ಮಾನವೀಯತೆ ಇಲ್ಲದ ಬದುಕು ವ್ಯರ್ಥ: ಮಲ್ಲಿನಕೇರಿ ಶ್ರೀ
Life without humanity is a waste: Mallinakeri Sri
ಕುಕನೂರ 23: ಮನುಷ್ಯ ತನ್ನ ಜೀವನದಲ್ಲಿ ಪುರಾಣ ಪುಣ್ಯಕಥೆಗಳನ್ನ ಕೇಳಿಯು ಮಾನವೀಯತೆ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳದಿದ್ದಾರೆ ಅವನ ಬದುಕು ವ್ಯರ್ಥ ಎಂದು ಹಿರೇಮಲ್ಲಿನಕೇರಿಯ ಚನ್ನಬಸವ ಮಹಾಸ್ವಾಮಿಗಳು ಹೇಳಿದರು.
ಅವರು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಕಲ್ಮಠ ಸಹಕಾರದಿಂದ ನಡೆದ ದೇವಿ ಪುರಾಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಪುರಾಣಗಳು ನಮ್ಮೆಲ್ಲರ ಒಳತಿಗಾಗಿ ಇವೆ, ಧರ್ಮದ ದಾರಿಯಲ್ಲಿ ಸಾಗಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ, ಆಚಾರ ಮತ್ತು ವಿಚಾರಗಳು ಒಂದೇಯಾಗಬೇಕು, ಕಾಯಕವೇ ಕೈಲಾಸ ಎಂಬ ತತ್ವ ಅರಿದು ದುಡಿದು ಉಣ್ಣುವ ಸಂಸ್ಕೃತಿ ನಮ್ಮದು, ತಾಯಿ ಮತ್ತು ತಾಯಿ ನಾಡನ್ನ ಗೌರವಿಸುವ ಶ್ರೇಷ್ಠ ಪರಂಪರೆಯಲ್ಲಿ ಬಂದವರು ನಾವು ಎಂದರು. ನಂತರ ಮಾತನಾಡಿದ ಡಾ ಪ್ರಶಾಂತ ಕಲ್ಮಠ ಭಕ್ತರ ಸಹಕಾರವೇ ದೊಡ್ಡದು ನಮ್ಮ ಕಲ್ಮಠಕ್ಕೆ ತನ್ನದೇ ಆದ ಭವ್ಯ ಪರಂಪರೆಯಿದೆ ಆದರೆ ಕಾಲಘಟ್ಟದಲ್ಲಿ ಅದು ಮರೆಯಾಗಿದೆ ಅಷ್ಟೇ ಆದರೆ ಭಕ್ತರ ಮಾತ್ರ ಯಾವಗಲೂ ಧರ್ಮದ ಕಾರ್ಯಗಳಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ, ಅನ್ನದಾನೀಶ್ವರ ಮಠವು ನಮ್ಮೇಲ್ಲರ ಆರಾಧ್ಯ ಕೇಂದ್ರವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶ್ರೀಮತಿ ಕುಸುಮಾ ಶಂಭುಲಿಂಗಪ್ಪ ಜೋಳದ ಮಾತನಾಡಿ ವೀರಶೈವ ಲಿಂಗಾಯತ ಮಠಗಳು ಸರ್ವ ಜನರ ಕಲ್ಯಾಣಕ್ಕೆ ಇವೆ, ಪುರಾಣಗಳಲ್ಲಿ ಭಕ್ತರ ಭಾಗವಹಿಸುವಿಕೆ ಮುಖ್ಯ, ಪುರಾಣ ಕೇಳುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ಸ್ವಾಮೀಜಿ, ಶ್ರೀಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ, ವೀಣಾ ಕಲ್ಮಠ, ಗದಿಗೆಪ್ಪ ಪವಾಡಶೆಟ್ಟಿ, ವೀರಯ್ಯ ದಳಪತಿ, ಕಲ್ಲಪ್ಪ ಅಳವಂಡಿ, ಶರಣಪ್ಪ ಯತ್ನಟ್ಟಿ, ಗಂಗಮ್ಮ ಮಟ್ಟಿ, ಸುದಾ ಕಟಿಬಿ, ಆನಂದ ಮಡಿವಾಳರ, ಮೌಲ ಸಂಗಟಿ, ಪ್ರಶಾಂತ ಹೊಸಮಠ, ಸಂಗೀತ ಸೇವೆಯನ್ನ ಶಂಕ್ರಣ್ಣ ಹಾಲಕರೆ, ಚನ್ನಪ್ಪ ಹಾಲಕರೆ ಮತ್ತು ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 