ರಾಯಬಾಗ 14: ಪಕ್ಷಗಾರರು ತಮ್ಮ ತಮ್ಮ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಬಗೆ ಹರಿಸಿಕೊಂಡು ನೆಮ್ಮದಿಯಿಂದ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.
ಶನಿವಾರ ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ನಡೆದ ಬೃಹತ್ ಲೋಕ ಅದಾಲತದಲ್ಲಿ 2110 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸಿ ಮಾತನಾಡಿದ ಅವರು, ನೆರೆಹೊರೆಯವರೊಂದಿಗೆ ಸೌಹಾರ್ದತೆಯಿಂದ ಬದುಕಬೇಕು. ಚಿಕ್ಕ ಪುಟ್ಟ ಪ್ರಕರಣಗಳನ್ನು ತಮ್ಮಲ್ಲಿ ಬಗೆ ಹರಿಸಿಕೊಳ್ಳಬೇಕೆಂದು ತಿಳಿಸಿದರು.
ವಕೀಲರಾದ ಎಸ್.ಕೆ.ರೆಂಟೆ, ಎಸ್.ಬಿ.ಪಾಟೀಲ ಜಿ.ಎಸ್.ಪವಾರ, ಕೇ.ಎಸ್.ಫುಂಡಿಪಲ್ಲೆ, ಸಾರಿಕಾ ಕಾಂಬಳೆ, ಶ್ರೀದೇವಿ ನಾಯಿಕ, ಯು.ಎನ್.ಉಮ್ರಾಣಿ ಸೇರಿ ಪಕ್ಷಗಾರರು ಮತ್ತು ವಕೀಲರು, ಸಿಬ್ಬಂದಿ ಇದ್ದರು.