ಮನುಷ್ಯ ಧರ್ಮದ ಹಾದಿಯಲ್ಲಿ ಸಾಗಿದಾಗ ಮಾತ್ರ ಮುಕ್ತಿ ಹೊಂದಲು ಸಾಧ್ಯ : ಸ್ವಾಮಿಜಿ
Liberation is possible only when man moves on the path of Dharma: Swamiji
ಕುಕನೂರ 27: ಮನುಷ್ಯ ತನ್ನ ಬದುಕಿನಲ್ಲಿ ಧರ್ಮದ ಹಾದಿಯಲ್ಲಿ ಸಾಗಿದಾಗ ಮಾತ್ರ ಮುಕ್ತಿ ಹೊಂದಲು ಸಾಧ್ಯ ಎಂದು ಯಲಬುರ್ಗಾ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಮಹಾಸ್ವಾಮಿಜಿ ಹೇಳಿದರು.
ಅವರು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಾಗದೇವರ, ಗಣೇಶ ಮತ್ತು ಲಕ್ಷ್ಮಿಯ ದೇವಿಯ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸಿ ಮಾತನಾಡುತ್ತಾ ಸಮಾಜದಲ್ಲಿ ಮನುಷ್ಯ ಎತ್ತರಕ್ಕೆ ಬೆಳೆಯಬೇಕಾದರೆ ಧರ್ಮ ಅವಶ್ಯ ಧರ್ಮದಿಂದ ನಡೆದರೆ ಮಾತ್ರ ದೊಡ್ಡವನಾಗಲು ಸಾಧ್ಯ ಎಂದರು. ನಂತರ ಮಾತನಾಡಿದ ಶ್ರೀಮಠದ ಆಡಳಿತಾಧಿಕಾರಿ ಸಂಗಮೇಶ ಕಲ್ಮಠ ದೇವರ ಧ್ಯಾನ ಪೂಜೆಗಳಿಂದ ಮನಸ್ಸಿನಲ್ಲಿ ಆನಂದ ಉಂಟಾಗುತ್ತದೆ, ಭಕ್ತಿಯಿಂದ ಮಾತ್ರ ಏನಾದರೂ ಸಾಧಿಸಲು ಸಾಧ್ಯ, ಗುರುವಿನ ಕೃಪೆಯಿಂದ ನಮ್ಮ ಜೀವನ ಸುಧಾರಿಸಲು ಸಾಧ್ಯವಾಗುತ್ತದೆ ಎಂದರು. ಗದಿಗೆಪ್ಪ ಪವಾಡಶೆಟ್ಟಿ ಮಾತನಾಡಿ ಶ್ರಾವಣ ಮಾಸ ಹಿಂದೂಗಳಿಗೆ ಶ್ರೇಷ್ಠವಾದ ಮಾಸ, ಈ ತಿಂಗಳಲ್ಲಿ ಪೂಜೆ ಪ್ರವಚನದಂತಹ ಧರ್ಮದ ಕಾರ್ಯಗಳಿಗೆ ಜನರು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಯಲಬುರ್ಗಾ ಪೂಜ್ಯರು ದೇವರ ಮೂರ್ತಿಗಳನ್ನ ಸ್ಥಾಪಿಸಿ ಪೂಜಾ ವಿಧಿ ವಿಧಾನ ನೆರವೇರಿಸಿದರು ನಂತರ ಭಕ್ತರಿಗೆ ಮಹಾದಾಸೋಹ ನಡೆಯಿತು.ಪೂಜ್ಯ ಮಹಾದೇವ ಸ್ವಾಮೀಜಿ, ಪ್ರಭುಶಿವಸಿಂಪರ, ಶಿವು ಯತ್ನಟ್ಟಿ, ನಾಗರಾಜ ಚರಂತಿಮಠ, ನಿರಂಜನ ಯತ್ನಟ್ಟಿ, ಈರಣ್ಣ ಶಿರೂರ, ಬಸವರಾಜ ಬೆದವಟ್ಟಿ, ಶ್ರೀಮತಿ ಉಮಾ ರೋಣದ, ಆನಂದ ಮಡಿವಾಳರ, ಸೋಮಣ್ಣ ಅರಕೇರಿ ಮತ್ತು ಇತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 