ಆಹಾರ ಧಾನ್ಯ ಗೋದಾಮಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಭೇಟಿ; ಪರಿಶೀಲನೆ
Lokayukta Justice B.S. Patil visits food grain warehouse; conducts inspection.
ಲೋಕದರ್ಶನ ವರದಿ
ಹಾವೇರಿ, ಆ. ೨೪: ನಗರದ ಎಪಿಎಂಸಿ ಆವರಣದಲ್ಲಿರುವ ಆಹಾರ ಸರಬರಾಜು ಗೋದಾಮಿಗೆ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರು ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋದಾಮಿನಲ್ಲಿರುವ ಪಡಿತರ ಅಕ್ಕಿಯ ದಾಸ್ತಾನು, ದಾಖಲೆಗಳು ಹಾಗೂ ಸಿಬ್ಬಂದಿಯ ಕಾರ್ಯನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಗೋದಾಮಿನ ಸಿಬ್ಬಂದಿ ಹಾಜರಾತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರಿ ಇಲಾಖೆಯ ಪ್ರಮುಖ ಘಟಕವಾಗಿರುವ ಗೋದಾಮಿನಲ್ಲಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸೂಚಿಸಿದರು.
ಸಾರ್ವಜನಿಕರಿಗೆ ಸಂಬAಧಿಸಿದ ಆಹಾರ ಧಾನ್ಯಗಳ ನಿರ್ವಹಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಗೋದಾಮಿನ ಸಿಬ್ಬಂದಿ ಪ್ರತಿದಿನ ಯಾವ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಾರೆ, ಗೋದಾಮು ಯಾವ ಸಮಯಕ್ಕೆ ತೆರೆಯಲಾಗುತ್ತದೆ ಹಾಗೂ ಮುಚ್ಚಲಾಗುತ್ತದೆ ಎಂಬ ಮಾಹಿತಿಯನ್ನು ಸಮರ್ಪಕವಾಗಿ ದಾಖಲಿಸುವಂತೆ ಸಂಬAಧಿಸಿದ ಉಪನಿರ್ದೇಶಕರಿಗೆ ನಿರ್ದೇಶನ ನೀಡಿದರು.
ಗೋದಾಮಿನಲ್ಲಿರುವ ಸಿಬ್ಬಂದಿಯ ಹಾಜರಾತಿ ಕಡ್ಡಾಯವಾಗಿರಬೇಕು. ಅವರಿಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ, ಗೋದಾಮಿನ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಹೇಳಿದರು.
ಪಡಿತರ ಅಕ್ಕಿ ದಾಸ್ತಾನು ಪರಿಶೀಲನೆ
ನಂತರ ಗೋದಾಮಿನಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಪಡಿತರ ಅಕ್ಕಿಯ ದಾಸ್ತಾನು ಕುರಿತು ಅಧಿಕಾರಿಗಳಿಂದ ವಿವರ ಪಡೆದರು. ಪ್ರಸ್ತುತ ಗೋದಾಮಿನಲ್ಲಿರುವ ಅಕ್ಕಿಯ ಪ್ರಮಾಣ, ಇದುವರೆಗೆ ಖರ್ಚಾಗಿರುವ ಪ್ರಮಾಣ ಹಾಗೂ ಉಳಿದಿರುವ ದಾಸ್ತಾನು ಕುರಿತು ಮಾಹಿತಿ ಪಡೆದುಕೊಂಡರು.
ಗೋದಾಮಿನಿಂದ ಪಡಿತರ ಅಕ್ಕಿಯನ್ನು ಯಾರಿಗೆ ವಿತರಿಸಲಾಗಿದೆ, ಯಾವ ಪ್ರಮಾಣದಲ್ಲಿ ತೆಗೆದುಕೊಂಡು ಹೋಗಲಾಗಿದೆ ಹಾಗೂ ವಿತರಣೆಯ ನಂತರ ಎಷ್ಟು ದಾಸ್ತಾನು ಉಳಿದಿದೆ ಎಂಬುದನ್ನು ಸಂಬAಧಿಸಿದ ದಾಖಲೆಗಳೊಂದಿಗೆ ಪರಿಶೀಲಿಸಿದರು. ದಾಸ್ತಾನು ಪುಸ್ತಕದಲ್ಲಿ ನಮೂದಿಸಿರುವ ಪ್ರಮಾಣ ಮತ್ತು ವಾಸ್ತವವಾಗಿ ಗೋದಾಮಿನಲ್ಲಿರುವ ಪಡಿತರ ಅಕ್ಕಿಯ ಪ್ರಮಾಣದಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನೂ ಪರಿಶೀಲಿಸಿದರು.
ಪಡಿತರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಯಾವುದೇ ರೀತಿಯ ಲೋಪದೋಷಗಳಿಗೆ ಅವಕಾಶ ನೀಡಬಾರದು. ಸರ್ಕಾರದಿಂದ ಸಾರ್ವಜನಿಕರಿಗೆ ತಲುಪಬೇಕಾದ ಆಹಾರ ಧಾನ್ಯಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಗೋದಾಮಿನ ಸ್ವಚ್ಛತೆ, ದಾಸ್ತಾನು ಹಾಗೂ ದಾಖಲೆಗಳ ನಿರ್ವಹಣೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸಿದ ಅವರು, ಎಲ್ಲ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದಾಸ್ತಾನು ಮತ್ತು ವಿತರಣೆಯ ವಿವರಗಳು ಸ್ಪಷ್ಟವಾಗಿರಬೇಕು. ಯಾವಾಗ ಎಷ್ಟು ಪ್ರಮಾಣದ ಧಾನ್ಯ ಬಂದಿದೆ, ಎಷ್ಟು ವಿತರಿಸಲಾಗಿದೆ ಹಾಗೂ ಪ್ರಸ್ತುತ ಎಷ್ಟು ದಾಸ್ತಾನು ಉಳಿದಿದೆ ಎಂಬ ಮಾಹಿತಿ ದಾಖಲೆಗಳಲ್ಲಿ ಸ್ಪಷ್ಟವಾಗಿ ಲಭ್ಯವಿರಬೇಕು ಎಂದು ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 