ಲೋಕಾಪುರ ರಾಮದುರ್ಗ ಯಲ್ಲಮ್ಮನ ಸೌದತಿ ಧಾರವಾಡ ಮಾರ್ಗದ ಹೋರಾಟಕ್ಕೆ ಚಾಲನೆ,

ಲೋಕಾಪುರ ರಾಮದುರ್ಗ ಯಲ್ಲಮ್ಮನ ಸೌದತಿ ಧಾರವಾಡ ಮಾರ್ಗದ ಹೋರಾಟಕ್ಕೆ ಚಾಲನೆ,   

  ಬಾಗಲಕೋಟ 04;  ನಗರದ ಚಿರಂತಿಮಠದಲ್ಲಿ ನಡೆದ ಹೋರಾಟ ಸಮಿತಿಯ ಸಭೆಯಲ್ಲಿ ರಾಜ್ಯ ರೈತ ಮುಖಂಡ ಸುಭಾಸ ಶೀರ್ಬುರ ಖ್ಯಾತ ನ್ಯಾಯವಾದಿ ಗಳಾದ ಜೆ ಜೆ ಕುಲಕರ್ಣಿ ಅಹಿಂದ ನಾಯಕ ಕಾಶೀನಾಥ್ ಹುಡೇದ ರಕ್ಷಣಾ ವೇಧಿಕೆಯ ಜಿಲ್ಲಾ ಅಧ್ಯಕ್ಷರು ಬಸವರಾಜ ಧರ್ಮಂತಿ ಮತ್ತು ರೈಲ್ವೆ ಹೋರಾಟದ ಅಧ್ಯಕ್ಷರು ಕೂತುಬುದ್ದಿನ್ ಖಾಜಿ ನ್ಯಾಯವಾದಿ ರಾಜು ಮಣ್ಣಿಕೇರಿ ರಾಮದುರ್ಗದ ಹೋರಾಟಗಾರ ಅಭಿಷೇಕ್ ತಳ್ಳಿಕೇರಿ ಗೈಬು ಜೈನುಖಾನ್ ಡಾಽಽ ಯಾದವಾಡ ಅನೇಕರು ಸೇರಿದಂತೆ ಹೋರಾಟಕ್ಕೆ ಚಾಲನೆ ನೀಡಿದರು. ಚರಂತಿಮಠದ ಶ್ರೀಗಳ ಅನುಪಸ್ತಿಯಲಿ ಅವರ ಸಲಹೆಯಂತೆ ನಡೆದ ಸಭೆಯಲ್ಲಿ ಕೂತುಬುದ್ದಿನ ಖಾಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೆ ನಡೆದ ಕುಡಚಿ ರೈಲು ಮಾರ್ಗ ನಿರ್ಮಾಣದ ಹೋರಾಟ ಮಾದರಿಯಲ್ಲಿ, ಲೋಕಾಪುರ ಧಾರವಾಡ ಮಾರ್ಗ ನಿರ್ಮಾಣ ಹೋರಾಟ ನಡೆಯಲಿದೆ ಎಂದು ಹೇಳಿದರು. ಬಾಗಲಕೋಟ ಮತ್ತು ಬಿಜಾಪೂರ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಭಾಗಕ್ಕೆ ಅನುಕೂಲ ಆಗಲಿರುವ ಈ ಮಾರ್ಗ ಅನುಷ್ಠಾನಗೊಂಡರೆ ಉತ್ತರ ಕರ್ನಾಟಕದ ಅಭಿವೃದ್ದಿಯ ಜೀವನಾಡಿ ಆಗುವುದರಲ್ಲಿ ಎರಡು ಮಾತಿಲ್ಲ ಎಂದರು. ಬಾಗಲಕೋಟ ಜಿಲ್ಲೆಯ ಜನ ಪಕ್ಷಾತಿತ  ಜ್ಯಾತ್ಯಾತೀತ ಸರ್ವರೂ ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು. ನ್ಯಾಯವಾದಿ ಜೆ ಜೆ ಕುಲಕರ್ಣಿ ಮಾತನಾಡಿ ಧಾರವಾಡ ಹೈಕೋರ್ಟ್‌ ಪೀಠಕ್ಕೆ ತರಳಲು ಬಾಗಲಕೋಟ ಬಿಜಾಪುರ ಜಿಲ್ಲೆಯ ನ್ಯಾಯವಾದಿಗಳಿಗೆ ಜನರಿಗೆ ಬಹಳ ಅನುಕೂಲ ಇದ್ದ ಈ ಮಾರ್ಗ ಶೀಘ್ರ ಕಾರ್ಯರೂಪಕ್ಕೆ ತರಬೇಕು ಅಂತಾ ಸರ್ಕಾರಕೆ ಒತ್ತಾಯಿಸಿದರು. ಅಹಿಂದ ಮುಖಂಡ ಕಾಶೀನಾಥ ಹುಡೇದ ಮಾತನಾಡಿ ಸೌದತ್ತಿ ಯಲ್ಲಮ್ಮನ ಭಕ್ತರು ಮಹಾರಾಷ್ಟ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಇದ್ದು ಈ ಮಾರ್ಗ ನಿರ್ಮಾಣ ಆದರೆ ಎಲ್ಲರಿಗೂ ಅನುಕೂಲ ಎಂದು ಹೇಳಿದರು. ರೈತ ಮುಖಂಡ ಸುಭಾಸ ಶೀರ್ಬುರ ಮಾತನಾಡಿ ನಮ್ಮ ಮುಧೋಳ ತಾಲೂಕು ಕೈಗಾರಿಕಾ ನಾಡ ಇದ್ದು ಸರಕು ಸಾಗಾಣಿಕೆಗೆ ರೈಲು ಅನುಕೂಲ ಆಗುತ್ತದೆ, ಕಾರ್ಯರೂಪಕ್ಕೆ ಬಂದರೆ ರೈತರಿಗೆ ಭಾರಿ ಸಹಾಯ ಆಗುತ್ತೆ ಎಂದು ಹೇಳಿದರು. ನ್ಯಾಯವಾದಿ ರಾಜು ಮನ್ನಿಕೇರಿ ಮಾತನಾಡಿ ರಾಮದುರ್ಗ ಭಾಗದಲ್ಲಿ ಶಬರಿ ಕೊಳ, ಸಿರಸಂಗಿ ಕಾಳಮ್ಮ ದೇವಿ, ಶಿವನ ಮೂರ್ತಿ ಇನ್ನು ಹಲವಾರು ಐತಿಹಾಸಿಕ ತಾಣಗಳಿದು ಪ್ರವಾಸಿಗರಿಗೆ ಅನುಕೂಲು ಆಗುತ್ತದೆ ಎಂದು ಹೇಳಿದರು. ಸಭೆಯಲ್ಲಿ ದಾದಾಪಿರಕೆರೂರ,  ಪ್ರೇಮಾ ರಾಠೋಡ , ರೇಣುಕಾ ನ್ಯಾಮಗೌಡರ,  ಮಂಜುಳಾ ಭೂಸಾರೆ,  ಮೈನುದ್ದಿನ ಖಾಜಿ,  ಸುಭಾಸ್ ಚಂದ್ರ ಘೋಡಕೆ,  ಬಿಬಿಜಾನ ತಾಳಿಕೋಟಿ, ಎ. ಆರ್ ಪಠಾಣ, ಡಿ.ಎಪ್‌. ಹಾಜಿ ಉಪಸ್ಥಿತರಿದ್ದರು.