ಮೊರಬದಲ್ಲಿ ಕಟ್ಟಡ ಕಾರ್ಮಿಕರ ಸ್ಥಳೀಯ ಸಮ್ಮೇಳನ ಯಶಸ್ವಿ
Local conference of construction workers in Moraba successful
ಹುಬ್ಬಳ್ಳಿ 22: ಎಐಯುಟಿಯುಸಿ : ಮೊರಬ ಸ್ಥಳೀಯ ಸಮ್ಮೇಳನದ ಕರೆ : ಕಟ್ಟಡ ಕಾರ್ಮಿಕರೇ ಒಂದಾಗಿ : ನಿಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಿ! ಮಾನ್ಯರೇ,ಎಐಯುಟಿಯುಸಿ ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ನಿನ್ನೆ ರಾತ್ರಿ ನವಲಗುಂದ ತಾಲೂಕಿನ ಮೊರಬದಲ್ಲಿ ಹೋಬಳಿ ಮಟ್ಟದ ಕಟ್ಟಡ ಕಾರ್ಮಿಕರ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಜಿಲ್ಲಾ ಅಧ್ಯಕ್ಷರಾದ ಗಂಗಾಧರ್ ಬಡಿಗೇರ ಮಾತನಾಡಿ, ಕಾರ್ಮಿಕರ ರಾಜ ಹೋರಾಟದಿಂದಾಗಿ ಕಲ್ಯಾಣ ಮಂಡಳಿಯು ಅಸ್ತಿತ್ವಕ್ಕೆ ಬಂದಿದ್ದು ಅವರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಮದುವೆ ಸಹಾಯಧನ, 60 ವರ್ಷದ ಪಿಂಚಣಿ, ಕಾರ್ಮಿಕ ತೀರಿಕೊಂಡರೆ ಕುಟುಂಬ ವರ್ಗದವರಿಗೆ ಸಹಾಯಧನ ರಾಶಿ ಇತ್ಯಾದಿ ಎಲ್ಲಾ ಹಕ್ಕುಗಳನ್ನು ಪಡೆದುಕೊಳ್ಳಲು ಕಟ್ಟಡ ಕಾರ್ಮಿಕರು ಏಜೆಂಟರ ಬಲೆಗೆ ಬೀಳದೆ ಒಗ್ಗಟ್ಟಾಗಿ ಹೋರಾಟದ ಮೂಲಕ ಮುಂದೆ ಬರಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾ ಕಾರ್ಯದರ್ಶಿ ಮೊರಬದವರೇ ಆದ ಯೋಗಪ್ಪ ಜೋತೆಪ್ಪನವರ್ ಮಾತನಾಡಿ, ಕಟ್ಟಡ ಕಾರ್ಮಿಕನಿಗೆ ಸೇರಿದ ಹಣ ವನ್ನು ಕಲ್ಯಾಣ ಮಂಡಳಿಯು ವಿವಿಧ ಕಿಟ್ಟುಗಳು, ಕೌಶಲ್ಯ ಕೇಂದ್ರಗಳು ಕಾರ್ಮಿಕ ಭಾವನೆಗಳು ಇತ್ಯಾದಿಗಳಲ್ಲಿಯೇ ಹಣವನ್ನು ಖರ್ಚು ಮಾಡುತ್ತಿದೆ. ಆದರೆ ಕಟ್ಟಡ ಕಾರ್ಮಿಕನಿಗೆ ಎರಡು ವರ್ಷದ ಬಾಗೇಶ್ ಸ್ಕಾಲರ್ಶಿಪ್ ಇನ್ನೂ ಬಿಡುಗಡೆ ಮಾಡಿಲ್ಲ. ಅವರಿಗೆ ಕಿಟ್ಟುಗಳು ಬೇಡ ಬದಲಾಗಿ ಶೈಕ್ಷಣಿಕ ಸಹಾಯಧನವನ್ನು ಏರಿಕೆ ಮಾಡಬೇಕು. ಕಟ್ಟಡ ಕಾರ್ಮಿಕನ ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯಬೇಡವೇ ಎಂದು ಮಂಡಳಿಯನ್ನು ಪ್ರಶ್ನಿಸಿದರು.
ಕಟ್ಟಡ ಕಾರ್ಮಿಕರಿಗೆ ಹೋರಾಟದ ದಾರಿ ಬಿಟ್ಟು ಬೇರೆ ದಾರಿ ಇಲ್ಲ. ಈ ನಿಟ್ಟಿನಲ್ಲಿ ಪ್ರತಿ ಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರು ಘಟಕ ರಚಿಸಿಕೊಳ್ಳಬೇಕು ಎಂದರು. ಸಮ್ಮೇಳನದ ಕೊನೆಯಲ್ಲಿ ಹೋಬಳಿ ಮಟ್ಟದ ಸ್ಥಳೀಯ ಸಮಿತಿ ಆಯ್ಕೆಯಾಯಿತು. ಸಮಿತಿಯ ಅಧ್ಯಕ್ಷರಾಗಿ ನಿಂಗಪ್ಪ ಗುಜ್ಜಣ್ಣವರ, ಉಪಾಧ್ಯಕ್ಷರುಗಳಾಗಿ ಮಾಬುಸಾಬ್ ಬಿಜಾಪುರ್ ಮತ್ತು ರಾಮಪ್ಪ ತಿರ್ಲಾಪುರ್, ವೀರಭದ್ರ್ಪ ಕನಕೂರ್, ಕಾರ್ಯದರ್ಶಿಯಾಗಿ ಬಸವರಾಜ್ ಗೋಡಿಕಟ್ಟಿ, ಜಂಟಿ ಕಾರ್ಯದರ್ಶಿಗಳಾಗಿ ಅರ್ಜುನ್ ಗೋಲ್ನಾಯಕರ್, ಸಮೀರ್ ಎಲಿಗಾರ್, ಶರಣಪ್ಪ ಮಾಯಪ್ಪನವರ್, ಸಾಗರ್ ಹಿತ್ತಲಮನಿ, ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಬಾಶುಮಿಯಾ ಬಡೆಮಿಯಾ ಗಂಗಪ್ಪ ಕಲ್ಲಮ್ಮನವರ್ ಸೋಮಣ್ಣ ಅಸುಂಡಿ, ಬಾಬುಸಾಬ್ ಧಾರವಾಡ, ಶಿವಾನಂದ ಹಡಪದ್, ಶಿವಾನಂದ್ ತಿರ್ಲಾಪುರ್, ತಿಪ್ಪಣ್ಣ ಅಮ್ಮಿನಭಾವಿ ಪಾಂಡುರಂಗ ಪತ್ತಾರ್, ಸುರೇಶ ಅಜಗೊಂಡ ಒಳಗೊಂಡ ಸಮಿತಿ ಸರ್ವಾನುಮತದಿಂದ ಆಯ್ಕೆಯಾಯಿತು. ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರು ಮಾತನಾಡಿದರು ಮತ್ತು ಕಾರ್ಯದರ್ಶಿಗಳು ವಂದನಾರೆ್ಣ ಮಾಡಿದರು.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 