ಮೇ 28 ರಂದು ಭೂತಾನ್ನಲ್ಲಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಅರ್ಚನಾ ಅಥಣಿ ಭಾಗಿ
Literary scholar Dr. Archana Athani to participate in cultural program to be held in Bhutan on May 2
ಕಾಗವಾಡ 27 : ಮೇ 28 ರಂದು ಭೂತಾನ್ ದೇಶದ ರಾಜಧಾನಿ ಥಿಂಪುನ ಪೆಜೊಮ್ ಸಭಾಂಗಣದಲ್ಲಿ ಅಂತಾರಾಷ್ರ್ಟೀಯ ಸಾಂಸ್ಕೃತಿಕ ಉತ್ಸವ ವತಿಯಿಂದ ಹಮ್ಮಿಕೊಂಡಿರುವ 54ನೇ ಅಂತಾರಾಷ್ರ್ಟೀಯ ಸಾಂಸ್ಕೃತಿಕ ಫೆಸ್ಟ್ ಕಾರ್ಯಕ್ರಮದಲ್ಲಿ ಹಲವಾರು ದಿಗ್ಗಜರೊಂದಿಗೆ ಅಥಣಿ ತಾಲೂಕಿನ ರಡ್ಡೇರಹಟ್ಟಿ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕಿ ಡಾ. ಅರ್ಚನಾ ಅಥಣಿ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲಿದ್ದಾರೆ. ಭೂತಾನ್ನ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಇಂಡಿಯಾ ಹಾಗೂ ಫ್ರೆಂಡ್ಸ್ಶಿಫ್ ಕ್ಲಬ್ ಭೂತಾನ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಲಿರುವ ಕಾರ್ಯಕ್ರಮವನ್ನು ಭೂತಾನಿನ ಸಂಸತ್ ಸದಸ್ಯ ಎಚ್.ಇ. ದಶೋ ಉಗೇನ್ ಲಾಮಾ ಉದ್ಘಾಟಿಸಲಿದ್ದಾರೆ.
ಭಾರತ ದೇಶದಿಂದ ಕರ್ನಾಟಕದ ಪ್ರತಿನಿಧಿಯಾಗಿ ಸಾಹಿತಿ ಡಾ. ಅರ್ಚನಾ ಅಥಣಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅನೇಕರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಹಿತಿ ಡಾ. ಅರ್ಚನಾ ಅಥಣಿಯವರು ಕನ್ನಡ ಸಾಹಿತ್ಯ ಸಂಸಕೃತಿ ಪ್ರಸಾರ ಮಾಡಲು ವಿದೇಶಗಳ ಕನ್ನಡ ಸಂಘಟನೆಗಳ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಲ್ಡೀವ್ಸ್, ದುಬೈ, ಒಮಾನ್, ಶ್ರೀಲಂಕಾ, ಇಂಡೋನೇಷ್ಯಾ, ಸಿಂಗಪೂರ, ಥೈಲ್ಯಾಂಡ್, ವಿಯೆಟ್ನಾಮ್, ಅಂಡಮಾನ್, ಲಕ್ಷದ್ವೀಪ ಸೇರಿದಂತೆ ಹಲವಾರು ದೇಶಗಳಲ್ಲಿ ಜರುಗಿರುವ ಅಂತಾರಾಷ್ರ್ಟೀಯ ಕನ್ನಡ ಸಂಸ್ಕೃತಿ ಉತ್ಸವಗಳಲ್ಲಿ ಪಾಲ್ಗೊಂಡು ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯ ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅಂತಾರಾಷ್ರ್ಟೀಯ ಸಮ್ಮೇಳನಗಳಲ್ಲಿ ಸಾಹಿತ್ಯ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ ಡಾ. ಅರ್ಚನಾ ಅಥಣಿ ಅವರು, ದೇಶ ವಿದೇಶಗಳಲ್ಲಿ ತಮ್ಮ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ, ತಮ್ಮ ಬರಹ, ಕವಿತೆಗಳ ಮೂಲಕ ಕನ್ನಡ ನಾಡಿನ ಮನೆ ಮಾತಾಗಿರುವುದು ಸಂತಸದ ಸಂಗತಿ. ಅವರು ಬೆಳಗಾವಿ ಜಿಲ್ಲೆಯಿಂದ ಏಕೈಕ ಕವಿಯತ್ರಿಯಾಗಿ ಆಯ್ಕೆಯಾಗಿದ್ದು ಜಿಲ್ಲೆಯಲ್ಲಿ ಸಾಹಿತ್ಯಾಭಿಮಾನಿಗಳಲ್ಲಿ ಹರ್ಷವನ್ನುಂಟು ಮಾಡಿದೆ.ಪೊಟೋ : ಡಾ. ಅರ್ಚನಾ ಅಥಣಿ ಚಿತ್ರ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 