ಪರಿಸರ ಇಲಾಖೆ ವೈಫಲ್ಯದಿಂದ ಜೀವ ಹಾರಿ ಹೋಗುತ್ತಿವೆ: ರಾಜೂರು

ಪರಿಸರ ಇಲಾಖೆ ವೈಫಲ್ಯದಿಂದ ಜೀವ ಹಾರಿ ಹೋಗುತ್ತಿವೆ: ರಾಜೂರು Lives are being lost due to the failure of the Environment Department: Rajur

ಲೋಕದರ್ಶನ ವರದಿ

                                                               161ನೇ ದಿನ ಪೂರ್ಣಗೊಳಿಸಿದ ಬಲ್ಡೋಟ ತೊಲಗಿಸಿ ಧರಣಿ 

         ಕೊಪ್ಪಳ 09:  ನಗರಸಭೆ ಮುಂದೆ ನಡೆದಿರುವ ಬಲ್ಡೋಟ ಹಟಾವೋ ಹೋರಾಟ 161ನೇ ದಿನ ಪೂರ್ಣಗೊಳಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಎಂದು ನಿವೃತ್ತ ಪ್ರಾಚಾರ್ಯ ಎಸ್‌. ಬಿ. ರಾಜೂರು, ಕೇಂದ್ರ ಪರಿಸರ ಇಲಾಖೆ ಶಿಫಾರಸ್ಸು ಮಾಡಿದಂತೆ ಹಿರೇಬಗನಾಳ, ಅಲ್ಲಾನಗರ ಸುತ್ತಲಿನ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹ ಮಾಡಿದರು.  

          ಅಲ್ಲದೇ ಇಲ್ಲಿ ಪರಿಸರ ಇಲಾಖೆ ಇದ್ದು ಇಲ್ಲದಂತಾಗಿದೆ, ಇಷ್ಟೊಂದು ಅಪಾಯಕಾರಿ ಮಾಲಿನ್ಯ ಉಂಟಾಗಲು ಇದರ ಅಧಿಕಾರಿಗಳೇ ಕಾರಣರಾಗಿದ್ದು, ಅವರೇ ಜನರ ಜೀವ ಹಾರಿ ಹೋಗಲು ಕಾರಣವಾಗಿದ್ದಾರೆ ಎಂದರು. ಇಲ್ಲಿನ 22 ಹಳ್ಳಿಗಳಲ್ಲಿ 50 ಸಾವಿರ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಸಾಯುವಾಗಲೂ ಎಚ್ಚೆತ್ತುಕೊಂಡು ತಕ್ಷಣವೇ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಮುಚ್ಚಬೇಕಿತ್ತು, ಆದರೆ ಅವರು ದುರಾಸೆಗಾಗಿ ಜನರಿಗೆ ತಮ್ಮ ನೌಕರಿಗೆ ಮೋಸ ಮಾಡುತ್ತಿದ್ದಾರೆ, ರೋಗಗಳಿಗೆ ತುತ್ತಾಗುವ ಜನರು ಸಿಡಿದೇಳಲು ಈ ಇಲಾಖೆಯೇ ಕಾರಣವಾಗುತ್ತದೆ ಎಂದರು. 

ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಶೀಘ್ರವೇ ಸರಕಾರಿ ಇಲಾಖೆಗಳ ಮುಂದೆ ನೂರಾರು ಜನರು ಕಿರಿಕಿರಿ ಅಭಿಯಾನ ಆರಂಭ ಮಾಡುತ್ತೇವೆ, ಪ್ರತಿ ಎರಡು ಮೂರು ದಿನಕ್ಕೊಮ್ಮೆ ಒಂದು ಇಲಾಖೆಯ ಮುಂದೆ ಹೋಗಿ ಘೋಷಣೆ ಕೂಗಿ ಹಕ್ಕು ಪ್ರತಿಪಾದಿಸುತ್ತೇವೆ, ಹೋರಾಟದ ವೇದಿಕೆಯಿಂದ ಇಲಾಖೆಯ ಕಛೇರಿವರೆಗೆ ಮೆರವಣಿಗೆ ಮೂಲಕ ಹೋಗಿ ಘೋಷಣೆ ಹಾಕುವದು ಅಭಿಯಾನದ ಉದ್ದೇಶ, ಅಲ್ಲದೇ 175ನೇ ದಿನದ ಸಮಾವೇಶಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಕುಂ. ವೀರಭದ್ರ​‍್ಪ ಅವರು ಬರುತ್ತಿದ್ದಾರೆ, ಕೆಲವೇ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವದು ಎಂದರು. 

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಶಂಭುಲಿಂಗಪ್ಪ ಹರಗೇರಿ, ರವಿ ಕಾಂತನವರ, ಬಿ.ಜಿ. ಕರಿಗಾರ, ರಾಜಶೇಖರ ಏಳುಬಾವಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಪಂಪಣ್ಣ ಚಿಂತಪಲ್ಲಿ, ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ, ಯಮನೂರ​‍್ಪ ಹಳ್ಳಿಕೇರಿ, ಶಾಂತಯ್ಯ ಅಂಗಡಿ, ಬಸವರಾಜಪ್ಪ ಶೆಟ್ಟರ್, ಗುರ​‍್ಪ ಕಲಕೇರಿ, ವಿಜಯ ಮಹಾಂತೇಶ ಹಟ್ಟಿ, ಬಸಪ್ಪ ಕಲಕೇರಿ, ಶಿವಪ್ಪ ಜಲ್ಲಿ, ರುದ್ರ​‍್ಪ ಭಂಡಾರಿ, ರಾಮಲಿಂಗಯ್ಯ ಶಾಸ್ತ್ರಿ, ಗವಿಸಿದ್ದಪ್ಪ ಚಿಕೇನಕೊಪ್ಪ, ರತ್ನಮ್ಮ ದೊಡ್ಡಮನಿ, ಸುಂಕಮ್ಮ ಪಡಚಿಂತಿ ಇದ್ದರು.