ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ
Lightning strikes coconut tree, sets it on fire
ಲೋಕದರ್ಶನ ವರದಿ
ಹೂವಿನಹಡಗಲಿ 22: ಪಟ್ಟಣ ಸೇರಿದಂತೆ ತಾಲ್ಲೂಕಿನ ನಾನಾ ಕಡೆಗಳಲ್ಲಿ ಮಂಗಳವಾರ ಸಂಜೆ ಗುಡುಗು, ಸಿಡಿಲು, ಗಾಳಿ, ಮಳೆ ಸುರಿದಿದ್ದು, ನದಿ ತೀರದ ಭತ್ತ,ಬಾಳೆ ಬೆಳೆಗಳಿಗೆ ಹಾನಿಯಾಗಿ ಲಕ್ಷಾಂತರ ನಷ್ಟವಾಗಿದೆ. ಪಟ್ಟಣದ 10ನೇ ವಾರ್ಡ್ ಸೊಪ್ಪಿನ ಕಾಳಮ್ಮ ಬಡಾವಣೆಯ ಜನವಸತಿಗೆ ಹೊಂದಿಕೊಂಡಿರುವ ಹುಚ್ಚಿ ಉಮಾಪತಿ ಅವರ ತೋಟದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದು ಅದು ಹೊತ್ತಿ ಉರಿಯಿತು. ಸಂಜೆ ಗುಡುಗು, ಮಿಂಚು, ಸಿಡಿಲ ಆರ್ಭಟದೊಂದಿಗೆ ಕೆಲಕಾಲ ತುಂತುರು ಮಳೆ ಸುರಿಯಿತು. ಈ ವೇಳೆ ತೆಂಗಿನ ಮರಕ್ಕೆ ಸಿಡಿಲು ಎರಗಿ ಬೆಂಕಿ ಹೊತ್ತಿಕೊಂಡಿತು. 30 ನಿಮಿಷ ಕಾಲ ಮರ ಹೊತ್ತಿ ಉರಿಯಿತು. ಕೆಲವರು ಆ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದರು.ಈ ವೇಳೆ ತುಂತುರು ಮಳೆ ಸುರಿದಿದ್ದರಿಂದ ಮರದಲ್ಲಿನ ಬೆಂಕಿ ನಂದಿತು. ಸಿಡಿಲ ಸದ್ದಿಗೆ ಬಡಾವಣೆ ನಿವಾಸಿಗಳು ಬೆಚ್ಚಿ ಬಿದ್ದರು.ಸೋಮವಾರ ರಾತ್ರಿಯೂ ಹರಪನಹಳ್ಳಿ ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆ ಸುರಿದಿತ್ತು. ತಾಲ್ಲೂಕಿನ ಹಲುವಾಗಲು ಗ್ರಾಮದ ಕೆಇಬಿ ಕಚೇರಿ ಬಳಿಯ ಬಡಾವಣೆಯಲ್ಲಿ ಹಾವೇರಿ ವಿರೂಪಾಕ್ಷಪ್ಪ ಎಂಬುವವರ ಮನೆಯ ತಗಡಿನ ಚಾವಣಿ ಗಾಳಿಗೆ ಹಾರಿ ಮುರಿದು ಬಿದ್ದಿದೆ.
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್
ಒಬ್ಬರಿಗೆ ಒಂದೇ ಹುದ್ದೆ ಕಾಂಗ್ರೆಸ್ ಪಕ್ಷದ ನಿಯಮದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ : ಸಚಿವ ಸತೀಶ ಜಾರಕಿಹೊಳಿ 