ಗಿನ್ನಿಸ್ ದಾಖಲೆ ಸೇರಿದ ಭಾರತೀಯ ಜೀವ ವಿಮಾ ನಿಗಮ
Life Insurance Corporation of India enters Guinness World Records
ನವದೆಹಲಿ 24: ದಿನದ 24 ಗಂಟೆಯಲ್ಲಿ ಅತಿ ಹೆಚ್ಚು ಜೀವವಿಮಾ ಪಾಲಿಸಿ ನೋಂದಣಿ ಮಾಡಿಸುವ ಮೂಲಕ ಭಾರತೀಯ ಜೀವ ವಿಮಾ ನಿಗಮ (LIC) ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದೆ.
ಜ.
20ರಂದು ಒಂದೇ ದಿನದಲ್ಲಿ ನೋಂದಣಿಯಾದ ಪಾಲಿಸಿಗಳನ್ನು ಗಿನ್ನಿಸ್ ವಿಶ್ವ ದಾಖಲೆ ಪರಿಗಣಿಸಿದೆ ಎಂದು ಎಲ್‌ಐಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಜ.
20ರಂದು ಒಟ್ಟು 4,52,839 ಏಜೆಂಟರು 24 ಗಂಟೆಯೊಳಗೆ ದೇಶದಾದ್ಯಂತ 5,88,107 ಜೀವ ವಿಮೆಯನ್ನು ನೋಂದಾಯಿಸಿದ್ದಾರೆ. ಜಾಗತಿಕ ಜೀವ ವಿಮಾ ಕ್ಷೇತ್ರದಲ್ಲೇ ಇದೊಂದು ವಿಶಿಷ್ಟ ಸಾಧನೆ ಎಂದು ಗಿನ್ನಿಸ್ ಹೇಳಿದೆ.
‘ದೇಶವ್ಯಾಪಿ
ಇರುವ ನಮ್ಮ ಶ್ರಮಿಕ ಏಜೆಂಟರ ಕೌಶಲ, ನಿರಂತರ ಪರಿಶ್ರಮ ಹಾಗೂ ಬದ್ಧತೆಯಿಂದ ಇದು ಸಾಧ್ಯವಾಗಿದೆ. ಈ ಸಾಧನೆಯು ನಮ್ಮ
ಗ್ರಾಹಕರು ಮತ್ತು ಅವರ ಕುಟುಂಬದವರಿಗೆ ಅತ್ಯಗತ್ಯವಾದ ಹಣಕಾಸು ನೆರವು ನೀಡುವ ನಮ್ಮ ಬದ್ಧತೆಯ ಪ್ರತಿಫಲನವಾಗಿದೆ’ ಎಂದು ಎಲ್‌ಐಸಿ ಹೇಳಿದೆ.
‘ಜ.
20ರಂದು ‘ಮ್ಯಾಡ್ ಮಿಲಿಯನ್ ಡೇ’ ಅಡಿಯಲ್ಲಿ ಪ್ರತಿಯೊಬ್ಬ ಏಜೆಂಟ್ ಕನಿಷ್ಠ ಒಂದು ಪಾಲಿಸಿ ಮಾಡಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಅದರಂತೆ ನಮ್ಮ ಎಲ್ಲಾ ಗ್ರಾಹಕರು, ಏಜೆಂಟರು ಮತ್ತು ಸಂಸ್ಥೆಯ ನೌಕರರು ಇದನ್ನು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ’ ಎಂದು ಎಲ್‌ಐಸಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿದ್ಧಾರ್ಥ ಮೊಹಂತಿ ಹೇಳಿದ್ದಾರೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 