ಧರ್ಮದ ಹಾದಿಯಲ್ಲಿ ನಡೆಯುವ ಮೂಲಕ ಬದುಕು ಹಸನಾಗಿಸಿಕೊಳ್ಳಬೇಕು : ಮುರಗೋಡ ನೀಲಕಂಠ ಸ್ವಾಮೀಜಿ
Life should be made beautiful by walking on the path of religion: Muragoda Neelakanta Swamiji
ಯರಗಟ್ಟಿ 03 : ಮಾನವನ ನೆಮ್ಮದಿ ಬದುಕಿಗೆ ಧರ್ಮ ಮತ್ತು ದೇವರು, ದೇವಾಲಯಗಳು, ಮಠ ಮಂದಿರಗಳು ತುಂಬಾ ಅವಶ್ಯಕ. ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ನಡೆಯುವ ಮೂಲಕ ಬದುಕು ಹಸನಾಗಿಸಿಕೊಳ್ಳಬೇಕು ಎಂದು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.ಸಮೀಪದ ತಲ್ಲೂರ ಗ್ರಾಮದ ತೊರಗಲ್ಲಮಠದಲ್ಲಿ ಅಧಿಕ ಮಾಸದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಧರ್ಮ ಮಾರ್ಗದಲ್ಲಿ ನಡೆದು ದೇವರನ್ನು ಭಯ ಭಕ್ತಿಯಿಂದ ಪೂಜಿಸುತ್ತಾ ಬದುಕಿನಲ್ಲಿ ನೆಮ್ಮದಿ ಕಂಡುಕೊಂಡಿದ್ದರು.
ಆದ್ದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೆ ಸಂಸ್ಕೃತಿ, ಸಂಸ್ಕಾರಗಳನ್ನು ಕಲಿಸಿಕೊಟ್ಟು ಸಮಾಜವನ್ನು ಕಟ್ಟುವ ಧರ್ಮ ದೇವರು, ಮಠಮಾನ್ಯಗಳನ್ನು ಗೌರವದಿಂದ ಕಾಣುವ ಮನೋಭಾವ ರೂಢಿಸಬೇಕಿದೆ ಎಂದು ಹೇಳಿದರು. ಸೊಗಲ ಅವಧೂತ ಚಿದಾನಂದ ಸ್ವಾಮೀಜಿ ಮಾತನಾಡಿ, ನಾವು ತೊರುವ ಭಕ್ತಿ ಸ್ವಚ್ಛ ಮನಸಿನಿಂದ ಕೂಡಿರಬೇಕು. ಅಂದಾಗ ಮಾತ್ರ ನಾವು ದೇವರ ಪ್ರೀತಿಗೆ ಪಾತ್ರರಾಗಲು ಸಾಧ್ಯ ಎಂದು ಹೇಳಿದರು. ಗ್ರಾಮಸ್ಥರಿಂದ ಶ್ರಿಗಳ ಸನ್ಮಾನ ಜರುಗಿತು. ತೊರಗಲ್ಲಮಠದ ದೀಪಕ ಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ವಿನಯಕುಮಾರ ದೇಸಾಯಿ, ನಿವೃತ್ತ ಪಂಚಾಯತ ಅಭಿವೃದ್ಧಿ ಅಧಿಕಾರಿ ವಿರುಪಾಕ್ಷ ಪೂಜೇರ, ಕರ್ನಾಟಕ ಗ್ರಾಮೀಣ ಬ್ಯಾಂಕ ವ್ಯವಸ್ಥಾಪಕ ಪಿ.ಕೊಟೇಶ್ವರಾವ, ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ, ಜಗದೀಶ ಹೊಸಮಠ, ಮಹಾಂತೇಶ ಮುನೆಪ್ಪನ್ನವರಮಠ, ಶಂಕರ ಬಡಿಗೇರ, ಸಿ.ವಿ.ಮಾಸ್ತಮರಡಿ, ಬಸವರಾಜ ಬಡಿಗೇರ, ಮಹಾಂತೇಶ ಯಡಳ್ಳಿ, ಬಸವಂತಪ್ಪ ಕರಿಕಟ್ಟಿ ಮತ್ತಿತರಿದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 