ತೀರ್ಪನ್ನು ಮುಕ್ತವಾಗಿ ಸ್ವಾಗತಿಸೋಣ: ಲಕ್ಷ್ಮಣ ಸವದಿ

ಬೆಂಗಳೂರು, ನ. 9 :     ಅಯೋಧ್ಯ ವಿವಾದ ಬಗೆಹರಿಸುವಲ್ಲಿ ಸುಪ್ರೀಂಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪನ್ನು ನಾವೆಲ್ಲ  ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ  ಸವದಿ ಕರೆ ನೀಡಿದ್ದಾರೆ. ನಮ್ಮಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಪವಿತ್ರ ಸ್ಥಾನವಿದೆ, ಅದರಂತೆ ಅಯೋಧ್ಯ ವಿಚಾರವಾಗಿಯೂ ಸುಪ್ರೀಂ ಕೋರ್ಟ್ ತೀರಾ  ವಿವೇಚನೆಯಿಂದ ವಿಚಾರಣೆ ನಡೆಸಿ ತೀಪು ನೀಡಿದೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ಎಲ್ಲಾ ಧರ್ಮಿಯರು ಸರ್ವಸಮ್ಮತವಾಗಿ ಈ ತೀರ್ಪನ್ನು ಸ್ವೀಕರಿಸುವ ಮೂಲಕ ಸಮಾಜದಲ್ಲಿಯ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.