ಇಂದು ನೇರ ಫೋನ್‌-ಇನ್ ಕಾರ್ಯಕ್ರಮ

Live phone-in program today

ಲೋಕದರ್ಶನ ವರದಿ 

ಇಂದು ನೇರ ಫೋನ್‌-ಇನ್ ಕಾರ್ಯಕ್ರಮ 

ಬೆಳಗಾವಿ 21: ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಕೇಂದ್ರ ಬೆಳಗಾವಿ, ಕಾಹೇರ್ ಬೆಳಗಾವಿ ಮತ್ತು ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಮಂಗಳವಾರ ದಿನಾಂಕ 22ನೆ ಏಪ್ರಿಲ್ 2025 ರಂದು ಬೆಳಿಗ್ಗೆ 10 ರಿಂದ 11 ಗಂಟೆ ವರೆಗೆ ದ್ವಿತೀಯ ಪಿಯುಸಿ ನಂತರ ಮುಂದೇನು? ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಕೋರ್ಸ್‌ ಆಯ್ಕೆ ಕುರಿತು ನೇರ ಫೋನ್‌-ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.  

ಬೆಳಗಾವಿಯ ಕಾಹೇರ್‌ನ ಸ್ಕೂಲ್ ಆಫ್ ಅಲೈಡ್ ಹೇಲ್ತ್‌ ಸೈನ್ಸಸ್‌ನ ಪ್ರಾಚಾರ್ಯರು ಮತ್ತು ಡೀನ್ ಡಾ. ಉರ್ಮಿಳಾ ಕಾಗಲ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಪೋಷಕರು ಸೂಕ್ತವಾದ ವೃತ್ತಿ ಮತ್ತು ಕೋರ್ಸ್‌ ಆಯ್ಕೆ ಕುರಿತು ತಜ್ಞರೊಂದಿಗೆ ಮಾತನಾಡಲು 9019904904 ಸಂಖ್ಯೆಗೆ ಕರೆ ಮಾಡಿ. ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ರೇಡಿಯೋ ಈಗ ಮೊಬೈಲ್ ಆಫ್‌ನಲ್ಲೂ ಲಭ್ಯ ಎಂದು ನಿಲಯ ನಿರ್ದೇಶಕ ಡಾ. ಸುನಿಲ್ ಜಲಾಲಪೂರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.