ಶೀಗಣಾಪುರದಲ್ಲಿ ನಾಗರಪಂಚಮಿ ವೇಳೆ ಜೀವಂತ ನಾಗರಹಾವು ಪ್ರತ್ಯಕ್ಷ

ಶೀಗಣಾಪುರದಲ್ಲಿ ನಾಗರಪಂಚಮಿ ವೇಳೆ ಜೀವಂತ ನಾಗರಹಾವು ಪ್ರತ್ಯಕ್ಷ  Live cobra spotted in Shiganapur during Nagara Panchami


ಇಂಡಿ 17 : ತಾಲ್ಲೂಕಿನ ಶೀಗಣಾಪುರ ಗ್ರಾಮದಲ್ಲಿ ನಾಗರಪಂಚಮಿ ಅಂಗವಾಗಿ ನಾಗರಹಾವಿನ ಆಕೃತಿಗೆ ಹಾಲೆರೆಯುತ್ತಿದ್ದ ಸಂದರ್ಭದಲ್ಲಿ ಜೀವಂತ ನಾಗರಹಾವು ಪ್ರತ್ಯಕ್ಷವಾಗಿದ್ದು, ಭಕ್ತರಲ್ಲಿ ಕುತೂಹಲ ಮೂಡಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ನಾಗರಪಂಚಮಿ ಹಿನ್ನೆಲೆಯಲ್ಲಿ ಗ್ರಾಮದ ತಾಯಂದಿರು ಕೈಯಿಂದ ತಯಾರಿಸಿದ ನಾಗರಹಾವಿನ ಆಕೃತಿಗೆ ಹಾಲೆರೆಯಲು ತೆರಳಿದ್ದರು. ಈ ವೇಳೆ   ಲಕ್ಷ್ಮೀ ತಾಯಿ ಹಾಗೂ ಪವಾಡ ಪುರುಷ  ರುದ್ರಮಹಾಶಿಯೋಗಿಗಳ ಆವರಣದಲ್ಲಿ ಜೀವಂತ ನಾಗರಹಾವು ಕಾಣಿಸಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಯಂದಿರು ನಾಗರಾಜನ ಆಕೃತಿಗೆ ಹಾಲೆರೆಯುತ್ತಿದ್ದ ಸಂದರ್ಭದಲ್ಲಿ ಜೀವಂತ ನಾಗರಹಾವು ಕಾಣಿಸಿಕೊಂಡಿರುವುದನ್ನು ಹಲವರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗ್ರಾಮಸ್ಥರು ಹಾಗೂ ಭಕ್ತರಲ್ಲಿ ಚರ್ಚೆಗೆ ಕಾರಣವಾಗಿದೆ. ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಸಂದರ್ಶಕರ ಮಂಡಳಿಯ ನಾಮನಿರ್ದೇಶಿತ ಸದಸ್ಯ ಪ್ರಕಾಶಗೌಡ ಪಾಟೀಲ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.