ಅಂತರಾಷ್ಟ್ರೀಯ ಭ್ರಷ್ಟಾಚಾರ ದಿನದಂದೇ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
Lokayukta raids officials' homes on International Anti-Corruption Day
ಶಿರಹಟ್ಟಿ 09 : ಅಕ್ರಮ ಆಸ್ತಿ 38ಗಳಿಕೆ ಮಾಡಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಪಶು ವೈದ್ಯಾಧಿಕಾರಿ ಡಾ. ನಿಂಗಪ್ಪ ಓಲೇಕಾರ ಅವರ ಮನೆಯ ಮೇಲೆ, ಶಿರಹಟ್ಟಿ ಪಶು ಆಸ್ಪತ್ರೆ, ಮಾಗಡಿ ಪಶು ಆಸ್ಪತ್ರೆ ಹಾಗೂ ತಾಲೂಕು ಪಂಚಾಯತ್ ಕಾರ್ಯಾಲಯದ ಮೇಲೆ ಏಕ ಕಾಲಕ್ಕೆ ಲೋಕಾಯುಕ್ತ ಡಿವೈಎಸ್‌ಪಿ ವಿಜಕುಮಾರ ಬಿರಾದಾರ ಅವರ ತಂಡ ಮಂಗಳವಾರ ಬೆಳಗಿನ ಜಾವ ದಾಳಿ ಮಾಡಿದೆ.ಸನ್ 2023-24 ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ತಾಲೂಕು ಪಂಚಾಯತ್ ಅನಿಬಂಧಿತ ಅನುದಾನದ ಅಡಿಯಲ್ಲಿ ಶಿರಹಟ್ಟಿ ತಾಲೂಕು ಪಂಚಾಯತ್‌ಗೆ ಮಂಜೂರಾದ ಅಂದಾಜು 2.16.97.377 ರೂಗಳಲ್ಲಿ ಸುಮಾರು 1.97.20.382 ರೂಗಳನ್ನು ಅನುದಾನ ದುರ್ಬಳಕೆ ಮಾಡಿಕೊಂಡು ಕಳಪೆ ಗುಣ ಮಟ್ಟದ ಸಾಮಗ್ರಿಗಳನ್ನು ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಪೂರೈಸಿ, ಭ್ರಷ್ಟಾಚಾರ ಎಸಗಿದ್ದಾರೆ ಎಂದು ದೂರಿನ ಆಧಾರದ ಮೇಲೆ ಡಾ. ನಿಂಗಪ್ಪ ಓಲೇಕಾರ ಅವರ ಮನೆಯ ಮೇಲೆ ಮಾಡಲಾಗಿದೆ ಎಂದು ಲೋಕಾಯುಕ್ತರು ತಿಳಿಸಿದ್ದಾರೆ.ದಾಳಿ ವೇಳೆ ಡಾ. ನಿಂಗಪ್ಪ ಓಲೇಕಾರ ಅವರ ಮನೆಯಲ್ಲಿರುವ ಹಾಗೂ ಶಿರಹಟ್ಟಿ-ಮಾಗಡಿ ಪಶು ಆಸ್ಪತ್ರೆ ಮತ್ತು ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ದಾಖಲೆಗಳನ್ನು ಪರೀಶೀಲನೆ ಮಾಡಿದರು.ಈ ಸಂದರ್ಭದಲ್ಲಿ ಪೊಲೀಸ್ ನೀರೀಕ್ಷಕರಾದ ಎಸ್ ಎಸ್. ತೇಲಿ ಹಾಗೂ ಪರಮೇಶ್ವರ ಜಿ. ಕವಟಗಿ, ಎಮ್ ಎಮ್. ಅಯ್ಯನಗೌಡರ, ವಿ ಎಸ್, ದೀಪಾಲಿ, ಯು ಎನ್. ಸಂಗನಾಳ, ಎಸ್ ಪಿ. ಅಂಬಿಗೇರ, ಎಮ್ ಎಸ್. ಗಾರ್ಗಿ, ಟಿ ಎನ್. ಜವಳಿ, ಹೆಚ್ ಐ. ದೇವುರವಾಲಾ, ಎಮ್ ಬಿ. ಬಾರಡ್ಡಿ, ಪಿ ಎಲ್. ಪಿರಿಮಾಳ, ಎಸ್ ವಿ, ನೈನಾಪೂರ, ಐ ಎಸ್. ಸೈವಣ್ಣವರ ಹಾಗೂ ಎಮ್ ಆರ್. ಹಿರೇಮಠ ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 