು ಭಾರತೀಯ ಜ್ಞಾನ ವ್ಯವಸ್ಥೆಯು ಸಮಕಾಲೀನ ಪ್ರಸ್ತುತತೆ ವಿಷಯ ಕುರಿತು ಬೆಳಕು ಚೆಲ್ಲಿದರು. ನಂತರದ ಅಧಿವೇಶನದಲ್ಲಿ ರಾಜ್ಯ ಮತ್ತು ಹೊರರಾಜ್ಯಗಳ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪ್ರಬಂಧ ಮಂಡಿಸಿದರು. ಆರಂಭದಲ್ಲಿ ರಷ್ಮಿ ಹಾಗೂ ಸಂಗಡಿಗರಿಂದ ಪ್ರಾರ್ಥನೆ, ಪ್ರಾಚಾರ್ಯ ಪ್ರೊ. ಎಂ. ಎಂ. ಹೊಳ್ಳಿಯವರ ಅವರಿಂದ ಸ್ವಾಗತ, ಪ್ರೊ. ಗೀತಾ ಮಂಕಣಿ ಅವರಿಂದ ಪ್ರಾಸ್ತಾವಿಕ ಭಾಷಣ, ಡಾ. ಅಶ್ವಿನಿ ಹತ್ತಿಕಾಳ ಅವರಿಂದ ಅತಿಥಿಗಳ ಪರಿಚಯ ಜರುಗಿತು. ವೇದಿಕೆಯಲ್ಲಿ ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾಯಾಧ್ಯಕ್ಷ ಡಾಽಽ ಎಸ್. ಎಲ್. ಬಾಲೇಹೊಸೂರ, ಸದಸ್ಯರಾದ ಬಸವರಾಜ ಮಾಸೂರ, ಜೆ. ಎಸ್. ಅರಣಿ, ಐಕ್ಯುಎಸಿ ಸಂಯೋಜಕಿ ಪ್ರೊ. ರೂಪಾ ಕೋರೆ ಉಪಸ್ಥಿತರಿದ್ದರು. ಪ್ರೊ. ಸುಮಂಗಲಾ ಜಿ. ಎಂ. ನಿರ್ವಹಿಸಿದ್ದರು. ಪ್ರೊ. ಗೀತಾ ಹೂಗಾರ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 