ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ
Lions Club Inauguration Ceremony

ಧಾರವಾಡ 26: ಲಯನ್ಸ್ ಕ್ಲಬ್ ಧಾರವಾಡದ 2025-26ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 28ರಂದು ಸಂಜೆ 6.30ಕ್ಕೆ ಹೊಟೇಲ್ ಮಂದಾರ ರೆಜೆನ್ಸಿಯಲ್ಲಿ ಆಯೋಜಿಸಲಾಗದೆ.
ಬೆಳಗಾವಿಯ ಮಾಜಿ ಜಿಲ್ಲಾ ಗವರ್ನರ್ ಮೋನಿಕಾ ಪಿ.ಸಾವಂತ ಪದಗ್ರಹಣ ನೆರವೇರಿಸುವರು. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ.ಮೀನಾ ಚಂದಾವರಕರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಾಜಿ ಜಿಲ್ಲಾ ಗವರ್ನರ್ ಹರ್ಷ ದೇಸಾಯಿ, 2025-26ನೆಯ ಸಾಲಿನ ರೀಜನ್ ಛೇರಮನ್ ಜ್ಞಾನೇಶ ನಾತು ಮತ್ತು ಜೋನ್ ಛೇರಮನ್ ಶೈಲಾ ಕರಗುದರಿ ಪಾಲ್ಗೊಳ್ಳುವರು. ಧಾರವಾಡ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಆಶ್ವಿನ್ ಕೊಪ್ಪಿಕರ, ಕಾರ್ಯದರ್ಶಿಯಾಗಿ ಪ್ರೊ.ಸುರೇಶ ಗುದಗನವರ, ಖಜಾಂಚಿಯಾಗಿ ಶ್ರೀಕಾಂತ ದೇವಗಿರಿ, ಸಹ ಕಾರ್ಯದರ್ಶಿಯಾಗಿ ಡಾ.ರಾಜಶ್ರೀ ಗುದಗನವರ, ಸಹ ಖಜಾಂಚಿಯಾಗಿ ಚಂದ್ರಶೇಖರ ಭೈರ್ಪನವರ ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅದಿ ಕಾರ ವಹಿಸಿಕೊಳ್ಳುವರು. ಹಾಲಿ ಅಧ್ಯಕ್ಷ ಗುರುರಾಜ ಪಿಸೆ ಅಧ್ಯಕ್ಷತೆ ವಹಿಸುವರು ಎಂದು ಪದಗ್ರಹಣ ಸಮಾರಂಭದ ಛೇರಮನ್ ಗಿರಿಧರ ದೇಸಾಯಿ ತಿಳಿಸಿದ್ದಾರೆ.
ಕವಿತಾ ಅಂಗಡಿ, ಡಾ.ಅನಿರುದ್ಧ ಕುಲಕರ್ಣಿ, ನಮ್ರತಾ ಪಾಟೀಲ ಕ್ರಮವಾಗಿ ಮೊದಲ, ದ್ವೀತಿಯ, ತೃತೀಯ ಉಪಾಧ್ಯಕ್ಷರುಗಳಾಗಿ ಹಾಗೂ ಉಷ್ಮಾ ದೇಸಾಯಿ ಟೇಲ್ ಟ್ವಿಸ್ಟರ್ ಮತ್ತು ರಶ್ಮೀ ಭಾರದ್ವಾಜ ಲಯನ್ ಟೇಮರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಸಂತ ಭಟ್, ವಿದ್ಯಾಧರ ಅಂಗಡಿ, ಅನುಪಮಾ ಶೆಟಿ ್ಟ, ಡಾ.ಉಷಾ ಗದ್ದಗಿಮಠ, ಅಮೃತಾ ಜೋಶಿ, ಅರವಿಂದ ಹೆಬಸೂರ, ಶಕುಂತಲಾ ಕುಂದೂರ, ಮೀರಾ ರಾವ್, ವೃಷಭ ಕರೋಲೆ, ಡಾ.ಅಶ್ವಿನ್ ಕುಲಕರ್ಣಿ, ಅರತಿ ಕಮಲಾಪುರ ಸದಸ್ಯತ್ವ ಸಮಿತಿಗೆ, ಮಾರ್ಕೆಟಿಂಗ್ ಆಂಡ್ ಕಮ್ಯೂನಿಕೇಷನ್‌ಗೆ ಆನಂದ ಕಮಲಾಪುರ, ಎಲ್.ಸಿ.ಐ.ಎಫ್. ಗೆ ಭುಜಂಗ ಶೆಟ್ಟಿ ಮತ್ತು ಸೇವಾ ಸಮಿತಿಗೆ ಡಾ.ಕೆ.ವಿ.ಅಚ್ಯುತ ಅಧಿಕಾರ ವಹಿಸಿಕೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 