ಪ್ರವಚನ ಕೇಳುವುದರಿಂದ ಬದುಕು ಸ್ವಾರ್ಥಕ: ಶಿವಾನಂದ ಶ್ರೀಗಳು

ಪ್ರವಚನ ಕೇಳುವುದರಿಂದ ಬದುಕು ಸ್ವಾರ್ಥಕ: ಶಿವಾನಂದ ಶ್ರೀಗಳು Listening to sermons makes life meaningful: Sivananda Sri

               ಇಂಡಿ 14:  ಮಾನವನ ಸ್ವಾರ್ಥಕ ಬದುಕಿಗೆ ಬೇಕಾಗುವ ಸಂಸ್ಕಾರ ಸಾಮರಸ್ಯ ಉತ್ತಮ ಆಚಾರ ವಿಚಾರ ಮೌಲ್ಯಗಳು ಶ್ರೀಗಳ ಪ್ರವಚನದಲ್ಲಿದ್ದು ಅವರ ಪ್ರವಚನ ಮನುಕುಲಕ್ಕೆ ದಾರೀದೀಪವಾಗಿದ್ದವು ಎಂದು ನಾದ ಗ್ರಾಮದ ಶಿವಾನಂದ ಶಿವಾಚಾರ್ಯರು ಹೇಳಿದರು. ಅವರು ಪಟ್ಟಣದ ಶಾಂತೇಶ್ವರ ಸಂಸ್ಥೆಯ ಜಿ.ಆರ್‌.ಗಾಂಧಿ ಮಹಾವಿದ್ಯಾಲಯದ ಆವರಣದಲ್ಲಿ ಅಮೃತಾನಂದ ಶ್ರೀಗಳ 15 ದಿನಗಳ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮನುಷ್ಯಹ ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕಬೇಕು ಎಂಬುದನ್ನು ಸಿದ್ದೇಶ್ವರ ಶ್ರೀಗಳು ತೋರಿಸಿಕೊಟ್ಟಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಪ್ರವಚನ ನೀಡುತ್ತಿರುವ ಅಮೃತಾನಂದ ಶ್ರೀಗಳ ಕಾರ್ಯ ಪ್ರವಂಶಿಸಿದರು ಎಂದರು.

             ಜೈನಾಪುರದ ರೇಣುಕಾ ಶಿವಾಚಾರ್ಯರು ಮಾತನಾಡಿ, ಸತ್ಯ ದರ್ಶನಗಳ ಪಾರಂಪರಿಕ ಹಾದಿಯನ್ನು ಹುಟ್ಟು ಹಾಕಿ ಜನರನ್ನು ಆಧ್ಯಾತ್ಮಿಕತೆಯ ಕಡೆಗೆ ಪಯಣಿಸಲು ದಾರಿಯನ್ನು ನಿರ್ಮಿಸಿ ತಾವು ಸಹ ಆಧ್ಯಾತ್ಮಿಕತೆಯ ಮೇರು ಗಿರಿ ಏರಿದವರು ಸಿದ್ದೇಶ್ವರ ಶ್ರೀಗಳು. ಅವರ ದಾರಿಯಲ್ಲಿ ಸಾಗುತ್ತಿರುವ ಅಮೃತಾನಂದ ಶ್ರೀಗಳ ಅಮೃತವಾಣಿ ನಮಗೆ ದೊರೆಯುರುವುದು ಇಂಡಿಯ ಜನತೆಯ ಪುಣ್ಯ ಎಂದರು.ಇಂಡಿಯ ಓಂಕಾರ್ ಆಶ್ರಮ ಮಠದ ಸ್ವರುಪಾನಂದ ಶ್ರೀಗಳು, ಆಳೂರ ಸಿದ್ಧಾರೂಡ ಮಠದ ಶಂಕರಾನಂದ ಶ್ರೀಗಳು, ಐರಸಂಗದ ಮಲ್ಲಿಕಾರ್ಜುನ ಶಿವಾಚಾರ್ಯರು, ಹೊನವಾಡದ ಬಾಬು ಶರಣರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು ವಹಿಸಿದರು. ಸಿದ್ದಲಿಂಗ ಹಂಜಗಿ, ಧನರಜ ಮುಜಗೊಂಡ, ದೇವೇಂದ್ರ ಕುಂಬಾರ, ಆನಂದ್ ಹುಣಸಗಿ ಮಾತನಾಡಿದರು. ಪ್ರವಚನ ಸಮಿತಿಯ ಕಾಸುಗೌಡ ಬಿರಾದಾರ, ಜಗದೀಶ್ ಛತ್ರಿ, ಶ್ರೀಶೈಲ ಸಣ್ಣಕ್ಕಿ, ಅನಂತ ಜೈನ, ವಿ.ಎಚ್‌.ಬಿರಾದಾರ, ಶ್ರೀಶೈಲ ಮುಳಜಿ, ಅನಿಲ ಜಮಾದಾರ, ಮಹೇಸ ಹೂಗಾರ, ಸಿದ್ದು ಲಾಳಸಂಗಿ, ವಿಜು ರಾಠೋಡ, ನೀಲಕಂಠಗೌಡ ಪಾಟೀಲ ಸೇರಿದಂತೆ ಅನೇಕರಿದ್ದರು.