ಅಂತರಾಷ್ಟ್ರೀಯ ಲಾಯನ್ಸ್ ಕ್ಲಬ್ ಶಿಕ್ಷಕರ ದಿನಾಚರಣೆ
Lions Club International Teachers' Day Celebration
ಸಿಂದಗಿ 09: ಘನ ಸರಕಾರಗಳು ನಾಡಿನ ಹಿತದೃಷ್ಠಿಯಿಂದ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿದ್ದಾರೆ ಆದರೂ ಕೂಡಾ ಅಂತರಾಷ್ಟ್ರೀಯ ಲಾಯನ್ಸ್ ಸಂಸ್ಥೆಯು ನೂರು ವರ್ಷಗಳಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು ಗುರುತಿಸಿ ಅವರಿಗಾಗಿ ರಕ್ತದಾನ ಕೇಂದ್ರಗಳನ್ನು ಹಾಗೂ ಅಂಧತ್ವ ನಿವಾರಣೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾದದು ಎಂದು ಗೋವಾ ್ಘ ಕರ್ನಾಟಕ ಅಂತರಾಷ್ಟ್ರೀಯ ಲಾಯನ್ಸ್ ಸಂಸ್ಥೆ ಜಿಲ್ಲೆ 317 ಬಿ ಗವರ್ನರ್ ಪಿ.ಎಂ.ಜೆ.ಎಫ್ ಲಾಯನ್ ಜೈಮೋಲ್ ಜೆ.ನಾಯಕ ಹೇಳಿದರು.
ಪಟ್ಟಣದ ಪಿಇಎಸ್ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡ ಸಿಂದಗಿ ಲಾಯನ್ಸ್ ಕ್ಲಬ್ ಹಾಗೂ ಪಿಇಎಸ್ ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಲಾಯನ್ಸ್ ಕ್ಲಬ್ 317 ಬಿ ಜಿಲ್ಲಾ ಗವರ್ನರ ಸಂದರ್ಶನ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಲಾಯನ್ಸ್ ಸಂಸ್ಥೆಯು ಯಾವುದೇ ಆಸೆ, ಆಮಿಷ, ಅಧಿಕಾರಕ್ಕೊಳಗಾಗದೇ ಸಮಾಜ ಸೇವೆಯನ್ನು ಮಾಡುತ್ತ ಬಂದಿದೆ. ಸಿಂದಗಿ ಲಾಯನ್ಸ್ ಕ್ಲಬಿನ ಕಾರ್ಯವೈಖರಿಗಳನ್ನು ಪ್ರಶಂಸಿದರಲ್ಲದೇ, ಪ್ರಸಕ್ತಸಾಲಿನಲ್ಲಿ ಜಿಲ್ಲೆ 317 ಬಿ 50ನೇ ಸುವರ್ಣ ಮಹೋತ್ಸವ ಆಚರಿಸುತ್ತಿರುವುದರಿಂದ ವನಮಹೋತ್ಸವ, ಡ್ರಗ್ಸ್, ಕ್ಯಾನ್ಸ್‌ರ್ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಲಾಯನ್ಸ್ ಸದಸ್ಯರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಲಾಯನ್ಸ್ ಕ್ಲಬ್‌ಗೆ ಹೊಸದಾಗಿ ಸದಸ್ಯರಾದ ಡಾ. ಸಿದ್ದರಾಮ ಚಿಂಚೋಳ್ಳಿ ದಂಪತಿಗಳು, ಉದ್ಯಮಿದಾರರಾದ ಮುತ್ತು ಮುಂಡೇವಾಡಗಿ, ಉಮೇಶ ಜೋಗೂರ, ಪ್ರಾಚಾರ್ಯ ವ್ಹಿ.ಡಿ.ಪಾಟೀಲ ಅವರನ್ನು ಸದಸ್ಯರಾಗಲು ಒಪ್ಪಿಗೆ ಸೂಚಿಸಿ ಪ್ರತಿಜ್ಞಾವಿಧಿಸಿ ಭೋಧಿಸಿ ಸದಸ್ಯತ್ವ ನೀಡಿದರು. ಅಲ್ಲದೇ ಆದರ್ಶ ಶಿಕ್ಷಕರಾದ ಡಾ. ಅರವಿಂದ ಮನಗೂಳಿ, ಡಾ. ಬಿ.ಜಿ.ಪಾಟೀಲ, ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ, ಶಿಕ್ಷಕರಾದ ಎಸ್.ಎಸ್.ಗುಮಶೆಟ್ಟಿ, ವಿಜಯಕುಮಾರ ಬೆಕಿನಾಳ, ಎಸ್.ಎಸ್.ಅವಟಿ, ಎನ್.ಎಸ್.ರಜಪೂತ, ಎಸ್.ಎಸ್.ರಾಠೋಡ, ಆರ್.ಎಸ್.ಗೋಟ್ಯಾಳ, ಎಂ.ಸಿ.ನಡಗೇರಿ, ಶ್ರೀಮತಿ ಗೀತಾ ಅಥಣಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿಯನ್ನು ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್ ಲಾಯನ್ ಜೈಮೋಲ್ ಜೆ.ನಾಯಕ, ಪಿ.ಎಂ.ಜೆ.ಎಫ್ ಜಿಲ್ಲಾ ಕ್ಯಾಬಿನೆಟ್ ಸೆಕ್ಟ್ರೇಟರಿ ಲಾಯನ್ ಡಾ. ಕೀರ್ತಿ ಜೆ ನಾಯಕ ನೀಡಿ ಗೌರವಿಸಿದರು.
