ಇಂಡಿ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತರ ದಾಳಿ

ಇಂಡಿ ಉಪನೋಂದಣಾಧಿಕಾರಿ ಕಚೇರಿ ಮೇಲೆ ಲೋಕಾಯುಕ್ತರ ದಾಳಿ Lokayukta raids Indi Sub-Registrar's office

ಲೋಕದರ್ಶನ ವರದಿ

ಇಂಡಿ 01 : ಸದಾ ಸುದ್ದಿಯಲ್ಲಿರುವ ಇಂಡಿ ಉಪನೋಂದಣಿ ಕಛೇರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಮೇಲೆ ವಿಜಯಪೂರ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಟಿ ಮಲ್ಲೇಶಿ ನೇತೃತ್ವದಲ್ಲಿ ದಾಳಿ ಮಾಡಲಾಯಿತು. ದಾಳಿಯಲ್ಲಿ ಸಂದರ್ಭದಲ್ಲಿ ಸುಮಾರು 50000 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಕಛೇರಿಯಲ್ಲಿ ಇದ್ದ ಖಾಸಗಿ ವ್ಯಕ್ತಿಗಳನ್ನು ವಶಪಡಿಸಿಕೊಳ್ಳಲಾಯಿತು. ಹಾಗೂ ಬಾಂಡ್ ರೈಟರಗಳನ್ನು ಕಡತಗಳನ್ನು ಪರೀಶೀಲಿಲನೆ ಮಾಡಲಾಯಿತು. ಹಾಗೂ ದಾಖಲಾತಿಗಳ ಪರೀಶೀಲನೆ ಮುಂದುವರಿಸಿದ್ದು. ಈ ತನಿಖೆ ಎರಡು ದಿನಗಳ ಕಾಲ ಮುಂದುವರಿಯಲಿದೆ ಎಂದೂ ಲೋಕಾಯುಕ್ತ ಸಿಪಿಐ ಆನಂದ ಟಕ್ಕನವರ ಸುದ್ದಿಗಾರರಿಗೆ ತಿಳಿಸಿದರು. ಈ ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ ಸಿಪಿಐ ಆನಂದ ಡೊಣ್ಣಿ ಹಾಗೂ ಲೋಕಾಯುಕ್ತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.