ಲಾಕ್‌ಡೌನ್: ಪೊಲೀಸರಿಂದ ಮನೆಬಾಗಿಲಿಗೆ ಅಗತ್ಯ ವಸ್ತುಗಳ ವಿತರಣೆ

ಕುಂದಾಪುರ, ಏಪ್ರಿಲ್ 13,ಕೊವಿದ್ -19 ಲಾಕ್‌ಡೌನ್ ಜಾರಿಯ ಹೊರೆ ಹೊತ್ತಿರುವ ನಗರ ಪೊಲೀಸರು ಜನರು ಮನೆಗಳಲ್ಲೇ ಇರುವಂತಾಗಲು ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ವಿತರಿಸಲು ನಿರ್ಧರಿಸಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.ಕುಂದಾಪುರ, ಬೈಂದೂರು, ಗಂಗೊಳ್ಳಿ, ಶಂಕರ ನಾರಾಯಣ, ಕುಂದಾಪುರ ಗ್ರಾಮೀಣ, ಕೋಟಾ ಮತ್ತು ಅಮಾವಾಸೆಬೈಲ್ ನಲ್ಲಿ ಮನೆಗಳಿಗೆ ವಸ್ತುಗಳನ್ನು ತಲುಪಿಸಲಿದ್ದಾರೆ.ಇಂದಿನಿಂದ (ಏಪ್ರಿಲ್ 13) ಮೂರು ದಿನಗಳವರೆಗೆ ಪೊಲೀಸರು ಈ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ.ಈ ಉಪಕ್ರಮಕ್ಕಾಗಿ ಪ್ರತಿ ಪಂಚಾಯತ್‌ನಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಜನರು ಈ ಸದಸ್ಯರಿಗೆ ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ನೀಡಬಹುದಾಗಿದೆ. ಆಯ್ದ ಸದಸ್ಯರು ಆದಷ್ಟು ಬೇಗ ವಸ್ತುಗಳನ್ನು ತಲುಪಿಸುತ್ತಾರೆ ಎಂದು ಅವರು ಹೇಳಿದ್ದಾರೆ.