ಲೋಕ ಅದಾಲತ್ ಽ 4850 ಪ್ರಕರಣ ಇತ್ಯರ್ಥ ಽ 4.37 ಕೋಟಿ ಮೊತ್ತದ ರಾಜಿ ಽ ವ್ಯಾಜ್ಯ ಕೈಬಿಟ್ಟು ಒಂದಾದ ದಂಪತಿ

ಲೋಕ ಅದಾಲತ್ ಽ 4850  ಪ್ರಕರಣ ಇತ್ಯರ್ಥ ಽ 4.37 ಕೋಟಿ ಮೊತ್ತದ ರಾಜಿ ಽ ವ್ಯಾಜ್ಯ ಕೈಬಿಟ್ಟು ಒಂದಾದ ದಂಪತಿ Lok Adalat 4850 cases settled 4.37 crores in settlement 4 couples who abandoned litigation and unite

 

ಬ್ಯಾಡಗಿ 19: ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ  ಈ ಬಾರಿ ಕೌಟುಂಬಿಕ ಪ್ರಕರಣಗಳಲ್ಲಿ ಹಾವೇರಿ ತಾಲೂಕು ಕುರುಬಗೊಂಡ ಗ್ರಾಮದ ಈರಮ್ಮ(ನಮ್ರತಾ )ಹಾಗೂ ಶರಣಪ್ಪ ಮುರಿಗೆಪ್ಪ ರಾಯಣ್ಣವರ್ ದಂಪತಿಗಳು ವಿಚ್ಛೇದನಕ್ಕೆ  ವಿವಿಧ ಕಾರಣಕ್ಕೆ ಕೌಟುಂಬಿಕ ವ್ಯಾಜ್ಯ ಹೂಡಿದ್ದರು. ನ್ಯಾಯಾಧೀಶೆ ಸಲಹೆ ಮೇರೆಗೆ ಪರಸ್ಪರ ಒಪ್ಪಿಗೆ ಸೂಚಿಸಿ ರಾಜಿ ಮಾಡಿ. ಸ್ಥಳದಲ್ಲಿಯೇ ಹಾರ ಬದಲಾಯಿಸಿ ಒಂದಾದರು’ರಾಷ್ಟ್ರೀಯ ಲೋಕದಲತ್ ನಲ್ಲಿ ಒಟ್ಟು 4850 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಅದಾಲತ್ನಲ್ಲಿ ಪಾಲ್ಗೊಂಡಿದ್ದ ಕಕ್ಷಿದಾರರು ಪರಸ್ಪರ ಒಪ್ಪಿಗೆ  4.37 ಕೋಟಿ ಮೊತ್ತದಷ್ಟು ರಾಜಿ ಮಾಡಿಕೊಂಡಿದ್ದಾರೆ. ತಾಲ್ಲೂಕು ನ್ಯಾಯಾಲಯದಲ್ಲಿ ಶನಿವಾರ (ಡಿ. 13) ರಾಷ್ಟ್ರೀಯ ಲೋಕ ಅದಾಲತ್ ಏರಿ​‍್ಡಸಲಾಗಿತ್ತು. ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ರಾಜಿ ಆಗಬಹುದಾದ ಪ್ರಕರಣಗಳಲ್ಲಿ ಪರಿಹಾರ ಪಡೆದುಕೊಳ್ಳಲು ಅವಕಾಶವಿತ್ತು. ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅದಾಲತ್ ಯಶಸ್ವಿಗೊಳಿಸಿದ್ದಾರೆ’ ಎಂದು  ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಿರಿಯ ದಿವಾಣಿ ನ್ಯಾಯಾಧೀಶೆ ರಾಜೇಶ್ವರಿ ಜೆ ಪೌರಾಣಿಕ ತಿಳಿಸಿದರು. 

‘ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವದ ಪ್ರಕರಣಗಳನ್ನು ಅದಾಲತ್ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಒಟ್ಟು 4850 ಪ್ರಕರಣಗಳು ಇತ್ಯರ್ಥಗೊಂಡಿವೆ. ?4.37.33.598 ಕೋಟಿ ಮೊತ್ತದಷ್ಟು ಮೊತ್ತದ ರಾಜಿಯಾಗಿದೆ’ ಎಂದರು.ಕೌಟುಂಬಿಕ ಕಲಹ. ಬ್ಯಾಂಕ್ ವಸೂಲಾತಿ ಪ್ರಕರಣ, ಸಿವಿಲ್ ವ್ಯಾಜ್ಯಗಳು. ದೌರ್ಜನ್ಯ. ಲಘು ಅಪರಾಧ, ವಾಜ್ಯೆ ಪೂರ್ವ ವಸೂಲಾತಿ. ರಾಜಿ ಸಂಧಾನ ಪ್ರಕರಣಗಳು. ಗೃಹಕೃತ್ಯ, ವಾಹನ ಅಪಘಾತ ಸೇರಿದಂತೆ ಒಟ್ಟು ಹಿರಿಯ ದಿವಾಣಿ ನ್ಯಾಯಾಲಯದಲ್ಲಿನ 171 ಬಾಕಿ ಪ್ರಕರಣ ಹಾಗೂ 2186 ಪೂರ್ವ ವ್ಯಾಜ್ಯ ಸೇರಿ ಒಟ್ಟು 2357 ಪ್ರಕರಣಗಳು ಇತ್ಯರ್ಥವಾಗಿದ್ದು. ಕಿರಿಯ ದಿವಾಣಿ ನ್ಯಾಯಾಲಯದಲ್ಲಿ 266 ಬಾಕಿ ಪ್ರಕರಣಗಳು ಹಾಗೂ 2227 ವ್ಯಾಜ್ಯಪುರ್ವ ಸೇರಿ ಒಟ್ಟು 2493 ಪ್ರಕರಣಗಳು ಇತ್ಯರ್ಥಗೊಂಡವು.ಈ ಸಂದರ್ಭದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶೆ ರಾಜೇಶ್ವರಿ ಜೆ ಪೌರಾಣಿಕ.ಕಿರಿಯ ದಿವಾಣಿ ನ್ಯಾಯಾಧೀಶ ಸುರೇಶ್ ವಗ್ಗನವರ. ಹಾಗೂ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.