ಬುಡ್ಗ ಜಂಗಮ್ ಕಾಲೋನಿಯಲ್ಲಿ ಗ್ರಂಥಪಾಲಕರ ದಿನಾಚರಣೆ
Librarians' Day celebrated at Budga Jangam Colony
ಹೊಸಪೇಟೆ 12 : ಇಂದು ದಿನಾಂಕ : 12.08.2025 ರಂದು ಗ್ರಂಥಪಾಲಕರ ದಿನಾಚರಣೆ ಅಂಗವಾಗಿ ವಿಜಯನಗರ ಜಿಲ್ಲೆಯ, ಹೊಸಪೇಟೆ ನಗರದ ಬುಡ್ಗಜಂಗಮ್ ಕಾಲೋನಿಯ ಅಲೆಮಾರಿ ಗ್ರಂಥಾಲಯ ಕಾರ್ಯಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ಗ್ರಂಥಾಲಯ ಪಿತಾಮಹರಾದ “ ಪದ್ಮಶ್ರೀ ಡಾಽಽ ಎಸ್.ಆರ್.ರಂಗನಾಥನ್” ರವರ ಭಾವಚಿತ್ರಕ್ಕೆ ಮಾಲಾರೆ್ಣ ಮಾಡಿ ಪೂಜಾ ಕಾರ್ಯಕ್ರಮವು ನೆರವೇರಿಸಲಾಯಿತು.
ಈ ಕಾರ್ಯಕ್ರಮ ಉದ್ದೇಶಿಸಿ ವಿಮುಕ್ತ ಬುಡಕಟ್ಟುಗಳ ಜಿಲ್ಲಾಧ್ಯಕ್ಷರಾದ ಸಣ್ಣ ಮಾರೆಪ್ಪ ಅವರು ಮಾತನಾಡಿ ಅಲೆಮಾರಿಗಳ ಕಾಲೋನಿಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ 127 ಗ್ರಂಥಾಲಯಗಳೂ 2007-08ನೇ ಸಾಲಿನಲ್ಲಿ ಸರ್ಕಾರವು ಸ್ಥಾಪನೆ ಮಾಡಿದ್ದರಿಂದ ಅಲೆಮಾರಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಮತ್ತು ಅಲೆಮಾರು ಮಕ್ಕಳು ಹೆಚ್ಚು ಹೆಚ್ಚು ಜ್ಞಾನ ಸಂಪಾದಿಸಲು ಗ್ರಂಥಾಲಯದ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಮುಕ್ತ ಬುಕಟ್ಟುಗಳ ಒಕ್ಕೂದ ಉಪಾಧ್ಯಕ್ಷರಾದ ಶೇಖಪ್ಪ ಕಿನ್ನೂರಿ ಇವರ ಮಾತನಾಡಿ ನಮ್ಮ ಸಮಾಜದ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಅಲೆಮಾರಿ ಮಕ್ಕಳಿಗೆ ಗ್ರಂಥಾಲಯವು ಸದುಪಯೋಗವಾಗಿದೆ ಎಂದು ಹೇಳಿದರು. ಅಲೆಮಾರಿ ಗ್ರಂಥಾಲಯ ಮೇಲ್ವಿಚಾರಕರಾದ ಪಕ್ಕೀರ್ಪ ಬಾದಿಗಿ ಮಾತನಾಡಿ ಗ್ರಂಥಾಲಯ ಪಿತಾಮಹ ಡಾಽಽ ಎಸ್.ಆರ್.ರಂಗನಾಥ ಅವರ ವಿವರವಾದ ಮಾಹಿತಿ ನೀಡುತ್ತಾ ಅಲೆಮಾರಿ ಗ್ರಂಥಾಲಯಕ್ಕೆ ಹೆಚ್ಚಿನ ರೀತಿಯಲ್ಲಿ ಮಕ್ಕಳು ಸದಸ್ಯರು ಜ್ಞಾನಾರ್ಜನೆ ಪ್ರತಿದಿನ ಆಗಮಿಸಿ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಹೆಚ್ಚಿನ ಮಟ್ಟದಲ್ಲಿ ಸದಸ್ಯರನ್ನು ನೊಂದಣಿ ಮಾಡಿಸುವಂತೆ ಕರೆಕೊಟ್ಟರು.
ಈ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲಾ ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಣ್ಣ ಮಾರೆಪ್ಪ, ಉಪಾಧ್ಯಕ್ಷರಾದ ಶೇಖಪ್ಪ ಕಿನ್ನೂರಿ, ಅಲೆಮಾರಿ ಗ್ರಂಥಾಲಯ ಮೇಲ್ವಿಚಾರಕರಾದ ಪಕ್ಕೀರ್ಪ ಬಾದಿಗಿ, ಬುಡ್ಗಜಂಗಮ್ ಕಾಲೋನಿ ಮುಖಂಡರುಗಳಾದ ಡಿ.ಜಂಬಣ್ಣ, ಎ.ಸಣ್ಣ ಜಂಬಣ್ಣ, ವೈ.ಮಾರೆಪ್ಪ, ಸಣ್ಣ ಜಂಬಣ್ಣ, ಇತರರು ಭಾಗವಹಿಸಿ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ವಿಷಯವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಗೊಳಿಸಬೇಕೆಂದು ಕೋರಿಕೊಳ್ಳೂತ್ತಿದ್ದೇವೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 