ಮನಸ್ಸನ್ನು ನಿಯಂತ್ರಿಸುವ ಶಕ್ತಿ ಸಾಹಿತ್ಯಕ್ಕಿದೆ : ಬಸರಕೋಡ
Literature has the power to control the mind: Basarakoda
ಬಾಗಲಕೋಟೆ 04: ಕನ್ನಡ ಸಾಹಿತ್ಯ ಶ್ರೇಷ್ಠವಾದದ್ದು. ಇಂದಿನ ಕಾಲಘಟ್ಟದಲ್ಲಿ ಟೆಕ್ನಾಲಜಿ ಹಿಂದೆ ಓಡುತ್ತಾ ನಮ್ಮ ನೆಲದ ಶ್ರೇಷ್ಠಯತೆಯನ್ನು ಮರೆಯುತ್ತಿದ್ದೇವೆ. ದೇಶದ ಸಾಹಿತ್ಯಕ್ಕೆ ಕನ್ನಡದ ಕೊಡುಗೆ ಅಪಾರವಾಗಿದೆ. ಮನಸ್ಸಿನ ಸ್ವಾಸ್ಥ್ಯ ಕಾಪಾಡುವಂತ ಮತ್ತು ನಿಯಂತ್ರಿಸುವ ಶಕ್ತಿ ಸಾಹಿತ್ಯಕ್ಕೆಯಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮೆಯ ಸದಸ್ಯರಾದ ಡಾ. ಮಹಾದೇವ ಬಸರಕೋಡ ಹೇಳಿದರು.
ನಗರದ ಬಿ.ವಿ.ವಿ,ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ವಿಚಾರ ಸಂಕಿರಣ ಕೊಠಡಿಯಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಕನ್ನಡ ನುಡಿ ವೇದಿಕೆ ಕಾರ್ಯ ಚಟುವಟಿಕೆಗಳ ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.
ಕನ್ನಡದಲ್ಲಿರುವ ವಚನ, ದಾಸ, ಹಾಗೂ ಜನಪದ ಸಾಹಿತ್ಯ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದೆ. ಪಂಪ, ರನ್ನ, ಕುಮಾರವ್ಯಾಸರು ತಮ್ಮ ಸಾಹಿತ್ಯದ ಮೂಲಕ ಮನುಷ್ಯನ ನಿಜವಾದ ಗುಣಸ್ವಭಾವ ಬಗ್ಗೆ ವಿವರಿಸಿದ್ದಾರೆ. ಇಂತಹ ಸಮಾಜದಲ್ಲಿ ನಾವು ಇಂದು ಹಣ ಸಂಪಾದನೆಯೇ ಶ್ರೇಷ್ಠವೆಂದು ತಿಳಿದು ನಮ್ಮಲ್ಲಿರುವ ಮಾನವೀಯತೆನ್ನು ಮರೆತು ಜೀವನಕ್ಕೆ ನಿಜವಾಗಿ ಬೇಕಾದದ್ದನ್ನು ಬಿಟ್ಟು ಬೇಡವಾಗಿರುವುದರ ಹಿಂದೆ ಹೋಗುತ್ತಿದ್ದೇವೆ. ಅಲ್ಲದೆ ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಇದನ್ನು ತಡೆಯಲು ಮತ್ತು ಸಮಾಜವನ್ನು ತಿದ್ದುವಂತಹ ಸಾಮರ್ಥ್ಯ ಸಾಹಿತ್ಯಕ್ಕೆಯಿದೆ ಎಂದರು.
ಪ್ರಾಚಾರ್ಯಎಸ್. ಆರ್. ಮೂಗನೂರಮಠ ಮಾತನಾಡಿ ಕವಿತ್ವ ಮತ್ತು ಸ್ವಹೃದಯ ಎರಡು ಒಂದೇ ವೀಣೆಯಂತೆ. ಕನ್ನಡ ಸಾಹಿತ್ಯದಲ್ಲಿ ಬೇರೆ ವಿಷಯದವರ ಕೂಡುಗೆಯೂ ಇದೆ. ಪಾರಿಭಾಷಿಕ ಪದಗಳ ಸಂಗ್ರಹ ಕಡಿಮೆಯಾಗಿದೆ. ಸಂಸ್ಕೃತಿ ಎನ್ನುವುದು ಕಠಿಣ ಭಾಷೆಯಾಗಿತ್ತು. ಜಗತ್ತು ಬದಲಾವಣೆಯಗವೇಕೆಂದರೆ ಅದು ಸಾಹಿತ್ಯದ ಸಹಾಯದಿಂದ. ಸಾಹಿತ್ಯವನ್ನು ಕಣ್ಣುಗಳಿಂದ ಅಷ್ಟೇ ಅಲ್ಲಾ ಮೆದುಳಿನಿಂದ ಸಹ ಓದುದುವುದು ಅವಶ್ಯಕ ಇದರಿಂದ ಹ್ಯಾಪಿನೆಸ್ ಹಾರ್ಮೋನ್ ಬಿಡುಗಡೆಯಗುತ್ತದೆ. ಒದುವುದು ಅಮುಲು ಇದ್ದಂತೆ ಎಂದರು.
ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ವೀಣಾ ಕಲ್ಮಠ, ಪ್ರಾಧ್ಯಾಪಕರಾದ ಡಾ. ಬಸವರಾಜ ಕುಂಬಾರ, ಡಾ.ಎಸ್.ಡಿ.ಕೆಂಗಲಗುತ್ತಿ, ಶ್ರೀಹರಿ ದೂಫದ ಸೇರಿದಂತೆ ಬೋಧಕ -ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 