ಎಲ್ಲಾ ರಸಗೊಬ್ಬರಕ್ಕೂ ಲಿಂಕ್ ಮಾರಾಟ ರೈತರಿಗೆ ಹೊರೆ- ಬಸವರಾಜ ಹಿರೇಮನಿ

ಎಲ್ಲಾ ರಸಗೊಬ್ಬರಕ್ಕೂ ಲಿಂಕ್ ಮಾರಾಟ ರೈತರಿಗೆ ಹೊರೆ- ಬಸವರಾಜ ಹಿರೇಮನಿ  Link sale for all fertilizers is a burden for farmers - Basavaraja Hiremani

ಲಕ್ಷ್ಮೇಶ್ವರ"  22 : ಪಟ್ಟಣದ ಎಲ್ಲಾ ರಸಗೊಬ್ಬರ ಮಾರಾಟ ಅಂಗಡಿಗಳಲ್ಲಿ ರೈತರು ಖರೀದಿಸುವ ಎಲ್ಲಾ ರಸಗೊಬ್ಬರಕ್ಕೂ ಲಿಂಕ್ ಮಾರಾಟ ಮಾಡುತ್ತಾರೆ ಇದರಿಂದ ರೈತರಿಗೆ ಹೊರೆಯಾಗುತ್ತದೆ ಅದಕ್ಕಾಗಿ ರೈತರಿಗೆ ಉಪಯೋಗ ವಾಗದ ಲಿಂಕ್ ಮಾರಾಟ ಮಾಡುವುದನ್ನು ಕೈ ಬಿಡಬೇಕು ಇದರಿಂದ ರೈತರಿಗೆ ಆಗುತ್ತಿರುವ ಹೊರೆ ಕಡಿಮೆಯಾಗುತ್ತದೆ ಎಂದು ತಾಲೂಕಿನ ಕೆಲ ರೈತರಿದ ಕೇಳಿ ಬರುತ್ತಿದೆ ಅದಕ್ಕಾಗಿ ಸಂಬಂಧಿಸಿದ ಕೃಷಿ ಅಧಿಕಾರಿಗಳು ರೈತರಿಗೆ ಉಪಯೋಗ ವಾಗದ ಲಿಂಕ್ ಮಾರಾಟ ತಡೆಗಟ್ಟಬೇಕು ಹಾಗೇನಾದರೂ ಗೊಬ್ಬರದೊಂದಿಗೆ ಲಿಂಕ್ ಬಳಸಿದರೆ ರೈತರಿಗೆ ಆಗುವ ಲಾಭಗಳು ಇದ್ದರೆ ಅದರ ಬಗ್ಗೆ ರೈತರಿಗೆ ಕೃಷಿ ಇಲಾಖೆಯಿಂದ ಲಿಂಕ್ ಬಳಕೆಯಿಂದ ಆಗುವ ಹೊರೆ ಮತ್ತು ಲಾಭಗಳ ಬಗ್ಗೆ ತಾಲೂಕಿನ ಎಲ್ಲಾ ರೈತರಿಗೂ ಜಾಗೃತಿ ಮೂಡಿಸಬೇಕುಎಂದು ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸುರಾಜ್ ಹಿರೇಮನಿ ಅವರು ಕೃಷಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