ದಾರ್ಶನಿಕರ ಬದುಕು ನಮಗೆ ದಾರಿ ದೀಪ: ಯಡ್ರಾಮಿ
Lives of visionaries enlighten us: Ydrami
ತಾಳಿಕೋಟಿ 23: ತಮ್ಮ ಛಲ ಬಿಡದ ಪ್ರಯತ್ನದಿಂದ ದೇವ ಗಂಗೆಯನ್ನು ಭೂಮಿಗೆ ತಂದ ಭಗೀರಥ ಮಹರ್ಷಿಗಳ ತ್ಯಾಗ ಮತ್ತು ತಪಸ್ಸನ್ನು ಸ್ಮರಿಸುವುದರ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಅಗತ್ಯ ಇದೆ ಎಂದು ತಾಲೂಕು ಪಂಚಾಯತ ಸಹಾಯಕ ನಿರ್ದೇಶಕಿ ಸುಜಾತ ಯಡ್ರಾಮಿ ಹೇಳಿದರು. ಗುರುವಾರ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕ ಆಡಳಿತದ ವತಿಯಿಂದ ಮಹರ್ಷಿ ಶ್ರೀ ಭಗೀರಥರ ಜಯಂತಿ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹರ್ಷಿ ಭಗೀರಥರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ಜೀವನದ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಎಲ್ಲರೂ ಒಂದಾಗಿ ಮಾಡಬೇಕಾದ ಅಗತ್ಯವಿದೆ ಎಂದರು. ಶಿಕ್ಷಕ ಬಸವರಾಜ ಮಸರಕಲ್ಲ ಅವರು ಮಾತನಾಡಿ ಮಹರ್ಷಿ ಭಗೀರಥರ ಜಯಂತಿ ಅವರ ತಪಸ್ಸು ತ್ಯಾಗ ಮತ್ತು ಜನಕಲ್ಯಾಣದ ಆದರ್ಶಗಳನ್ನು ಸ್ಮರಿಸುವ ದಿನವಾಗಿದೆ. ಅವರ ತತ್ವಾದರ್ಶಗಳನ್ನು ಅನುದಿನವೂ ಅನುಸರಿಸುವ ಕೆಲಸವಾಗಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಭಗೀರಥ ಸಮಾಜದ ಪ್ರಮುಖರಾದ ಯಮನಪ್ಪ ಸೌಕಾರ ಮಸರಕಲ್ಲ, ಮಲ್ಲು ಮೇಟಿ, ರಮೇಶ ಯರಕಿಹಾಳ, ಬಸವರಾಜ ದೊಡಮನಿ, ಸಿದ್ದರಾಮಪ್ಪ ಬಿಳೇಭಾವಿ, ಜಗದೀಶ್ ಮಸರಕಲ್ಲ,ಶೇಖಪ್ಪ ಕನ್ನೊಳ್ಳಿ,ಆನಂದ ಮಸರಕಲ್, ಬಸ್ಸು ಮಸರಕಲ್ಲ,ಭೀಮಣ್ಣ, ಶಿರಸ್ತೆದಾರ ಜೆ.ಆರ್.ಜೈನಾಪೂರ,ಸಿಆರ್ಸಿ ರಾಜಾಸಿಂಗ್ ವಿಜಾಪುರ,ರಾಜು ಮೂಕಿಹಾಳ ಹಾಗೂ ಸಿಬ್ಬಂದಿಗಳು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 