ಮಕ್ಕಳ ಮದುಗೆ ಸಾಲ: ಅಳಿಯನ ಚಿನ್ನಕ್ಕೆ ಕನ್ನ ಹಾಕಿದ ಐನಾತಿ ಅತ್ತೆ : ಸಂಬಂಧಿಯ ಸಹಕಾರ
Loan for children's wedding: mother-in-law stole son-in-law's gold: Relative's cooperation
ಬೆಳಗಾವಿ 02: ಮಕ್ಕಳ ಮದುವೆಗೆ ಮಾಡಿದ್ದ ಸಾಲ ತೀರಿಸಲು ಹಿರಿಯ ಅಳಿಯನ ಮನೆಯ ಚಿನ್ನಕ್ಕೆ ಕನ್ನ ಹಾಕಿದ್ದ ಐನಾತಿ ಅತ್ತೆಗೆ ಪೊಲೀಸರು ಜೈಲು ದಾರಿ ತೋರಿಸಿರುವ ಘಟನೆ ಬೆಳಗಾವಿ ಯಲ್ಲಿ ವರದಿಯಾಗಿದೆ.
ಈ ಘಟನೆಯಲ್ಲಿ ಬೆಳಗಾವಿಯ ಪಿರಣವಾಡಿ ನಿವಾಸಿ ಉಜ್ವಲಾ ಕಮ್ಮಾರ ಹಾಗೂ ಶಿವಾ ಅಪ್ಪಯನವರ ಬಂಧಿತರಾಗಿದ್ದಾರೆ. ಅತ್ತೆ ಉಜ್ವಲಾ ಇವಳು ಹಿರಿಯ ಅಳಿಯ ಸಂಪಾದನೆ ಮಾಡಿ ಖರೀದಿಸಿದ್ದ ಚಿನ್ನಕ್ಕೆ ಕನ್ನ ಹಾಕಿ ತಗಲಾಕಿಕೊಂಡಿದ್ದಾಳೆ. ಅಳಿಯ, ಮಗಳು ಮನೆಯಲ್ಲಿ ಇಲ್ಲದಾಗ ಸಮಯ ಸಾಧಿಸಿರುವ ಅತ್ತೆ ಅಳಿಯನ ಮನೆಯಲ್ಲಿದ್ದ 16.57 ಲಕ್ಷ ಮೌಲ್ಯದ 110 ಚಿನ್ನದ ಆಭರಣ ಎಗರಿಸಿದ್ದರು.
ಸಂಬಂಧಿ ಆಗಿರುವ ಶಿವಾ ಅಪ್ಪಯನವರ ಜೊತೆಗೂಡಿ ಕೃತ್ಯ ಅತ್ತೆ ಉಜ್ವಲಾ ಈ ಕೃತ್ಯ ಎಸಗಿದ್ದಾಳೆ. ಅತ್ತೆಗೆ ಮನೆಯಲ್ಲಿರುವಂತೆ ಹೇಳಿ ಸ್ನೇಹಿತರ ಮದುವೆಗೆಂದು ಹೋಗಿದ್ದ ಅಳಿಯ ಮತ್ತು ಮಗಳು ಮನೆಯಲ್ಲಿದ್ದ ಪುತ್ರಿಯ ಚಿನ್ನದ ಬಳೆ, ಉಂಗುರ, ನೆಕ್ಲೇಸ್, ಗಂಟನ್ ಸೇರಿ 110 ಗ್ರಾಮ ಚಿನ್ನಾಭರಣ ಕಳ್ಳತನ ಮಾಡಿದ್ದರು.
ಮದುವೆ ಮುಗಿಸಿ ಮನೆಗೆ ಬಂದು ನೋಡಿದಾಗ ಚಿನ್ನಾಭರಣ ಕಳ್ಳತನ ಆಗಿರುವುದು ಅಳಿಯನ ಗಮನಕ್ಕೆ ಬಂದಿದೆ.
ಚಿನ್ನಾಭರಣ ಕಳ್ಳತನ ಆದ ಬಗ್ಗೆ ಅಳಿಯ ಅತ್ತೆಯನ್ನು ವಿಚಾರಿಸಿದಾಗ ನನಗೆ ಗೊತ್ತಿಲ್ಲ ಎಂದಾಗ ಟಿಳಕವಾಡಿ ಠಾಣೆ ಪೊಲೀಸರಿಗೆ ಅಳಿಯನ ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಾಗ ಪೊಲೀಸರ ಎದುರೂ ಅತ್ತೆಯ ಹೈಡ್ರಾಮಾ ನಡೆದಿದೆ. ಪೊಲೀಸರು ತಮ್ಮದೆ ಶೈಲಿಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ತಾನೇ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿರುವ ದಾಗಿ ಅತ್ತೆ ಬಾಯಿಬಿಟ್ಟಿದ್ದಾಳೆ. ತಕ್ಷಣವೇ ಉಜ್ವಲ, ಶಿವಾ ಬಳಿಯಿದ್ದ ಚಿನ್ನಾಭರಣವನ್ನು ಟಿಳಕವಾಡಿ ಠಾಣೆ ಪೊಲೀಸರು ವಶಪಡಿಸಿಕೊಂಡು ಅತ್ತೆ ಮತ್ತು ಅವಳ ಸಹಚರನನ್ನು ಜೈಲಿಗೆ ಅಟ್ಟಿದ್ದಾರೆ.

11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 