ಲಾಯನ್ಸ್ ಕ್ಲಬ್ ನೂತನ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಶಿಕ್ಷಕರಲ್ಲಿ ಜ್ಞಾನದ ಹಸಿವು ಎಂದು ಕಡಿಮೆಯಾಗಬಾರದು. ವಿದ್ಯಾರ್ಥಿಗಳನ್ನು ಮೊದಲು ಮಾನವನಾಗಿ ಪರಿವರ್ತಿಸುವ ಸದ್ಗುಣಗಳನ್ನು ಅವರಲ್ಲಿ ಬಿತ್ತಬೇಕು. ಅಲ್ಲದೇ ಪ್ರತಿಭೆಗಳನ್ನು ಗುರುತಿಸಿ ವಿದ್ಯಾರ್ಥಿಗಳನ್ನು ಗೌರವಿಸುವ ಪಾತ್ರ ಶಿಕ್ಷಕರದ್ದಾಗಿದೆ. ಶಿಕ್ಷಕರು ತಮ್ಮ ಅನುಭವದ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕು ಎಂದರು.
ಮುಖ್ಯಅತಿಥಿಗಳಾಗಿ ಪಿಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಪಿ.ಕರ್ಜಗಿ ಮಾತನಾಡಿ, ಮೂರ್ಖರ ಸಂತೆಯಲ್ಲಿ ಬುದ್ಧಿವಂತರು ಮೌನವಾಗಿರವಾಗಬೇಕಾಗಿದೆ ಹೀಗಾಗಿ ಸಮಾಜದ ಸ್ವಾಸ್ಥ್ಯ ಹದೆಗೆಟ್ಟಿದೆ. ಹಲವಾರು ಶಿಕ್ಷಕರು ಶಿಕ್ಷಕ ಹುದ್ಧೆಯ ಪಾವಿತ್ರ್ಯತೆಯನ್ನು ಕಡೆಗಣಿಸಿದ್ದರಿಂದ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಕಡಿಮೆಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಎಂಜೆಎಫ್ ಲಾಯನ್ ಕೆ.ಎಚ್.ಸೋಮಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಕ್ತ ವರ್ಷದ ಕಾರ್ಯಚಟುವಟಿಕೆಗಳ ವಿವರಗಳನ್ನು ಲಾಯನ್ ಶಾಂತೇಶ ದುರ್ಗಿ ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ಲಾಯನ್ ಐ.ಬಿ.ಬಿರಾದಾರ ನಿರೂಪಿಸಿದರು. ಲಾಯನ್ ಶಿವಶರಣ ಬೂದಿಹಾಳ, ಮಲ್ಲು ಹೊಸಮನಿ, ಗುರು ಕಡಣಿ ಧ್ವಜವಂದನೆ ಕಾರ್ಯಕ್ರಮ ನಡೆಸಿಕೊಟ್ಟರು. ಲಾಯನ್ ಸದಸ್ಯರಾದ ಎಸ್.ಬಿ.ಜಾಗಶೆಟ್ಟಿ, ಅಶೋಕ ವಾರದ, ಮಹಾದೇವ ಲೋಣಿ, ಎಸ್.ಎಚ್.ಜಾಧವ, ಡಾ. ಅಂಬರೀಶ ಬಿರಾದಾರ, ಪಿ.ಎಂ.ಮಡಿವಾಳರ ಎಚ್.ಎಂ.ಉತ್ನಾಳ, ಬಿ.ಜಿ.ಕಲಶೆಟ್ಟಿ, ಪ್ರಾಚಾರ್ಯ ಆರ್.ಬಿ.ಗೋಡಕರ್ ಸೇರಿದಂತೆ ಇನ್ನಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 