ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲು-ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ
Literature is a crutch for accused prisoners - IGP Dr. B.R. Ravikantegowda
ಹಾವೇರಿ 19 : ಅಪರಾಧ ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲಾಗುತ್ತದೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ಹಾವೇರಿ ಜೈಲಿನಲ್ಲಿ ಗುರುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೂರು ದಿನಗಳವರೆಗೆ ಹಮ್ಮಿಕೊಳ್ಳಲಾದ ಕೈದಿಗಳಿಗೆ ಸಾಹಿತ್ಯ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಗಿಸಿ ಅವರು ಮಾತನಾಡಿದರು.
ಮೂರು ದಿನಗಳ ಸಾಹಿತ್ಯ ಕಮ್ಮಟದ ಸದುಪಯೋಗಪಡೆದುಕೊಳ್ಳಿ. ಭಜನೆ ನಂತರ ಕೊಡುವ ಪ್ರಸಾದವನ್ನು ತಿಂದು ಕೈ ಒರೆಸಿಕೊಂಡ ಹಾಗೆ ಮಾಡದೆ, ನಿಮ್ಮ ಬದುಕನ್ನು ಒರೆಗೆ ಹಚ್ಚಿರಿ. ಜೊತೆಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಸಿಟ್ಟಿನ ಮನುಷ್ಯರಾಗಿದ್ದ ನನ್ನ ತಂದೆ ಹಾಗೂ ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಓದದಿದ್ದರೆ ಕ್ರಿಮಿನಲ್ ಆಗುತ್ತಿದ್ದೆ ಎಂದು ಹೇಳುತ್ತಿದ್ದರು. ಸಿಟ್ಟಿನ ನಿಯಂತ್ರಣಕ್ಕೆ ಮತ್ತು ಬದುಕು ಕಟ್ಟಿಕೊಳ್ಳಲು ಸಮೃದ್ಧವಾದ ಸಾಹಿತ್ಯ ಓದಿರಿ ಎಂದು ಕಿವಿಮಾತು ಹೇಳಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 