ಲೋಕಾಯುಕ್ತ ತನಿಖೆ ಮುರನೇ ದಿನಕ್ಕೆ ಮುಂದುವರಿಕೆ

ಲೋಕಾಯುಕ್ತ ತನಿಖೆ ಮುರನೇ ದಿನಕ್ಕೆ ಮುಂದುವರಿಕೆ Lokayukta investigation continues for the third day

ಲೋಕದರ್ಶನ ವರದಿ  

ಇಂಡಿ 03 :  ಸದಾ ಸುದ್ದಿಯಲ್ಲಿರುವ ಇಂಡಿ ಉಪನೋಂದಣಿ ಕಛೇರಿ ಹಾಗೂ ವಿವಾಹ ನೋಂದಣಾಧಿಕಾರಿಗಳ  ಕಛೇರಿ ಮೇಲೆ ವಿಜಯಪೂರ ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಟಿ ಮಲ್ಲೇಶಿ ನೇತೃತ್ವದಲ್ಲಿ ನಿನ್ನೆ ದಾಳಿ ಮಾಡಲಾಯಿತು. ಇಂದು ಮೂರನೇ ದಿನವೂ ತನಿಖೆ ಮುಂದುವರಿಸಿದ್ದಾರೆ. ಬೆಳಗ್ಗೆ ಹತ್ತು ಗಂಟೆಗೆಯಿಂದ ಸಾಯಂಕಾಲ ಆರು ಗಂಟೆಗೆ ವರಿಗೆ ಲೋಕಾಯುಕ್ತ ಜಿಲ್ಲಾ ವರಿಷ್ಠಾಧಿಕಾರಿ ಟಿ ಮಲ್ಲೇಶಿ ನೇತೃತ್ವದಲ್ಲಿ ತಂಡ ಎಲ್ಲಾ ಕಡತಗಳನ್ನು ಪರೀಶೀಲಿಲನೆ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಇಂದು ತನಿಖೆಯನ್ನು ಸೋಮವಾರ ವರಿಗೆ ಮುಂದುವರಿಯಲಿದೆ ಎಂದು ವಿಜಯಪೂರ ಜಿಲ್ಲಾ ಲೋಕಾಯುಕ್ತ ಪೊಲೀಸ ವರಿಷ್ಠಾಧಿಕಾರಿ ಟಿ ಮಲ್ಲೇಶಿ ತಿಳಿಸಿದ್ದಾರೆ.  

ಸುದ್ದಿಗಾರೊಂದಿಗೆ ಅವರು ಮಾತನಾಡಿ ನಾನು ಮತ್ತು ನಮ್ಮ ಲೋಕಾಯುಕ್ತ ಅಧಿಕಾರಿಗಳು ಸೇರಿ ಮೂರು ದಿನಗಳ ಕಾಲ ಎಲ್ಲಾ ದಾಖಲೆಗಳನ್ನು ಪರೀಶೀಲಿಸಿದಾಗ ಬಹಳಷ್ಟು ಲೋಪದೋಷಗಳು ಕಂಡು ಬಂದಿದೆ.ನಾಳೆ ಈ ಎಲ್ಲಾ ದಾಖಲೆಗಳನ್ನು ಭೂಮಿ ಕೇಂದ್ರದಲ್ಲಿ ಸೋಮವಾರ ದಿವ ಪರೀಶೀಲನೆ ಮಾಡಿ ಪೂರ್ಣವಾದ ಮಾಹಿತಿ ನೀಡಲಾಗುವುದು.12 ಜನ ಅನ ಅಧಿಕೃತ ಬಾಂಡ್ ರೈಟರ್ ಹಾಗೂ ಏಜೆಂಟ್ ರ ಮೇಲೆ ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೂ ಏಜೆಂಟ್ ಬಳಿ 41630 ರೂಪಾಯಿ ಹಣ ಸಿಕ್ಕಿತು ಆ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಪತ್ರಿಕೆಗಳಲ್ಲಿ ಬಂದ ವರದಿಗಳ ಆಧರಿಸಿ ನೀರಾವರಿ ಜಮೀನಿಗೆ ಒಣ ಬೇಸಾಯದ ಮೌಲ್ಯದಲ್ಲಿ ಖರೀದಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಟ್ಟ ಉಂಟು ಮಾಡಿದ್ದು ಕಂಡುಬಂದಿದೆ.  

ಕುಟುಂಬದ ಸದಸ್ಯರಲ್ಲದವರಿಗೂ ದಾನ ಪತ್ರ ನೋಂದಣಿ ಮಾಡಿಕೊಟ್ಟಿದ್ದು ನೋಂದಣಿ ಖರ್ಚು ಕಡಿಮೆ ವರ್ಣಮಾಡಲಾಗಿದೆ, ನ್ಯಾಯಾಲಯದ ಆದೇಶಗಳನ್ನು 45ಚಿ ಅಪಿಲ್ ಕೇಸುಗಳಿಗೆ ಜಿಲ್ಲಾ ನೋಂದಣಾಧಿಕಾರಿಗಳು ದಾಖಲೆ ಮಾಡಲು ಕಳುಹಿಸಿದರು ಯಾವುದೇ ಕ್ರಮ ಜರುಗಿಸಿರುವುದಿಲ್ಲ. ಭೂಮಿ ಕೇಂದ್ರದಲ್ಲಿನ ಪಹಣಿಗಳ ಪಡೆದು ಕೊನೆಯ ಹಂತ ತರುವುದು ತಿಳಿಸಿದ್ದಾರೆ.ಇಸಿ ಫಂಡ್ ಮತ್ತು ಮೌಂಟೇನ್ ಫಂಡ್ ನೋಂದಣಿಯಾದ ಹಣ ಮುದ್ರಾಂಕ ಸೂಲ್ಕ್‌ ಗಳನ್ನು ಬರಸಿದ ಮೊತ್ತ ಹಾಗೂ ಬುಕ್ ನಂಬರ್ 1 ರಲ್ಲಿ  ನಮೂದಿಸಿ ಮೊತ್ತ ಹೋಲಿಕೆ ಆಗುತ್ತಿಲ್ಲ ಹಾಗೂ ಸಾಕಷ್ಟು ನೋಂದಣಿಯಾದ ದಾಖಲಾತಿಗಳು ಸಂಬಂಧ ಪಟ್ಟವರಿಗೆ ಕೊಡದೆ ತಾವೇ ಇಟ್ಟುಕೊಂಡಿದ್ದಾರೆ.ಮತ್ತು 2000 ಕ್ಕಿಂತ  ಹೆಚ್ಚು  ಪಿಡಿ ಪತ್ರಗಳು ತಹಶೀಲ್ದಾರಿಗೆ ಮಾಹಿತಿ ನೀಡಿದ್ದೆ.ತಮ್ಮ ಕಾರ್ಯಲದಲ್ಲಿ ಇಟ್ಟುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಲ್ಲಿಕಾರ್ಜುನ ತುಳಸಿಗೇರಿ ಸಿಪಿಐ  ಆನಂದ ಠಕ್ಕನವರ ಮತ್ತು ಆನಂದ ಡೊಣ್ಣಿ ಹಾಗೂ ಲೋಕಾಯುಕ್ತ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.