ಒಂದೇ ವಾರದಲ್ಲಿ 2ಕಡೆ ಸಿಡಿಲು ಬಡೆದು ಎಮ್ಮೆ ಸಾವು ಅಪಾರ ಹಾನಿ
ದೇವರಹಿಪ್ಪರಗಿ 19: ಭಾನುವಾರ ರಾತ್ರಿ ಭೀಕರ ಮಳೆ ಮತ್ತು ಗುಡಗು ಸಿಡಿಲಿನಿಂದ ತಾಲೂಕಿನ ಮುಳಸಾವಳಗಿ ಗ್ರಾಮದ ಪರಸುರಾಮ ಅಪ್ಪಣ್ಣ ನಾವಿ ಅವರ ತೋಟದ ಮನೆಯಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ಸಿಡಿಲು ಬಡೆದು ಮನೆಯಲ್ಲಿರುವ ಸುಮಾರು 1ಲಕ್ಷ ರೂ ನಗದು,10ಗ್ರಾಂ ಚಿನ್ನ, ತಲಾ 2 ಕಟ್ಟ ಅಕ್ಕಿ, ಗೋಧಿ ಹಾಗೂ ಜೋಳ, ಬಾಂಡೆ ಸೇರಿದಂತೆ ಅಪಾರ ಪ್ರಮಾಣದ ಬಟ್ಟೆ ಸಾಮಾನುಗಳು ಸುಟ್ಟು ಕರಗಲಾಗಿದೆ.ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಜೀವ, ಜಾನುವಾರ ಹಾನಿ ಆಗಿರುವುದಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿರುತ್ತಾರೆ.
ಸ್ಥಳಕ್ಕೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಮಾಡಿದ್ದಾರೆ. ದಿ.16 ರಂದು ಗ್ರಾಮದಲ್ಲಿ ಸಿಡಿಲಿಗೆ ಎಮ್ಮೆ ಸಾವು. ತಾಲೂಕಿನ ಮುಳಸಾವಳಗಿ ಗ್ರಾಮದ ಉಮೇಶ ತಿಪ್ಪಣ್ಣ ಮೂಲಿಮನಿ ಅವರಿಗೆ ಸೇರಿದ ತೋಟದಲ್ಲಿ ಸಾಯಂಕಾಲ ಗುಡುಗು ಸಹಿತ ಮಳೆಗೆ ಮರದ ಕೆಳಗೆ ನಿಂತಿದ್ದ ಸುಮಾರು 60 ಸಾವಿರ ಮೌಲ್ಯದ ಎಮ್ಮೆಗೆ ಸಿಡಿಲು ಬಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಕುರಿತು ದೇವರಹಿಪ್ಪರಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಂದಾಯ,ಪಶು ಇಲಾಖೆಯ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.ಅಕಾಲಿಕ ಮಳೆ ಹಾಗೂ ಸಿಡಿಲಿಗೆ ಎಮ್ಮೆ ಹಾಗೂ ಮನೆ ಹಾಳಾಗಿದ್ದು ಸರ್ಕಾರ ಬಡವರಿಗೆ ಸಹಾಯಧನ ನೀಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ.