ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿ: ಶ್ರೀಗಳು
Listening to Purana discourse brings peace to the mind: Sri
ಕಂಪಿ 27 : ಇತ್ತಿಚಿನ ಒತ್ತಡ ಜೀವನದಲ್ಲಿ ಪುರಾಣ ಪ್ರವಚನ ಕೇಳುವುದರಿಂದ ಮನಸ್ಸಿಗೆ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯ ಎಂದು. ಬುಕ್ಕಸಾಗರ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶ್ರೀಗಳು ಹೇಳಿದರು.
ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಆವರಣದಲ್ಲಿ ಶ್ರಾವಣಮಾಸದ ಅಂಗವಾಗಿ ಒಂದು ತಿಂಗಳಕಾಲ ಆಯೋಜಿಸಿರುವ ಶ್ರಾವಣ ಮಾಸದ ಪುರಾಣ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿ ತಾಯಿಂದಿರು ಮಕ್ಕಳ ಕೈಯಲ್ಲಿ ಮೋಬೈಲ್ ಕೊಡುವ ಬದಲು ವಚನಗಳ ಪುಸ್ತಕ ಪುರಾಣ ಪುಸ್ತಕಗಳನ್ನು ಕೂಡಿ ದೈನಂದಿನ ಜೀವನದಲ್ಲಿ ಮಾನಸಿಕ, ದೈಹಿಕ ನೆಮ್ಮದಿಗೆ ಹಾಗೂ ಶಾಂತಿಗೆ ಧಾರ್ಮಿಕ ಆಚರಣೆಗಳು ಅಗತ್ಯವಾಗಿವೆ, ಹಿರಿಯರು ಹಿಂದುಗಳ ಪವಿತ್ರ ಹಬ್ಬಗಳಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನವನ್ನು ನೀಡಿದ್ದು, ಒಂದು ತಿಂಗಳ ಕಾಲ ಪುರಾಣ ಕೇಳಲು ಮುಂದಾಗಬೇಕು ಎಂದರು ವೀರಶೈವ ಸಮಾಜದ.ಮುಖಂಡ.ಹೇಮಯ್ಯಸ್ವಾಮಿ.ಮಾತನಾಡಿ.ವಿದ್ಯಾಭ್ಯಾಸಮಾಡುತ್ತಿರುವವಿದ್ಯಾರ್ಥಿಸಂಸ್ಕೃತ,ವೈದಿಕ, ಜ್ಯೋತಿಷ್ಯ ಜೊತೆಗೆ ಸಂಗೀತ ಹಾಗೂ ವಚನ ಸಾಹಿತ್ಯವನ್ನು ಬೋಧಿಸುವಲ್ಲಿ ಮುಂದಾಗಬೇಕು ಎಂದರು.
ಶ್ರಾವಣಮಾಸದ ಒಂದು ತಿಂಗಳ ಕಾಲ ಮಹಾಮಹಿಮ ಪವಾಡ ಪುರುಷ ಕಲಬುರಗಿ ಶರಣಬಸವೇಶ್ವರರ ಪುರಾಣ ಪ್ರವಚನ ನಡೆಯಲಿದ್ದು ಪಾಠಶಾಲೆಯ ವಿಶ್ರಾಂತ ಪ್ರಾಚಾರ್ಯ ಎಂ.ಎಸ್.ಶಶೀಧರ ಶಾಸ್ತ್ರಿ ಕಲ್ಯಾಣಚೌಕಿ ಮಠದ ಬಸವರಾಜಶಾಸ್ತ್ರಿ ಡಾ.ಜಗನ್ನಾಥ ಹಿರೇಮಠ ಕಾರ್ಯಕ್ರಮದಲ್ಲಿ ಪಾಠಶಾಲೆಯ ಪದಾಧಿಕಾರಿಗಳಾದ ಇಟಗಿ ಬಸವರಾಜಗೌಡ, ಅಲಬನೂರು ಬಸವರಾಜ, ಗಂಡಿ ಗಣೇಶ್, ಟಿ.ಸುರೇಶಗೌಡ, ಅರವಿ ಅಮರೇಶಗೌಡ, ಡಾ.ಜಗನ್ನಾಥ, ಗೌಳೇರು ಶೇಖರಪ್ಪ ಅಳ್ಳಿ ನಾಗರಾಜ, ಕೋರಿ ಶೆಟ್ರು ಸಣ್ಣ ಶಿವುಶರಣ, ಹುಲಿಹೈದರ ಅಮರೇಶ್, ಎಂ.ವಿಜಯಕುಮಾರ್, ಕುಕನೂರು ಅಶೋಕ, ಸಜ್ಜನರ ಶರಣಪ್ಪ, ನಿವೃತ್ತ ಪ್ರಚಾರ್ಯಾ ಎಂ.ಎಸ್.ಶಶೀಧರ ಶಾಸ್ತ್ರಿಗಳು ಪ್ರಾಚಾರ್ಯ ಘನಮಠದಯ್ಯ ಶಾಸ್ತ್ರಿ, ವೀರಶೈವ ಸಮಾಜದ ಮುಖಂಡರಾದ ಅರವಿ ಬಸವನಗೌಡ, ಡಿ.ವೀರಪ್ಪ, ಕಲ್ಗುಡಿ ವಿಶ್ವನಾಥ್, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ಯಲಿಗಾರ ವೆಂಕಟರೆಡ್ಡಿ, ವೀರಶೈವ ಸಂಘದ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 