ಆಧ್ಯಾತ್ಮಿಕ ಬದುಕಿನಿಂದ ಜೀವನ ಸಾರ್ಥಕ: ಮಾಗಣಗೇರಿಶ್ರೀ
Life is meaningful through spiritual life: Maganagerishree
ತಾಳಿಕೋಟಿ 22: ಧರ್ಮ ಮನುಷ್ಯನನ್ನು ಅಜ್ಞಾನದ ಕತ್ತಲೆಯಿಂದ ಸೂಜ್ಞಾನದ ಬೆಳಕಿನೆಡೆಗೆ ತರುತ್ತದೆ ಆಧ್ಯಾತ್ಮಿಕ ಬದುಕಿನಿಂದಲೇ ಮನುಷ್ಯನಿಗೆ ಶಾಂತಿ ನೆಮ್ಮದಿ ಸಿಗಲು ಸಾಧ್ಯ ಎಂದು ಮಾಗಣಗೇರಿಯ ಷ.ಬ್ರ.ಡಾ.ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಸುಕ್ಷೇತ್ರ ಶಳ್ಳಗಿ ಗ್ರಾಮದಲ್ಲಿ ಬಸವಂತರಾಯ ಹಾಗೂ ಪರಮಣ್ಣ ಮುತ್ಯಾರವರ ಜಾತ್ರೋತ್ಸವ ಅಂಗವಾಗಿ ಸೋಮವಾರ ಸಂಜೆ ಹಮ್ಮಿಕೊಂಡ ಕಲ್ಬುರ್ಗಿಯ ಶರಣ ಬಸವೇಶ್ವರರ ಪುರಾಣ ಮಹಾಮಂಗಲೋತ್ಸವ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬಿಜೆಪಿ ಮುಖಂಡ ಬಸನಗೌಡ ಪಾಟೀಲ (ಯಡಿಯಾಪೂರ) ಮಾತನಾಡಿ ಪುರಾಣ ಪ್ರವಚನ ಆಲಿಸುವುದರಿಂದ ಬದುಕು ಪಾವನವಾಗುತ್ತದೆ. ಮಹಾಪುರುಷರ ಸಂತ ಶರಣರ ಬದುಕಿನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸೋಣ ಎಂದರು. ಯಾದಗಿರಿ ಜಿಲ್ಲಾ ರೈತ ಹೋರಾಟಗಾರ ಮಲ್ಲನಗೌಡ ಹಗರಟಗಿ ಮಾತನಾಡಿ ದೇಶಕ್ಕೆ ಅನ್ನ ನೀಡುವ ಅನ್ನದಾತನ ಸೇವೆಯನ್ನು ಸದಾ ಸ್ಮರಿಸುವ ಕಾರ್ಯ ಆಗಬೇಕು. ಇವತ್ತು ನಾವೆಲ್ಲರೂ ನಮ್ಮ ಮಕ್ಕಳನ್ನು ಇಂಜಿನಿಯರ್, ವೈದ್ಯರನ್ನಾಗಿ ಮಾಡಲು ಬಯಸುತ್ತೇವೆ ಆದರೆ ನಾವ್ಯಾರು ಅವರನ್ನು ರೈತನನ್ನಾಗಿ ಮಾಡಲು ಬಯಸುವುದಿಲ್ಲ ಕೃಷಿ ಕ್ಷೇತ್ರಕ್ಕೆ ಮಹತ್ವ ನೀಡುವ ಅಗತ್ಯ ಇದೆ ಎಂದರು.
ನಾವದಗಿ ಬ್ರಹನ್ಮಠದ ರಾಜಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಕೆ.ನಾಡಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಕಾಶಿರಾಯಗೌಡ ದೇಸಾಯಿ, ಸಣಕಪ್ಪ ಮುತ್ಯಾ ಬಂಡೆಪ್ಪನಹಳ್ಳಿ, ಪರಮಣ್ಣ ಶರಣರು, ಮುದಕಪ್ಪ ಪೂಜಾರಿ, ಪಂಚಾಕ್ಷರಿ ಮುತ್ಯಾ ಹಿರೇಮಠ, ಸಾಹೇಬಗೌಡ ಪಾಟೀಲ(ಲಕ್ಕುಂಡಿ), ಸಾಹೇಬಣ್ಣ ಆಲ್ಯಾಳ, ಬಸನಗೌಡ ಬಿರಾದಾರ, ಅಣ್ಣಪ್ಪಗೌಡ ನಾಡಗೌಡ, ಸುರೇಶಬಾಬುಗೌಡ ಬಿರಾದಾರ (ಪೀರಾಪೂರ), ಮಲಕೇಂದ್ರಾಯಗೌಡ ಪಾಟೀಲ, ಪ್ರಶಾಂತಗೌಡ ಪಾಟೀಲ, ಸಂಗನಗೌಡ ಪಾಟೀಲ(ಚಬನೂರ), ಸಿದ್ದನಗೌಡ ಪಾಟೀಲ(ಕರಿಭಾವಿ), ಸಂಗನಗೌಡ ಹೆಗರೆಡ್ಡಿ, ರಾಯಪ್ಪಗೌಡ ನೀರಲಗಿ ಮತ್ತಿತರರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 