ಲಿಂಗಾಯತರು ಬಸವ ತತ್ವ ಪರಿಪಾಲನೆ ಮಾಡಬೇಕು: ಶ್ರೀಗಳು

ಲಿಂಗಾಯತರು ಬಸವ ತತ್ವ ಪರಿಪಾಲನೆ ಮಾಡಬೇಕು: ಶ್ರೀಗಳು  Lingayats should follow Basava Tatva: Sri

ಯಮಕನಮರಡಿ, 23 ; ಸ್ಥಳೀಯ ಸುಕ್ಷೇತ್ರ ಹುಣಸಿಕೊಳ್ಳ ಮಠದಲ್ಲಿ ಶ್ರವಣ ಮಾಸದ ಮುಕ್ತಾಯ ಸಮಾರಂಭ ಶ್ರೀಮಠದಲ್ಲಿ ಒಂದು ವಾರ ಪರ್ಯಂತ ಆಯೋಜಿಸಲಾಗಿದ್ದ ಶರಣರ ಚಿರಿತಾಮೃತ ಬೋಧಿ ಪ್ರವಚನ ಮುಕ್ತಾಯ ಮತ್ತು ಶ್ರಾವಣ ಮಾಸ ಮುಕ್ತಾಯ ಸಮಾರಂಭವು ದಿನಾಂಕ 23ರಂದು ಭಕ್ತಿ ಪೂರ್ವಕ ವಾಗಿ ಮುಕ್ತಾಯವಾಯಿತು ಕಾರ್ಯಕ್ರಮದ ದಿವ್ಯಸಾಹಿತ್ಯವನ್ನು ನವದೆಹಲಿ ಹಾಸನದ ಬೈಲೂರು ಮಹಾಂತ ಬಸವಲಿಂಗ ಮಹಾಸ್ವಾಮಿಗಳು ವಹಿಸಿ ಮಾತನಾಡುತ್ತಾ ಲಿಂಗಾಯತರಾದ ನಾವು ಬಸವ ತತ್ವ ಪರಿಪಾಲನೆ ಮಾಡಬೇಕು ಜೊತೆಗೆ ಎಲ್ಲರೂ ಲಿಂಗ ದಿಕ್ಷೆ ಪಡೆದುಕೊಳ್ಳಬೇಕು ಶ್ರೇಷ್ಠವಾದ ಧರ್ಮ ದಲ್ಲಿ ಜನಿಸಿದವರು ನಾವು ಲಿಂಗಾಯತ ಸಂಪ್ರದಾಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೂ ಸಹಿತ ಬಸವ ತತ್ವ ಲಿಂಗಪೂಜೆ ರೂಡಿಸಬೇಕು ಎಂದು ಹೇಳಿದರು. 

ಬೈಲವಾಡದ ವೃತ್ತಿ ಮಠದ ಶಂಕರ್ ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸುಕ್ಷೇತ್ರ ಶೂನ್ಯ ಸಂಪಾದನ ಉಳಿಸಿಕೊಳ್ಳ ಮಟ್ಟದ ಪೂಜ್ಯರಾದ ಸಿದ್ಧಬಸವ ದೇವರು ಮಾತನಾಡುತ್ತಾ 12ನೇ ಶತಮಾನದಲ್ಲಿ ಆಗಿ ಹೋದ ಶರಣರು ನಮಗೆ ದಾರೀದೀಪವಾಗಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ನಮಗೆ ನೀಡಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ ಆಗಿನ ಕಾಲದಲ್ಲಿ ಅಪಾರ ಶರಣರು ತಮ್ಮ ಕಾಯಕದೊಂದಿಗೆ ದಾಸೋಹಗಳನ್ನು ಮಾಡುತ್ತಿದ್ದರು ಎಂದು ಹೇಳಿದರು. 

ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ 1000 ಯುವಕ ಯುವತಿಯರಿಗೆ ಸಾಮೂಹಿಕ ಲಿಂಗ ದೀಕ್ಷೆ ನೀಡಲಾಯಿತು ಅದರಂತೆ ಲಿಂಗಾಯತ ಧರ್ಮದಲ್ಲಿ ಹುಟ್ಟಿ ಬಂದ ನಾವೆಲ್ಲರೂ ಲಿಂಗ ದೀಕ್ಷೆಯನ್ನು ಪಡೆದುಕೊಳ್ಳಬೇಕು ಅಲ್ಲದೇ ತಮ್ಮ ಪ್ರತಿಯೊಂದು ಮನೆಗಳಲ್ಲಿ ಭಾವಚಿತ್ರಗಳನ್ನು ಅಳವಡಿಸಬೇಕು ಅಲ್ಲದೇ ತಮ್ಮ ತಮ್ಮ ಮಕ್ಕಳಿಗೂ ಸಹಿತ ಲಿಂಗ ದೀಕ್ಷೆ ಮಾಡಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಸುವರ್ಣ ತಾಯಿ ಗುಡಿಸವರು ಬಸವಣ್ಣನವರ ವಚನವನ್ನು ಸಾದರ ಪಡಿಸಿದರು. 

ಶಿವಶಂಕರ್ ಜುಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಅತಿಥಿ ಗಳನ್ನು ಸ್ವಾಗತಿಸಿದರು. ಸರಕಾರಿ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಎಸ್ ಆರ್ ತಬರೆ ನಿರೂಪಿಸಿ ವಂದಿಸಿದರು ಇದೇ ಸಂದರ್ಭದಲ್ಲಿ ದಾನಿಗಳಿಗೆ ಸನ್ಮಾನಿಸಲಾಯಿತು ಹಾಗೂ ಫೋಟೋಗ್ರಾಫಿ ಅಸೋಸಿಯೇಷನ್ ದವರು ತಮ್ಮ ಫೋಟೋಗ್ರಾಫಿ ದಿನವನ್ನು ಆಚರಿಸಿ ಶ್ರೀಗಳನ್ನು ಸನ್ಮಾನಿಸಿದರು.