ಲೋಕ ಅದಾಲತ್‌: ರಾಜಿ, ಸಂದಾನಗಳ ಮೂಲಕ ಪ್ರಕಣಗಳು ಇತ್ಯರ್ಥ

ಲೋಕ ಅದಾಲತ್‌: ರಾಜಿ, ಸಂದಾನಗಳ ಮೂಲಕ ಪ್ರಕಣಗಳು ಇತ್ಯರ್ಥ Lok Adalat: Disputes are resolved through compromise and mediation.

ಲೋಕ ಅದಾಲತ್‌: ರಾಜಿ, ಸಂದಾನಗಳ ಮೂಲಕ ಪ್ರಕಣಗಳು ಇತ್ಯರ್ಥ

ಬ್ಯಾಡಗಿ 13: ಪಟ್ಟಣ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ಜರುಗಿದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ತಾಲೂಕುನಲ್ಲಿ ಎರಡು ಸಿವಿಲ್ ಮತ್ತು ಕ್ರಿಮಿನಲ್ ನ್ಯಾಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಇತ್ಯರ್ಥವಾಗುವಂತ ಪ್ರಕರಣಗಳು ಮತ್ತು ನ್ಯಾಯಾಲಯಗಳಲ್ಲಿ ಇನ್ನೂ  ದಾಖಲಾಗದೆ ಇರುವ ವ್ಯಾಜ್ಯಪೂರ್ವ ಮತ್ತು ರಾಜಿಯಾಗಬಲ್ಲ ಅಪರಾಧ ಪ್ರಕರಣಗಳು ಹಾಗೂ ಬ್ಯಾಂಕ್ ವಸುಲಾತಿ ಪ್ರಕರಣಗಳು. ಇತರೆ ಪ್ರಕಣಗಳನ್ನು ರಾಜಿಸಂಧಾನ ಮೂಲಕ ಶನಿವಾರ 12.07 25 ರಂದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮವನ್ನು ತಾಲೂಕಿನ ಎರಡು ನ್ಯಾಯಾಲಯಗಳಲ್ಲಿ ಬಾಕಿ ಇದ್ದ ರಾಜೀಯಾಗಬಲ್ಲ ಕ್ರಿಮಿನಲ್ ಪ್ರಕರಣಗಳು. ಚೆಕ್ ಬೌನ್ಸ್‌. ಮೋಟಾರು ವಾಹನ  ಅಪಘಾತ ಪ್ರಕರಣ.ಸಿವಿಲ್ ವ್ಯಾಜ್ಯಗಳು .ಅಮಲ್ಜಾರಿ.ಜೀವನಾಂಶ. ಗೃಹ ಕೃತ್ಯ  ದೌರ್ಜನ್ಯ ಮತ್ತು ಲಘು ಅಪರಾಧ ಪ್ರಕರಣಗಳನ್ನು ಒಳಗೊಂಡಂತೆ ಹಾಗೂ ವ್ಯಾಜ್ಯಪೂರ್ವ ಸಾಲ ಮಸೂಲಾತಿ. ನೀರಿನ ಕರಗಳು ಮತ್ತು ಟೆಲಿಫೋನ್ ಕರೆಗಳು ಪ್ರಕರಣಗಳು ಸೇರಿದಂತೆ ಒಟ್ಟು 6,984 ಪ್ರಕರಣಗಳನ್ನು ಗೊಳಿಸಲಾಗಿದೆ ಹಾಗೂ ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸಲಾಗಿದೆ. ಹಾಗೂ ರಾಜಿ ಯಾದ ಒಟ್ಟು ಪ್ರಕರಣಗಳ ಮೊತ್ತ ರೂ. 48.411.162-00 ಆಗಿರುತ್ತದೆ ಎಂದು ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ನ್ಯಾಯಾಧೀಶ  ಅಮೂಲ್ ಜೆ ಹಿರೇಕುಡಿ ತಿಳಿಸಿದರು. ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶ ಸುರೇಶ್ ವಗ್ಗನವರ್‌. ಎಲ್ಲಾ ವಕೀಲರುಗಳು. ಎಲ್ಲಾ ಕಕ್ಷಿಗಾರರು ಹಾಗೂ ಪೊಲೀಸ್ ಇಲಾಖೆಗಳು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.